Download Our App

Follow us

Home » ಜಿಲ್ಲೆ » ಡಿ ಬಾಸ್​ ಬೇಡ – ಬೈಕ್​ಗಳ ಮೇಲೆ ಅಂಟಿಸಿರೋ ಸ್ಟಿಕ್ಕರ್​ ಕಿತ್ತೆಸೆದ ಅಭಿಮಾನಿಗಳು..!

ಡಿ ಬಾಸ್​ ಬೇಡ – ಬೈಕ್​ಗಳ ಮೇಲೆ ಅಂಟಿಸಿರೋ ಸ್ಟಿಕ್ಕರ್​ ಕಿತ್ತೆಸೆದ ಅಭಿಮಾನಿಗಳು..!

ಚಿತ್ರದುರ್ಗ : ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್​ಗೆ ಇಂದು ಶಿಕ್ಷೆಯಾಗುವ ಸಾಧ್ಯತೆ ಇದೆ. ಈ ಬೆನ್ನಲ್ಲೇ ಹತ್ಯೆ ಕೇಸಲ್ಲಿ ನಟ ದರ್ಶನ್ ಕರಾಳ ಮುಖ ಬಯಲಾಗಿರುವ ಹಿನ್ನೆಲೆ, ನೆಚ್ಚಿನ ನಟನನ್ನು ಮೆಚ್ಚಿಕೊಂಡಿದ್ದ ಅಭಿಮಾನಿಗಳು ​ತಿರುಗಿಬಿದ್ದಿದ್ದಾರೆ. ದರ್ಶನ್​ ಮಾಡಿರುವ ಕೃತ್ಯ ಬಯಲಾಗುತ್ತಿದ್ದಂತೆಯೇ ಡಿ ಬಾಸ್ ಫ್ಯಾನ್ಸ್​ ತಮ್ಮ ವಾಹನದ ಮೇಲಿರುವ ಸ್ಟಿಕ್ಕರ್ ಕಿತ್ತುಹಾಕುವ ಮೂಲಕ ಈ ಹತ್ಯೆಯನ್ನು ಖಂಡಿಸಿದ್ದಾರೆ.

ಅಭಿಮಾನಿಗಳು ತಮ್ಮ ವಾಹನಗಳಿಗೆ ಅಂಟಿಸಿರುವ ರೇಡಿಯಂ ಸ್ಟಿಕ್ಕರನ್ನು ಚಾಕುವಿನಿಂದ ಸ್ಕ್ರ್ಯಾಚ್ ಮಾಡಿ ತೆಗೆದು ಹಾಕುತ್ತಿದ್ದಾರೆ. ದರ್ಶನ್ ಹೆಸರು ಹಾಕಿಕೊಂಡು ಬೈಕ್ ಓಡಿಸೋಕೆ ಅಭಿಮಾನಿಗಳಲ್ಲಿ ಬೇಸರ ಮೂಡಿದ್ದು, ಡಿ ಬಾಸ್ ಹೆಸರು ನಮ್ಮ ಬೈಕ್​ಗಳಲ್ಲಿ ಬೇಡ ಎಂದು ಅಭಿಮಾನಿಗಳು ತೆಗೆದು ಹಾಕುತ್ತಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕರ್ನಾಟಕದಲ್ಲಿ ನಟ ದರ್ಶನ್ ಮೇಲಿನ ಅಭಿಮಾನಕ್ಕಾಗಿ ಬೈಕ್, ಕಾರ್​ಗಳ ಮೇಲೆ ಅಭಿಮಾನಿಗಳು ಡಿ ಬಾಸ್ ಸ್ಟಿಕ್ಕರ್ ಅಂಟಿಸುತ್ತಿದ್ದರು. ಆದರೀಗ ರೇಣುಕಾಸ್ವಾಮಿ ಭೀಕರ ಹತ್ಯೆಯ ಹಿಂದಿನ ಕೈಗಳು ಯಾರು ಎಂಬ ಸಂಗತಿ ಬಯಲಾದಂತೆ ಫ್ಯಾನ್ಸ್ ತಮ್ಮ​ ವಾಹನದ ಮೇಲಿರುವ “ಡಿ ಬಾಸ್” ಸ್ಟಿಕ್ಕರ್​ ಕಿತ್ತು ಹಾಕುತ್ತಿದ್ದಾರೆ.

ಇದನ್ನೂ ಓದಿ : ದರ್ಶನ್ ಕಂಡರೆ ಚಲನಚಿತ್ರ ವಾಣಿಜ್ಯ ಮಂಡಳಿ ಹೆದರುತ್ತಿದೆಯೇ? ಈ ಸ್ಟೋರಿ ಓದಿ..!

 

 

 

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here