ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಡೆಂಘೀ ಮಹಾಮಾರಿಯ ಅಬ್ಬರ ಜೋರಾಗುತ್ತಿದೆ. ಒಂದೆಡೆ ಪ್ರತಿ ದಿನ ನೂರಾರು ಮಂದಿ ಡೆಂಘೀ ಜ್ವರಕ್ಕೆ ತುತ್ತಾಗುತ್ತಿದ್ದರೆ, ಇನ್ನೊಂದೆಡೆ ಸಾವಿನ ಸಂಖ್ಯೆ ಕೂಡ ನಿಧಾನಗತಿಯಲ್ಲಿ ಏರಿಕೆಯಾಗುತ್ತಿದೆ.
ಕಳೆದ 12 ದಿನದಲ್ಲಿ 4 ಸಾವಿರಕ್ಕೂ ಹೆಚ್ಚು ಹೊಸ ಡೆಂಘೀ ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಒಟ್ಟು ಡೆಂಘೀ ಪ್ರಕರಣಗಳ ಸಂಖ್ಯೆ 8000 ಗಡಿ ದಾಟಿದೆ. ಜುಲೈ 1ರಿಂದ ನಿನ್ನೆವರೆಗೆ 4,034 ಡೆಂಘೀ ಕೇಸ್ ಪತ್ತೆಯಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಘೀ ಪ್ರಕರಣಗಳು ಹೆಚ್ಚಳವಾಗಿದ್ದು, ಕಳೆದ 12 ದಿನಗಳಲ್ಲಿ BBMP ವ್ಯಾಪ್ತಿಯಲ್ಲಿ 1065 ಡೆಂಘೀ ಕೇಸ್ ಪತ್ತೆಯಾಗಿವೆ.
ಜುಲೈ 1ರವರೆಗೆ ಬೆಂಗಳೂರಿನಲ್ಲಿ 1563 ಡೆಂಘೀ ಕೇಸ್ ಇದ್ದವು. ಜುಲೈ 12ರ ವೇಳೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಘೀ ಕೇಸ್ 2628ಕ್ಕೆ ಏರಿಕೆಯಾಗಿವೆ. ರಾಜ್ಯದಲ್ಲಿ ಇವರೆಗೆ 8658 ಡೆಂಘೀ ಕೇಸ್ ಪತ್ತೆಯಾಗಿದ್ದು, ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಒಟ್ಟು ಸಕ್ರೀಯ ಪ್ರಕರಣಗಳ ಸಂಖ್ಯೆ 388 ಇವೆ. ಕಳೆದ 24 ಗಂಟೆಯಲ್ಲಿ 1 ವರ್ಷದೊಳಗಿನ 7 ಮಕ್ಕಳಲ್ಲಿ ಡೆಂಘೀ ಪತ್ತೆಯಾಗಿದೆ.
ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಪ್ರಕರಣಗಳ ಬೆಂಗಳೂರಲ್ಲಿ ದಾಖಲಾಗುತ್ತಿದೆ. ಡೆಂಘಿಗೆ ಬೆಂಗಳೂರು ಹಾಟ್ ಸ್ಪಾಟ್ ಆಗ್ತಿದೆ. ಸದ್ಯ ಬೆಂಗಳೂರಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಡೆಂಘಿ ಕೇಸ್ಗಳಿದ್ದು, ಈವರೆಗೆ ಬೆಂಗಳೂರಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಪಾಲಿಕೆ ಖಚಿತ ಪಡಿಸಿದೆ. ಬೆಂಗಳೂರು ನಗರದಲ್ಲಿ ಬರೋಬ್ಬರಿ 17 ಲಕ್ಷ ಮನೆಗಳಿಗೆ ತೆರಳಿ ಪಾಲಿಕೆ ಸಿಬ್ಬಂದಿ ಸರ್ವೇ ನಡೆಸಿದ್ದಾರೆ. ಅಲ್ಲದೆ ಬರೋಬ್ಬರಿ 60 ಸಾವಿರಕ್ಕೂ ಅಧಿಕ ಲಾರ್ವ ಸ್ಪಾಟ್ಗಳನ್ನೂ ನಾಶ ಮಾಡಿದ್ದಾರೆ. ಅದಾಗಿಯೂ ಬೆಂಗಳೂರಲ್ಲಿ ದಿನದಿಂದ ದಿನಕ್ಕೆ ಡೆಂಘಿ ಕೇಸ್ ಏರಿಕೆಯಾಗುತ್ತಿದ್ದು, ಆತಂಕ ಮೂಡಿಸಿದೆ.
ಇದನ್ನೂ ಓದಿ : ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ಹಗರಣ – ಬಿಜೆಪಿ ಮಾಜಿ ಎಂಎಲ್ಸಿ ಡಿಎಸ್ ವೀರಯ್ಯ ಬಂಧನ..!