ರೇಣುಕಾಸ್ವಾಮಿ ಕೊಲೆ ಕೇಸ್ಗೆ ಸಂಬಂಧಿಸಿದಂತೆ ನಟ ದರ್ಶನ್ ಅರೆಸ್ಟ್ ಆಗಿ ಇಂದಿಗೆ ಮೂರನೇ ದಿನ. ಇತ್ತ ಹೀರೋನೇ ಇಲ್ಲದ ಡೆವಿಲ್ ಸಿನಿಮಾ ಶೂಟಿಂಗ್ ಕೂಡ ಬಿಕೋ ಎನ್ನುತ್ತಿದ್ದು, ಜೂನ್ 11 ರಂದೇ ಡೆವಿಲ್ ಚಿತ್ರತಂಡ ಚಿತ್ರೀಕರಣವನ್ನು ಸ್ಥಗಿತ ಮಾಡಿದೆ. ದರ್ಶನ್ ಅವರು ತಮ್ಮ ಮುಂದಿನ ಚಿತ್ರ ಡೆವಿಲ್ಗೆ ಈಗಾಗಲೇ ಒಟ್ಟು 22 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ನಿರ್ಮಾಪಕ ಮಿಲನಾ ಪ್ರಕಾಶ್ ಶಾಕ್ನಲ್ಲಿದ್ದಾರೆ.
ಕೋಟ್ಯಾಂತರ ರೂಪಾಯಿ ಬಜೆಟ್ ನಲ್ಲಿ ನಿರ್ಮಾಣವಾಗ್ತಿದ್ದ ಚಿತ್ರ ಇದೀಗ ಹೀರೋ ಇಲ್ಲದೆ ಸಪ್ಪಗಾಗಿದೆ. ದರ್ಶನ್ ಎಡವಟ್ಟಿನಿಂದ ಕೋಟಿ ಕೋಟಿ ಹಣ ಹಾಕಿರುವ ನಿರ್ಮಾಪಕರು ಕಂಗಾಲಾಗಿದ್ದು, ಟೀಸರ್ ನಿಂದಲೇ ಕೌತುಕ ಹುಟ್ಟಿಸಿದ ಡೆವಿಲ್ ಸಿನಿಮಾ ಕೇವಲ 25 ದಿನ ಶೂಟಿಂಗ್ ಆಗಿದೆ.
ಮೊದಲ ಶೆಡ್ಯೂಲ್ ಚಿತ್ರೀಕರಣದ ವೇಳೆ ದರ್ಶನ್ ಆಕ್ಷನ್ ಸಿಕ್ವೇನ್ಸ್ ಮಾಡೋದಿಕ್ಕೆ ಹೋಗಿ ಎಡಗೈಗೆ ಪೆಟ್ಟಾಗಿತ್ತು. ದರ್ಶನ್ ಶಸ್ತ್ರ ಚಿಕಿತ್ಸೆಗೆ ಒಳಗಾದ ಕಾರಣ ಈ ಸಿನಿಮಾ ಶೂಟಿಂಗ್ ಮುಂದಕ್ಕೆ ಹಾಕಲಾಗಿತ್ತು. ಈ ಘಟನೆ ನಡೆಯುವ ಎರಡು ದಿನದ ಹಿಂದೆ ಡೆವಿಲ್ ಚಿತ್ರದ ಎರಡನೇ ಹಂತದ ಶೂಟಿಂಗ್ ಆರಂಭವಾಗಿತ್ತು. ನಂತರ ಶೂಟಿಂಗ್ನಲ್ಲಿ ಭಾಗವಹಿಸಬೇಕಿದ್ದ ದರ್ಶನ್ ಪೊಲೀಸರ ಅತಿಥಿಯಾಗಿದ್ದರು.
ದರ್ಶನ್ ಅರೆಸ್ಟ್ ಆ ಸುದ್ದಿ ಕೇಳಿದ ಶಾಕ್ ಆಗಿರುವ ನಿರ್ದೇಶಕ ಪ್ರಕಾಶ್ ಡೆವಿಲ್ ಚಿತ್ರವನ್ನ ಡಿಸೆಂಬರ್ 25ಕ್ಕೆ ಬಿಡುಗಡೆಗೆ ಪ್ಲಾನ್ ಮಾಡಿಕೊಂಡಿದ್ದರಂತೆ. ದರ್ಶನ್ ಹೊರಗಡೆ ಬರುವರೆಗೆ ಡೆವಿಲ್ ಸಿನಿಮಾ ಶೂಟಿಂಗ್ ಶುರುವಾಗೋದಿಲ್ಲ ಎಂದು ಹೇಳಲಾಗುತ್ತಿದೆ. ಡೆವಿಲ್ ಚಿತ್ರದ ಬಳಿಕ ದರ್ಶನ್ ನಟಿಸಲು ಒಪ್ಪಿಕೊಂಡ ಚಿತ್ರ ಸಿಂಧೂರ ಲಕ್ಷ್ಮಣ. ನಿರ್ಮಾಪಕ ಬಿ ಸುರೇಶ್ ನಿರ್ಮಾಣದ ಹಾಗು ತರುಣ್ ಸುಧೀರ್ ನಿರ್ದೇಶನದ ಸಿಂಧೂರು ಲಕ್ಷ್ನಣ ಸಿನಿಮಾ ಶುರುವಾಗಬೇಕಿತ್ತು. ದರ್ಶನ್ ಯಡವಟ್ಟಿನಿಂದ ಸಿಂಧೂರ ಲಕ್ಷ್ಮಣ ಸಿನಿಮಾ ಶೂಟಿಂಗ್ ಕೂಡ ಮುಂದಿನ ವರ್ಷಕ್ಕೆ ಹೋಗಲಿದೆ. ಜೂನ್ ಅಂತ್ಯದವರೆಗೆ ಡೆವಿಲ್ ಚಿತ್ರತಂಡ ಅಡ್ವಾನ್ಸ್ ಬುಕ್ಕಿಂಗ್ ಮಾಡಿಕೊಂಡಿತ್ತು. ಆದರೀಗ ದರ್ಶನ್ನಿಂದಾಗಿ ಚಿತ್ರತಂಡಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಇದನ್ನೂ ಓದಿ : ಅನ್ನಪೂರ್ಣೇಶ್ವರಿ ನಗರ ಠಾಣೆ CCTV ದೃಶ್ಯ ಕೇಳಿದ ವಕೀಲರ ನಿಯೋಗ..!