Download Our App

Follow us

Home » ಅಪರಾಧ » ಕರ್ನಾಟಕ ವಕ್ಫ್ ಮಂಡಳಿಯಲ್ಲಿ ಕೋಟಿಕೋಟಿ ಗೋಲ್ಮಾಲ್ – FIR ದಾಖಲು..!

ಕರ್ನಾಟಕ ವಕ್ಫ್ ಮಂಡಳಿಯಲ್ಲಿ ಕೋಟಿಕೋಟಿ ಗೋಲ್ಮಾಲ್ – FIR ದಾಖಲು..!

ಬೆಂಗಳೂರು : ವಾಲ್ಮೀಕಿ ನಿಗಮ ಮಾದರಿಯಲ್ಲೇ ಕರ್ನಾಟಕ ವಕ್ಫ್ ಮಂಡಳಿಯಲ್ಲಿ ಕೋಟಿಕೋಟಿ ಗೋಲ್ಮಾಲ್ ನಡೆದಿರುವುದು ಬೆಳಕಿಗೆ ಬಂದಿದೆ. ವಕ್ಫ್​​ ಬೋರ್ಡ್​ಗೆ 8 ಕೋಟಿ ಹಣ ನಷ್ಟ ಉಂಟು ಮಾಡಿದ ಆರೋಪ ಹಿನ್ನೆಲೆ, ಬೋರ್ಡ್​ನ ಮಾಜಿ CEO ಝುಲ್ಫಿಕರ್​​ ಉಲ್ಲಾ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

CEO ಆಗಿದ್ದ ಝುಲ್ಫಿಕರ್​​​​​ ಉಲ್ಲಾ, ಬೆನ್ಸೆನ್​​ ಟೌನ್​​ ಇಂಡಿಯನ್​​ ಬ್ಯಾಂಕ್​​​​​​ನಲ್ಲಿದ್ದ 4 ಕೋಟಿ ಹಣವನ್ನು ವಕ್ಫ್​​​ ಬೋರ್ಡ್​ ಗಮನಕ್ಕೆ ತರದಂತೆ ಚಿಂತಾಮಣಿಯ ವಿಜಯ ಬ್ಯಾಂಕ್​ ಶಾಖೆಯ ಅಕೌಂಟ್​ಗೆ ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದೆ. ಸುಮಾರು 8,03,56,713 ಕೋಟಿ ರೂ.ಗಳಷ್ಟು ನಷ್ಟ ಉಂಟು ಮಾಡಿರುವ ಆರೋಪದ ಹಿನ್ನಲೆ ವಕ್ಫ್​​​ಬೋರ್ಡ್ 2022ರ ಮಾರ್ಚ್​ 31ರಂದು ನೋಟಿಸ್ ನೀಡಿತ್ತು.

ಆದರೆ ಝುಲ್ಫಿಕರ್​​​​​ ಉಲ್ಲಾ ನೋಟಿಸ್​​ಗೆ​ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಚೀಫ್​​ ಅಕೌಂಟೆಂಟ್​ ಮೀರ್​ ಅಹ್ಮದ್​ ಅಬ್ಬಾಸ್ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಮೇರೆಗೆ ಪೊಲೀಸರು, ಬೋರ್ಡ್​ನ ಮಾಜಿ CEO ಝುಲ್ಫಿಕರ್​​ ಉಲ್ಲಾ ವಿರುದ್ಧ IPC-1860(U/s-409) ಅಡಿಯಲ್ಲಿ FIR ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ : ED ಅರೆಸ್ಟ್ ಭೀತಿಯಿಂದ ರಾಯಚೂರು ಶಾಸಕ ದದ್ದಲ್ಎಸ್ಕೇಪ್​​..?

Leave a Comment

DG Ad

RELATED LATEST NEWS

Top Headlines

ತೆರೆಮೇಲೆ ಅಬ್ಬರಿಸಿದ “ಬಘೀರ” – ಸೂಪರ್ ಹೀರೋ ಆದ ರೋರಿಂಗ್ ಸ್ಟಾರ್ ಶ್ರೀಮುರಳಿ..!

ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಬಘೀರ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಹೊಂಬಾಳೆ ಫಿಲಂಸ್‌ ಬ್ಯಾನರ್‌ನಲ್ಲಿ ಮೂಡಿಬಂದ ಈ ಚಿತ್ರಕ್ಕೆ ಡಾ. ಸೂರಿ ನಿರ್ದೇಶನ ಮಾಡಿದ್ದಾರೆ.

Live Cricket

Add Your Heading Text Here