ಮೈಸೂರು : ಸಂಸದರಾಗಿರುವ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ 2ನೇ ಪುತ್ರನಿಗೆ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ತೊಟ್ಟಿಲು ಶಾಸ್ತ್ರ ಸಂಭ್ರಮದಿಂದ ನಡೆಯಿತು.
ಇದೇ ವರ್ಷ ಅಕ್ಟೋಬರ್ 14ರ ದಸರಾ ದಿನವೇ ತ್ರಿಷಿಕಾ ಅವರು ಎರಡನೇ ಮಗುವಿಗೆ ಜನ್ಮ ನೀಡಿದ್ದರು. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ತ್ರಿಷಿಕಾ ದಂಪತಿಗೆ ಈಗಾಗಲೇ ಒಂದು ಗಂಡು ಮಗುವಿದ್ದು, 2017ರ ಡಿಸೆಂಬರ್ 6 ರಂದು ಆದ್ಯವೀರ್ ಅವರು ಜನಿಸಿದ್ದರು. ಇದೀಗ 2ನೇ ಮಗನಿಗೆ ತೊಟ್ಟಿಲು ಶಾಸ್ತ್ರ ಮಾಡಲಾಗಿದೆ.
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ ಬಳಿಕ ತೊಟ್ಟಿಲು ಶಾಸ್ತ್ರ ನೆರವೇರಸಲಾಗಿದೆ. ದೇವಿಗೆ ಪೂಜೆ ಕಾರ್ಯಗಳೆಲ್ಲ ಮುಗಿದ ಮೇಲೆ ಚಾಮುಂಡಿಬೆಟ್ಟದಲ್ಲಿ ದೇವಾಲಯದ ಬಳಿ ಇರುವ ಸಂಪಿಗೆ ಮರಕ್ಕೆ ತೊಟ್ಟಿಲು ಕಟ್ಟಿ ಪೂಜೆ ಮಾಡಿದರು. ಈ ವೇಳೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಉಪಸ್ಥಿತರಿದ್ದರು.
ಇದನ್ನೂ ಓದಿ : ಹಾವೇರಿಯಲ್ಲಿ ಹೋರಿ ತಿವಿದು ವಿದ್ಯಾರ್ಥಿ ಸಾವು..!
Post Views: 157