Download Our App

Follow us

Home » ಅಪರಾಧ » ಹೆಚ್​.ಡಿ.ರೇವಣ್ಣಗೆ ಜಾಮೀನೋ? ಜೈಲೋ? – ಇಂದೇ ನಿರ್ಣಾಯಕ ದಿನ..!

ಹೆಚ್​.ಡಿ.ರೇವಣ್ಣಗೆ ಜಾಮೀನೋ? ಜೈಲೋ? – ಇಂದೇ ನಿರ್ಣಾಯಕ ದಿನ..!

ಬೆಂಗಳೂರು : ಮನೆಗೆಲಸದಾಕೆ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಮಹಿಳೆ ಕಿಡ್ನ್ಯಾಪ್ ಆರೋಪ ಪ್ರಕರಣದಲ್ಲಿ ಎಸ್‌ಐಟಿ ವಶದಲ್ಲಿರುವ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಕಸ್ಟಡಿ ಅವಧಿ ಇಂದು ಅಂತ್ಯವಾಗಲಿದೆ. ಆದರೆ ಇಂದು ಹೆಚ್​.ಡಿ.ರೇವಣ್ಣಗೆ ಜಾಮೀನು ಸಿಗುತ್ತದೆಯೇ ಅಥವಾ ಜೈಲಿಗೆ ಹೋಗ್ತಾರೆಯೇ ಎಂಬುದು ನಿರ್ಧಾರವಾಗಲಿದೆ.

ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಂದು ಜನಪ್ರತಿನಿಧಿಗಳ ಕೋರ್ಟ್​ನಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಬೆಳಗ್ಗೆ 11 ಗಂಟೆ ನಂತರ  ರೇವಣ್ಣ ಬೇಲ್​ ಅರ್ಜಿ ವಿಚಾರಣೆಗೆ ಬರಲಿದೆ. ಹೆಚ್​.ಡಿ.ರೇವಣ್ಣ ಅವರು  SIT ಕಸ್ಟಡಿಯಲ್ಲಿರುವಾಗಲೇ ಜಾಮೀನಿಗಾಗಿ  ರೇವಣ್ಣ ಪರ ಹಿರಿಯ ವಕೀಲ ಸಿ.ವಿ.ನಾಗೇಶ್​ ವಾದ ಮಂಡನೆ ಮಾಡಲಿದ್ದಾರೆ. ಪ್ರಮುಖವಾಗಿ ಇಂದು ರೇವಣ್ಣ SIT ಕಸ್ಟಡಿ ಅವಧಿಯೂ ಅಂತ್ಯವಾಗಲಿದೆ.  ಹೀಗಾಗಿ ರೇವಣ್ಣಗೆ ಬೇಲೋ..? ಜೈಲೋ ಎನ್ನುವ ಪ್ರಶ್ನೆ ಎದ್ದಿದೆ. ಇದರೊಂದಿಗೆ ಹೆಚ್​.ಡಿ.ರೇವಣ್ಣರನ್ನೂ ಮತ್ತೆ ವಶಕ್ಕೆ ನೀಡುವಂತೆ SIT ಮನವಿ ಮಾಡುವ ಸಾಧ್ಯತೆ ಕೂಡ ಹೆಚ್ಚಿದೆ.

ರೇವಣ್ಣ ಪರ ವಕೀಲರ ವಾದ ಏನು..?

  • ಕಿಡ್ನಾಪ್​​​ ಕೇಸ್​ನಲ್ಲಿ ಸಾಕ್ಷ್ಯಗಳೇ ಇಲ್ಲ
  • ರೇವಣ್ಣ ವಿರುದ್ಧ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ
  • SIT ಇನ್ನೂ ಪ್ರಾಥಮಿಕ ತನಿಖೆಯನ್ನೇ ನಡೆಸುತ್ತಿದೆ
  • ಎಸ್​ಐಟಿ ಮುಂದೆ ಸಂತ್ರಸ್ತ ಮಹಿಳೆ ಗೊಂದಲದ ಹೇಳಿಕೆ ನೀಡಿದ್ದಾರೆ
  • ತನ್ನನ್ನು SITಯವರೇ ಕರೆತಂದಿರೋದಾಗಿ ಮಾಹಿತಿ ನೀಡಿದ್ದಾರೆ
  • ನ್ಯಾಯಾಧೀಶರ ಮುಂದೆ ನೀಡಿರುವ ಹೇಳಿಕೆಯಲ್ಲೂ ಗೊಂದಲ ಇದೆ
  • SIT ಕಸ್ಟಡಿಯಲ್ಲಿರುವಾಗ ಜಾಮೀನು ನೀಡಬಹುದು
  • ಪೊಲೀಸ್​ ಕಸ್ಟಡಿಗೂ ಜಾಮೀನಿಗೂ ಸಂಬಂಧವಿಲ್ಲ
  • ಸಾಕಷ್ಟು ಪ್ರಕರಣಗಳಲ್ಲಿ ಕಸ್ಟಡಿಯಲ್ಲಿರುವಾಗಲೇ ಬೇಲ್​ ಕೊಡಲಾಗಿದೆ
  • ಸುಪ್ರೀಂಕೋರ್ಟ್​ನ ಹಲವು ತೀರ್ಪುಗಳ ಪ್ರತಿ ಲಗತ್ತಿಸಿ ವಕೀಲರ​ ಮನವಿ

SIT ಪರ ವಕೀಲರ ವಾದವೇನು..?

  • ಕಿಡ್ನಾಪ್​ ಕೇಸ್​ನಲ್ಲಿ ಸಾಕ್ಷ್ಯಗಳು ಇವೆ
  • ಖುದ್ದು ಸಂತ್ರಸ್ತೆ ಪುತ್ರನೇ ರೇವಣ್ಣ ವಿರುದ್ಧ ದೂರು ನೀಡಿದ್ದಾನೆ
  • ತೋಟದ ಮನೆಯಲ್ಲಿ ರೇವಣ್ಣ ಅವರ ಆಪ್ತ ಇರಿಸಿಕೊಂಡಿದ್ದ
  • ಹೆಚ್​.ಡಿ. ರೇವಣ್ಣ ಅವರು ಪ್ರಭಾವಿ ರಾಜಕಾರಣಿ
  • ತನಿಖೆ ಮೇಲೆ ರೇವಣ್ಣ ಪ್ರಭಾವ ಬೀರಬಹುದು
  • SIT ಈಗಾಗಲೇ ಹಲವು ಮಾಹಿತಿ ಕಲೆ ಹಾಕಿದೆ
  • SIT ಮುಂದೆ ಸಂತ್ರಸ್ತೆ ಕಿಡ್ನಾಪ್​ ಬಗ್ಗೆ ಹೇಳಿದ್ದಾರೆ
  • ಜಡ್ಜ್​​ ಮುಂದೆಯೂ ಆರೋಪದ ಬಗ್ಗೆ ಹೇಳಿಕೆ ನೀಡಿದ್ದಾರೆ
  • SIT ಕಸ್ಟಡಿಯಲ್ಲಿ ಇರುವ ಸಂದರ್ಭದಲ್ಲಿ ಬೇಲ್​ ಕೊಡಲು ಬರಲ್ಲ
  • ಇದು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ
  • ಪೊಲೀಸ್ ಕಸ್ಟಡಿಯಲ್ಲಿ ಇರುವಾಗ ಬೇಲ್​ ಕೊಡಲು ಬರಲ್ಲ

ಇದನ್ನೂ ಓದಿ :  ಬೆಂಗಳೂರು : ಕೌಟುಂಬಿಕ ಕಲಹ ಶಂಕೆ – ಪತಿಯಿಂದಲೇ ಪತ್ನಿಯ ಭೀಕರ ಕೊ*ಲೆ..!

Leave a Comment

DG Ad

RELATED LATEST NEWS

Top Headlines

ಅಭ್ಯರ್ಥಿ ಡಿಸೈಡ್ ಮಾಡೋದು ಬಿಜೆಪಿ ವರಿಷ್ಠರು ಮತ್ತು ನಾನು – ಯೋಗೇಶ್ವರ್​ಗೆ HDK ಟಾಂಗ್​​​..!

ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ತೆರವಾಗಿರುವ ಮೂರು ವಿಧಾನ ಸಭಾ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಘೋಷಣೆ ಮಾಡಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಈ ನಡುವೆ ಚನ್ನಪಟ್ಟಣ

Live Cricket

Add Your Heading Text Here