ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಂಧನದಲ್ಲಿರುವ ನಟ ದರ್ಶನ್ & ಗ್ಯಾಂಗ್ ಅನ್ನು ನಿನ್ನೆ ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಿದ್ದರು. ದರ್ಶನ್ & ಗ್ಯಾಂಗ್ ಅನ್ನು ಮತ್ತೆ 5 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿ 24ನೇ ACMM ಆದೇಶ ಹೊರಡಿಸಿತ್ತು. ಈಗಾಗಲೇ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದ್ದು, ಇಂದು ಡಿ ಗ್ಯಾಂಗ್ನ್ನು ಮಹಜರ್ಗಾಗಿ ಮೈಸೂರಿಗೆ ಕರೆದೊಯ್ದುಲಾಗುತ್ತದೆ.
ಡಿ ಗ್ಯಾಂಗ್ನ್ನು ಟೈಟ್ ಸೆಕ್ಯೂರಿಟಿಯಲ್ಲಿ ಕರೆದೊಯ್ಯಲು ಸಿದ್ಧತೆ ನಡೆದಿದೆ. ದರ್ಶನ್ ಫಾರ್ಮ್ ಹೌಸ್, ಮೈಸೂರಿನ ಮನೆಯಲ್ಲಿ ಪೊಲೀಸರು ಮಹಜರ್ ಮಾಡಲಿದ್ದಾರೆ. ಮಹಜರ್ ಮಾಡಿ ಪೊಲೀಸರು ಕೆಲವು ಮಾಹಿತಿ ಕಲೆ ಹಾಕಲಿದ್ದಾರೆ. ಪೊಲೀಸರು ರೇಣುಕಾಸ್ವಾಮಿ ಕೊಲೆ ಸಂಬಂಧ ಮಹತ್ವದ ಸಾಕ್ಷಿ ಸಂಗ್ರಹಿಸ್ತಿದ್ದು, ACP ಚಂದನ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
ರೇಣುಕಾಸ್ವಾಮಿ ಕೊಲೆ ಸಂಬಂಧವಾಗಿ ಫಾರ್ಮ್ಹೌಸ್, ತೋಟದ ಮನೆಯಲ್ಲಿ ಮೀಟಿಂಗ್ ಮಾಡಿದ್ದ ಮಾಹಿತಿ ಲಭ್ಯವಾಗಿದೆ. ಹಾಗಾಗಿ ಇಂದು ಅಥವಾ ನಾಳೆ ಮೈಸೂರಿಗೆ ಡಿ ಗ್ಯಾಂಗ್ನ್ನು ಕರೆದೊಯ್ಯಲು ತಯಾರಿ ನಡೆಯುತ್ತಿದೆ.
ಇದನ್ನೂ ಓದಿ : ಗಾನ ಗಂಧರ್ವ ಡಾ. ಎಸ್ ಪಿ ಬಾಲಸುಬ್ರಹ್ಮಣ್ಯಂ ಪುತ್ಥಳಿ ಅನಾವರಣ..!