Download Our App

Follow us

Home » ಅಪರಾಧ » ಚಾರ್ಜ್​​ಶೀಟ್ ಸಲ್ಲಿಕೆ ಬೆನ್ನಲ್ಲೇ ಪತ್ನಿ ವಿಜಯಲಕ್ಷ್ಮಿಗೆ ಕರೆ ಮಾಡಿದ ದರ್ಶನ್..!

ಚಾರ್ಜ್​​ಶೀಟ್ ಸಲ್ಲಿಕೆ ಬೆನ್ನಲ್ಲೇ ಪತ್ನಿ ವಿಜಯಲಕ್ಷ್ಮಿಗೆ ಕರೆ ಮಾಡಿದ ದರ್ಶನ್..!

ಬೆಂಗಳೂರು : ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ಪ್ರಿಸನ್ ಕಾಲ್ ಸಿಸ್ಟಮ್ ಅಡಿ ಲ್ಯಾಂಡ್‌ಲೈನ್ ಮೂಲಕ ಪತ್ನಿ ವಿಜಯಲಕ್ಷ್ಮಿ ಜೊತೆ ಮಾತನಾಡಿದ್ದಾರೆ. ಚಾರ್ಜ್​​ಶೀಟ್ ಸಲ್ಲಿಕೆ ಬೆನ್ನಲ್ಲೇ ದರ್ಶನ್ ಪತ್ನಿ ಜೊತೆ ನಿನ್ನೆ 2:30ಕ್ಕೆ ಮಾತನಾಡಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿರುವ ನಟ ದರ್ಶನ್ ಅವರು ಪತ್ನಿ ವಿಜಯಲಕ್ಷ್ಮಿ ಜೊತೆ ಪ್ರಕರಣ ಸಂಬಂಧ ಮಾತನಾಡಿದ್ದಾರೆ. ಫೋನ್​​ನಲ್ಲಿ ಚಾರ್ಜ್​​ಶೀಟ್​ ಕುರಿತಂತೆ ದರ್ಶನ್​ ಮಾಹಿತಿ ಪಡೆದುಕೊಂಡಿದ್ದಾರೆ.

ಇನ್ನು ಇದೇ ವೇಳೆ ವಿಜಯಲಕ್ಷ್ಮಿ ದರ್ಶನ್ ಅವರ ಆರೋಗ್ಯವನ್ನು ವಿಚಾರಿಸಿದ್ದಾರೆ. ಪತಿ-ಪತ್ನಿ ಇಬ್ಬರು 5 ನಿಮಿಷ ಕಾಲ ಮಾತನಾಡಿದ್ದಾರೆ. ಈ ಇಬ್ಬರು ಮಾತನಾಡಿದ್ದ ಪೋನ್ ಸಂಭಾಷಣೆಯನ್ನು ಜೈಲಾಧಿಕಾರಿಗಳು ರೆಕಾರ್ಡ್ ಮಾಡಿಕೊಂಡಿದ್ದಾರೆ. ದರ್ಶನ್ ಅವರು ಕೇಳಿದ ಮೇಲೆ ಸುಮಾರು 3 ಗಂಟೆ ತಡವಾಗಿ ಫೋನ್ ಮಾಡಲು ಅಧಿಕಾರಿಗಳು ಅನುಮತಿ ಕೊಟ್ಟಿದ್ದಾರೆ.

ಇದನ್ನೂ ಓದಿ : ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಗಲಾಟೆ – ಕತ್ತಿಯಿಂದ ಕಡಿದು ಓರ್ವನ ಕೊ*ಲೆ..!

Leave a Comment

DG Ad

RELATED LATEST NEWS

Top Headlines

ಸರ್ಜರಿ ಬಳಿಕ ನಟ ಶಿವಣ್ಣ ರಿಲ್ಯಾಕ್ಸ್ – ಸಮುದ್ರ ತಟದಲ್ಲಿ ಪತ್ನಿ ಜೊತೆ ಜಾಲಿ ರೌಂಡ್ಸ್​​!

ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಅವರು ಸರ್ಜರಿ ಬಳಿಕ ಅಮೆರಿಕಾದಲ್ಲಿ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ. ಶಸ್ತ್ರಚಿಕಿತ್ಸೆ ನಂತ್ರ ಚೇತರಿಕೆ ಕಂಡಿರುವ ಹ್ಯಾಟ್ರಿಕ್ ಹೀರೋ ಪತ್ನಿ ಜೊತೆ ಅಮೆರಿಕದ ಕಡಲ

Live Cricket

Add Your Heading Text Here