Download Our App

Follow us

Home » ಜಿಲ್ಲೆ » ಮುಂದುವರೆದ ವರುಣಾರ್ಭಟ – KRS​ಗೆ ಬಂತು ನೀರೇ ನೀರು.. ಇಂದಿನ ನೀರಿನ ಮಟ್ಟ ಎಷ್ಟಿದೆ ಗೊತ್ತಾ?

ಮುಂದುವರೆದ ವರುಣಾರ್ಭಟ – KRS​ಗೆ ಬಂತು ನೀರೇ ನೀರು.. ಇಂದಿನ ನೀರಿನ ಮಟ್ಟ ಎಷ್ಟಿದೆ ಗೊತ್ತಾ?

ಮಂಡ್ಯ : ಕರುನಾಡಿನಲ್ಲಿ ಮುಂಗಾರು ಆರ್ಭಟ ಮುಂದುವರಿದಿದೆ. ಮೂರ್ನಾಲ್ಕು ದಿನಗಳಿಂದ ಕರಾವಳಿ, ಮಲೆನಾಡು ಭಾಗದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಮತ್ತೊಂದೆಡೆ ರಾಜ್ಯದ ಜಲಾಶಯ, ಜಲಪಾತಗಳಿಗೆ ಜೀವ ಕಳೆ ಬಂದಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ KRS ಡ್ಯಾಂನ ನೀರಿನ ಮಟ್ಟ ಏರಿಕೆಯಾಗಿದೆ.

ಕೃಷ್ಣರಾಜ ಸಾಗರ 124.80 ಅಡಿ ಗರಿಷ್ಠ ಮಟ್ಟ ಹೊಂದಿರುವ ಅಣೆಕಟ್ಟಾಗಿದೆ. ನಿರಂತರ ಮಳೆಯಿಂದಾಗಿ ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ 105.40 ಅಡಿಗೆ ಏರಿಕೆ ಕಂಡಿದೆ. ಮಾತ್ರವಲ್ಲದೆ ಡ್ಯಾಂಗೆ 10,121 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಇನ್ನು ಕೇರಳ, ಕೊಡಗು ಭಾಗದಲ್ಲಿ ಈ ವಾರ ಭಾರೀ ಮಳೆ ಆಗಲಿದ್ದು, ಹೀಗಾಗಿ ಕೆಆರ್​ಎಸ್​ಗೆ ಹೆಚ್ಚಿನ ನೀರು ಹರಿದು ಬರುವ ನಿರೀಕ್ಷೆಯಿದೆ.

ಇಂದಿನ ಕೆಆರ್‌ಎಸ್ ನೀರಿನ ಮಟ್ಟ : 

  • ಗರಿಷ್ಠ ಮಟ್ಟ – 124.80 ಅಡಿ.
  • ಇಂದಿನ ಮಟ್ಟ – 105.40 ಅಡಿ
  • ಗರಿಷ್ಠ ಸಾಮರ್ಥ್ಯ – 49.452 ಟಿಎಂಸಿ
  • ಇಂದಿನ ಸಾಮರ್ಥ್ಯ – 27.347 ಟಿಎಂಸಿ
  • ಒಳ ಹರಿವು – 10,121 ಕ್ಯೂಸೆಕ್
  • ಹೊರ ಹರಿವು – 2,260 ಕ್ಯೂಸೆಕ್

ಇದನ್ನೂ ಓದಿ : ಕರಾವಳಿಗೆ ಮತ್ತೆ ರೆಡ್​ ಅಲರ್ಟ್ : ಇಂದಿನಿಂದ 2 ದಿನ ಭಾರೀ ಮಳೆಯ ಮುನ್ಸೂಚನೆ, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ..!

Leave a Comment

DG Ad

RELATED LATEST NEWS

Top Headlines

ಹಾಸನಾಂಬೆ ಸನ್ನಿಧಿಯಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಮಧ್ಯೆ ಮಾರಾಮಾರಿ..!

ಹಾಸನ : ಹಾಸನದ ಹಾಸನಾಂಬೆ ದೇವಿಯ ಉತ್ಸವ ಆರಂಭವಾಗಿದೆ. ಅಕ್ಟೋಬರ್ 24ರಂದು ದೇಗುಲದ ಬಾಗಿಲು ತೆರೆಯಲಾಗಿದೆ. ನವೆಂಬರ್ 3ರವರೆಗೆ ಉತ್ಸವ ನಡೆಯುತ್ತದೆ. ಲಕ್ಷಾಂತರ ಭಕ್ತರು ದೇವಿಯ ದರ್ಶನ

Live Cricket

Add Your Heading Text Here