ಕೊಡಗು : ಕುಡಿದ ಮತ್ತಿನಲ್ಲಿ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ವಿರಾಜಪೇಟೆ ತಾಲ್ಲೂಕಿನ ಕೊಳತ್ತೋಡು ಬೈಗೋಡು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮೊಗೇರ ವಿಶ್ವ(40) ಮೃತ ದುರ್ಧೈವಿ.
ಗ್ರಾಮದ ಅಚ್ಚಯ್ಯ ಎಂಬುರ ಕಾಫಿತೋಟದ ಲೈನ್ಯಲ್ಲಿ ಇಬ್ಬರು ಕಾರ್ಮಿಕರು ವಾಸವಿದ್ದರು. ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಗಲಾಟೆ ನಡೆದು, ಕತ್ತಿಯಿಂದ ಕಡಿದು ಓರ್ವನ ಕೊಲೆಯಾಗಿದೆ. ವಿರಾಜಪೇಟೆ ತಾಲ್ಲೂಕಿನ ಕೊಳತ್ತೋಡು ಬೈಗೋಡು ಗ್ರಾಮದಲ್ಲಿ ನಡೆದ ಘಟನೆ ನಡೆದಿದ್ದು, ಆರೋಪಿ ಮೊಗೇರ ಗಣೇಶನನ್ನು ಪೊಲೀಸರು ಬಂಧಿಸಿದ್ದಾರೆ.
ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ವಿರಾಜಪೇಟೆ ಶವಗಾರಕ್ಕೆ ವಿಶ್ವ ಮೃತದೇಹ ರವಾನೆ ಮಾಡಲಾಗಿದೆ.
ಇದನ್ನೂ ಓದಿ : ಪೆರೋಲ್ ಮೇಲೆ ಬಂದು ಕೊಲೆಗೆ ಸಂಚು – ನಟೋರಿಯಸ್ ಬಚ್ಚಾಖಾನ್ ಅರೆಸ್ಟ್..!
Post Views: 83