Download Our App

Follow us

Home » ಅಪರಾಧ » ಬ್ರ್ಯಾಂಡೆಡ್ ಬಟ್ಟೆ, ಕೂಲಿಂಗ್ ಗ್ಲಾಸ್ ಹಾಕಿ ಬಳ್ಳಾರಿ ಜೈಲಿಗೆ ದರ್ಶನ್ ಎಂಟ್ರಿ – ಬೆಂಗಾವಲು ಸಿಬ್ಬಂದಿ ವಿರುದ್ಧ ಡಿಐಜಿ ಟಿ.ಪಿ.ಶೇಷ ಗರಂ..!

ಬ್ರ್ಯಾಂಡೆಡ್ ಬಟ್ಟೆ, ಕೂಲಿಂಗ್ ಗ್ಲಾಸ್ ಹಾಕಿ ಬಳ್ಳಾರಿ ಜೈಲಿಗೆ ದರ್ಶನ್ ಎಂಟ್ರಿ – ಬೆಂಗಾವಲು ಸಿಬ್ಬಂದಿ ವಿರುದ್ಧ ಡಿಐಜಿ ಟಿ.ಪಿ.ಶೇಷ ಗರಂ..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A2 ಆರೋಪಿಯಾಗಿ ಪರಪ್ಪನ ಅಗ್ರಹಾರ ಸೇರಿದ್ದ ನಟ ದರ್ಶನ್​​ಗೆ ರಾಜ್ಯಾತಿಥ್ಯ ಕೊಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದ ಬೆನ್ನಲ್ಲೇ ದರ್ಶನ್​ನನ್ನು ಬಳ್ಳಾರಿ ಜೈಲಿಗೆ  ಶಿಫ್ಟ್ ಮಾಡಲಾಗಿದೆ. 

ಬಿಂದಾಸ್​​ ಆಗಿ  ಜೈಲಿಗೆ ಬಂದ ದರ್ಶನ್ ಬ್ರಾಂಡೆಡ್​ ಉಡುಪುಗಳನ್ನು ಧರಿಸಿ ​ಆಗಮಿಸಿದ್ದಾರೆ. ಅಷ್ಟೇ ಅಲ್ಲದೇ ಕೈಲ್ಲೊಂದು ಬೆಡ್​ಶೀಟ್​​, ಕಪ್ಪು ಕೂಲಿಂಗ್​ ಗ್ಲಾಸ್​​ ಅನ್ನು​ ಟೀ ಶರ್ಟ್​ ಮೇಲೆ ಸಿಕ್ಕಿಸಿಕೊಂಡು ಬಳ್ಳಾರಿ ಜೈಲಿಗೆ ಎಂಟ್ರಿ ನೀಡಿದ್ದಾರೆ. ಆದರೀಗ ದರ್ಶನ್​ ಅಷ್ಟು ಸ್ಟೈಲ್​ ಆಗಿ ಜೈಲಿಗೆ ಎಂಟ್ರಿ ನೀಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಕೊಲೆ ಆರೋಪಿಗೆ ಇಷ್ಟೆಲ್ಲಾ ಫೆಸಿಲಿಟಿ ಯಾರು ಕೊಟ್ರು ಎಂಬ ಪ್ರಶ್ನೆ ಅನೇಕರಲ್ಲಿ ಹುಟ್ಟಿಕೊಂಡಿದೆ.

ಇದೀಗ ಕೊಲೆ ಆರೋಪಿ ದರ್ಶನ್​ಗೆ ಕೂಲಿಂಗ್​​ ಗ್ಲಾಸ್​​, ಕೈಗೆ ಕಡಗ ಧರಿಸಲು ಅವಕಾಶ ನೀಡಿದ್ದಕ್ಕೆ ಡಿಐಜಿ ಗರಂ ಆಗಿದ್ದಾರೆ. ಬೆಂಗಾವಲು ಸಿಬ್ಬಂದಿ ವಿರುದ್ಧ ಗರಂ ಆದ ಬೆಳಗಾವಿ ಉತ್ತರ ವಲಯ ಬಂಧಿಖಾನೆ ಡಿಐಜಿ ಟಿ.ಪಿ.ಶೇಷ ಅವರು, ಬೆಂಗಾವಲು ಸಿಬ್ಬಂದಿಗೆ ನೋಟಿಸ್​ ನೀಡಲು ಸಿದ್ಧತೆ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಬಳ್ಳಾರಿ ಜೈಲಿಗೆ ದರ್ಶನ್​​​​ ಶಿಫ್ಟ್​ ಆಗ್ತಿದ್ದಂತೆ ವಿಚಾರಣೆಗೆ ಹಾಜರಾದ ನಟ ಚಿಕ್ಕಣ್ಣ..!

Leave a Comment

DG Ad

RELATED LATEST NEWS

Top Headlines

ಬೆಂಗಳೂರಿನ ವಿದ್ಯಾರ್ಥಿ ಕೇರಳದಲ್ಲಿ ನಿಫಾ ವೈರಸ್​ಗೆ ಬಲಿ – ರಾಜ್ಯದಲ್ಲಿ ಹೆಚ್ಚಿದ ಆತಂಕ..!

ಬೆಂಗಳೂರು : ಬೆಂಗಳೂರಿನ ವಿದ್ಯಾರ್ಥಿಯೊಬ್ಬ ಕೇರಳದಲ್ಲಿ ಮಾರಣಾಂತಿಕ ನಿಫಾ ವೈರಸ್​ಗೆ ಬಲಿಯಾಗಿದ್ದಾನೆ. ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮಲಪ್ಪುರಂನ ವಿದ್ಯಾರ್ಥಿ ಊರಿಗೆ ಹೋಗಿದ್ದಾಗ ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ. ಕಳೆದ

Live Cricket

Add Your Heading Text Here