ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿ ಪರಪ್ಪನ ಅಗ್ರಹಾರ ಸೇರಿದ್ದ ನಟ ದರ್ಶನ್ಗೆ ರಾಜ್ಯಾತಿಥ್ಯ ಕೊಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದ ಬೆನ್ನಲ್ಲೇ ದರ್ಶನ್ನನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಬಿಂದಾಸ್ ಆಗಿ ಜೈಲಿಗೆ ಬಂದ ದರ್ಶನ್ ಬ್ರಾಂಡೆಡ್ ಉಡುಪುಗಳನ್ನು ಧರಿಸಿ ಆಗಮಿಸಿದ್ದಾರೆ. ಅಷ್ಟೇ ಅಲ್ಲದೇ ಕೈಲ್ಲೊಂದು ಬೆಡ್ಶೀಟ್, ಕಪ್ಪು ಕೂಲಿಂಗ್ ಗ್ಲಾಸ್ ಅನ್ನು ಟೀ ಶರ್ಟ್ ಮೇಲೆ ಸಿಕ್ಕಿಸಿಕೊಂಡು ಬಳ್ಳಾರಿ ಜೈಲಿಗೆ ಎಂಟ್ರಿ ನೀಡಿದ್ದಾರೆ. ಆದರೀಗ ದರ್ಶನ್ ಅಷ್ಟು ಸ್ಟೈಲ್ ಆಗಿ ಜೈಲಿಗೆ ಎಂಟ್ರಿ ನೀಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಕೊಲೆ ಆರೋಪಿಗೆ ಇಷ್ಟೆಲ್ಲಾ ಫೆಸಿಲಿಟಿ ಯಾರು ಕೊಟ್ರು ಎಂಬ ಪ್ರಶ್ನೆ ಅನೇಕರಲ್ಲಿ ಹುಟ್ಟಿಕೊಂಡಿದೆ.
ಇದೀಗ ಕೊಲೆ ಆರೋಪಿ ದರ್ಶನ್ಗೆ ಕೂಲಿಂಗ್ ಗ್ಲಾಸ್, ಕೈಗೆ ಕಡಗ ಧರಿಸಲು ಅವಕಾಶ ನೀಡಿದ್ದಕ್ಕೆ ಡಿಐಜಿ ಗರಂ ಆಗಿದ್ದಾರೆ. ಬೆಂಗಾವಲು ಸಿಬ್ಬಂದಿ ವಿರುದ್ಧ ಗರಂ ಆದ ಬೆಳಗಾವಿ ಉತ್ತರ ವಲಯ ಬಂಧಿಖಾನೆ ಡಿಐಜಿ ಟಿ.ಪಿ.ಶೇಷ ಅವರು, ಬೆಂಗಾವಲು ಸಿಬ್ಬಂದಿಗೆ ನೋಟಿಸ್ ನೀಡಲು ಸಿದ್ಧತೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಬಳ್ಳಾರಿ ಜೈಲಿಗೆ ದರ್ಶನ್ ಶಿಫ್ಟ್ ಆಗ್ತಿದ್ದಂತೆ ವಿಚಾರಣೆಗೆ ಹಾಜರಾದ ನಟ ಚಿಕ್ಕಣ್ಣ..!