ನವದೆಹಲಿ : ಕಾಂಗ್ರೆಸ್ ಪಕ್ಷ ಈ ಬಾರಿ ಲೋಕಸಭಾ ಎಲೆಕ್ಷನ್ನಲ್ಲಿ 40 ಸ್ಥಾನಗಳನ್ನಾದರೂ ಉಳಿಸಿಕೊಳ್ಳಲಿ ಎಂದು ಪ್ರಧಾನಿ ಮೋದಿಯವರು ವ್ಯಂಗ್ಯವಾಡಿದ್ದಾರೆ.
ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯ ಭಾಷಣ ಮಾಡಿದ ಅವರು, 2024ರ ಲೋಕಸಭೆಯಲ್ಲಿ ಕಾಂಗ್ರೆಸ್ 40 ಸ್ಥಾನಗಳನ್ನು ಗೆಲ್ಲುವುದಿಲ್ಲ. ಕಾಂಗ್ರೆಸ್ ಪಕ್ಷ ಔಟ್ ಡೇಟೆಡ್ ಆಗೋಗಿದೆ. ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಅನ್ನು ನೋಡಿ ಇಲ್ಲಿ ಮಾತನಾಡುತ್ತಿದ್ದೇನೆ. ಕಾಂಗ್ರೆಸ್ನ ನಾಯಕರಿಗೆ ಗ್ಯಾರಂಟಿ ಇಲ್ಲ. ಮೋದಿ ಗ್ಯಾರಂಟಿ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ದೇಶವನ್ನು ಉತ್ತರ-ದಕ್ಷಿಣ ಎಂದು ಇಬ್ಭಾಗ ಮಾಡುತ್ತಿದೆ. ಇದು 75ನೇ ಗಣರಾಜ್ಯೋತ್ಸವ ವರ್ಷ. ಈ ಬಾರಿ ಜನರ ಆಶೀರ್ವಾದದಿಂದ ನಮಗೆ 400 ಸ್ಥಾನ ಸಿಗಲಿದೆ ಎಂದು ವಿಪಕ್ಷ ನಾಯಕ ಖರ್ಗೆಗೆ ಮೋದಿ ಕುಟುಕಿದ್ದು, NDA 400 ಸ್ಥಾನಗಳನ್ನ ಗೆಲ್ಲಲಿದೆ ಎಂದು ಹೇಳಿದ್ದಾರೆ.
ತುರ್ತು ಪರಿಸ್ಥಿತಿಯಲ್ಲಿ ಜೈಲಿಗೆ ತುಂಬಿದವರು ಯಾರು? ಈಶಾನ್ಯ ರಾಜ್ಯಗಳನ್ನ ಕಾಂಗ್ರೆಸ್ ಹಿಂಸೆಗಳಲ್ಲಿ ಮುಳುಗಿಸಿತ್ತು. ಕಾಂಗ್ರೆಸ್ ಅವಧಿಯಲ್ಲಿ ನಕ್ಸಲ್ ತಾಂಡವ ಇತ್ತು. 10 ವರ್ಷದಲ್ಲಿ ನಾವು ಆರ್ಥಿಕತೆಯನ್ನು 4ನೇ ಸ್ಥಾನಕ್ಕೆ ತಂದಿದ್ದೇವೆ. 70 ವರ್ಷದಲ್ಲಿ ನೀವು 11ನೇ ಸ್ಥಾನಕ್ಕೆ ನಿಲ್ಲಿಸಿದ್ರಿ. ಸಂವಿಧಾನ ಶಿಲ್ಪಿ ಅಂಬೇಡ್ಕರ್ಗೆ ಭಾರತ ರತ್ನ ನೀಡಲಿಲ್ಲ. ಉತ್ತರ-ದಕ್ಷಿಣ ಎಂದು ದೇಶ ಒಡೆಯುತ್ತಿದ್ದೀರಿ. ಈಗ ಕಾಂಗ್ರೆಸ್ ತಾನು ಮಾಡಿದ ಕರ್ಮದ ಫಲ ಅನುಭವಿಸುತ್ತಿದೆ ಎಂದು ಮೋದಿ ಹೇಳಿದ್ದಾರೆ.
ನಾವು ದೇಶವನ್ನ ಹಲವು ಸಂಕಟಗಳಿಂದ ಪಾರು ಮಾಡಿದ್ದೇವೆ. ಅವರ ಪಕ್ಷದ ಹುಟ್ಟು ಎಲ್ಲಿಂದ ಆಯಿತು? ಸಂಜೆ 5 ಗಂಟೆಗೆ ಬಜೆಟ್ ಮಂಡಿಸುವ ಸಂಸ್ಕೃತಿ ಯಾರದ್ದು? ರಾಜ ಪಥವನ್ನ ನಾವು ಕರ್ತವ್ಯ ಪಥ ಮಾಡಿದ್ದೇವೆ. ಆಂಗ್ಲರ ದಾಸ್ಯದಿಂದ ದೇಶದ ವ್ಯವಸ್ಥೆ ಮುಕ್ತ ಮಾಡಿದ್ದೇವೆ ಎಂದು ಮೋದಿ ಹೇಳಿದ್ದಾರೆ.
ನಾವು ಯುವ, ಮಹಿಳೆ, ಬಡವ, ರೈತರ ಕನಸು ನನಸು ಮಾಡಲು ಹೊರಟಿದ್ದೇವೆ. ಅಂಬೇಡ್ಕರ್ ಇಲ್ಲದೇ ಇದ್ದರೆ ಪರಿಶಿಷ್ಟರಿಗೆ ಮೀಸಲು ಸಿಗುತ್ತಿರಲಿಲ್ಲ. ನೆಹರೂ ಅವರೇ ನೌಕರಿಯಲ್ಲಿ SC-ST ಮೀಸಲು ವಿರೋಧಿಸಿದ್ದರು. ಸಿಎಂಗಳಿಗೆ ಬರೆದ ಪತ್ರದಲ್ಲಿ ನೆಹರೂ ಉಲ್ಲೇಖಿಸಿದ್ದರು. ಕಾಂಗ್ರೆಸ್ಗೆ ಪರಿಶಿಷ್ಟರ ಮೀಸಲು ಬಗ್ಗೆ ಕಾಳಜಿ ಇರಲಿಲ್ಲ. ಆರ್ಟಿಕಲ್-370 ರದ್ದು ಮಾಡಿದ ನಂತರ ಕಾಶ್ಮೀರದಲ್ಲಿ ಮೀಸಲು ಸಿಕ್ಕಿದೆ. ಜಾತಿನಿಂದನೆ ಕಾಯ್ದೆ ಜಮ್ಮು ಕಾಶ್ಮೀರದಲ್ಲಿ ಇರಲೇ ಇಲ್ಲ. ವಾಲ್ಮೀಕಿ ಸಮುದಾಯಕ್ಕೆ ಕಾಶ್ಮೀರದಲ್ಲಿ ವಾಸದ ಅಧಿಕಾರ ಇರಲಿಲ್ಲ ಎಂದು ಮೋದಿ ಹೇಳಿದ್ದಾರೆ.
ಇದನ್ನೂ ಓದಿ : ಬಿಜೆಪಿ ನಾಯಕರೇ ಪ್ರಧಾನಿ ಮುಂದೆ ತಲೆದೂಗೋದನ್ನು ಬಿಡಿ : ಜಂತರ್ ಮಂತರ್ನಲ್ಲಿ ಗುಡುಗಿದ ಸಿಎಂ ಸಿದ್ದು..!