Download Our App

Follow us

Home » ರಾಜಕೀಯ » ಮೋದಿ ಬಂದು ಹೋದ ಬೆನ್ನಲ್ಲೇ ಮತ್ತೆ ತೆರಿಗೆ ಅಸ್ತ್ರ – ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಸಿಡಿದ ‘ಕೈ’ ಪಡೆ..!

ಮೋದಿ ಬಂದು ಹೋದ ಬೆನ್ನಲ್ಲೇ ಮತ್ತೆ ತೆರಿಗೆ ಅಸ್ತ್ರ – ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ಸಿಡಿದ ‘ಕೈ’ ಪಡೆ..!

ಬೆಂಗಳೂರು : ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿ ಮೊದಲ ಹಂತದ ಮತದಾನಕ್ಕೆ ಇನ್ನು 5 ದಿನಗಳಷ್ಟೇ ಇದ್ದು, ಎಲ್ಲಾ ರಾಜಕೀಯ ಪಕ್ಷಗಳು ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯಬೇಕೆಂಬ ನಿಟ್ಟಿನಲ್ಲಿ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ಇದಾದ ಬೆನ್ನಲ್ಲೇ ಮತ್ತೇ ಪ್ರಧಾನಿ ಮೋದಿ ನಿನ್ನೆ ರಾಜ್ಯಕ್ಕೆ ಎಂಟ್ರಿ ಕೊಟ್ಟಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ಹೊತ್ತಲ್ಲೇ ಕೇಂದ್ರ ಸರ್ಕಾರ ಬರದ ಪರಿಹಾರ ಹಾಗೂ ತೆರಿಗೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯ ಮಾಡಿದೆ. ಕೇಂದ್ರ ಸರ್ಕಾರದ ಸಾಧನೆ ಶೂನ್ಯ ಎಂದು ಶನಿವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್​​ ಸುರ್ಜೆವಾಲಾ ಅವರ ನೇತೃತ್ವದಲ್ಲಿ ಬೆಂಗಳೂರಿನ ಹೆಬ್ಬಾಳ ವೇಲು ಸೇತುವೆಯ ಮೇಖ್ರಿ ಸರ್ಕಲ್ ನಲ್ಲಿ ಖಾಲಿ ಚೊಂಬು ಹಿಡಿದುಕೊಂಡು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದರು.

ಕಾಂಗ್ರೆಸ್ ಚೊಂಬು ಪ್ರೊಟೆಸ್ಟ್​ ಜೊತೆಗೆ ನಮೋ ಬಂದು ಹೋದ ಬೆನ್ನಲ್ಲೇ ಇದೀಗ ಸೋಷಿಯಲ್​ ಮೀಡಿಯಾದಲ್ಲೂ ಅಭಿಯಾನ ಅರಂಭಿಸಿದ್ದು, ಬಿಜೆಪಿ ವಿರುದ್ಧ ತೆರಿಗೆ ಬಾಣ ಬಿಡ್ತಲೇ ಇದೆ. ಸಮಾಜಿಕ ಜಾಲತಾಣ X ನಲ್ಲಿ ಟ್ವೀಟ್ ಮಾಡುವ ಮೂಲಕ ಬಿಜೆಪಿ ವಿರುದ್ಧ ಅನ್ಯಾಯದ ಆರೋಪ ಮಾಡಿರುವ ಕಾಂಗ್ರೆಸ್, ಮೋದಿ ಸರ್ಕಾರಕ್ಕೆ ಕರ್ನಾಟಕ ಕಟ್ಟುವ ತೆರಿಗೆಯಲ್ಲಿ ಅನ್ಯಾಯವಾಗಿದೆ.  ಪ್ರತಿ 100 ರೂ. ತೆರಿಗೆಯಲ್ಲಿ ಕರ್ನಾಟಕಕ್ಕೆ ಮರಳಿ ಸಿಗ್ತಿರೋದು 13 ರೂಪಾಯಿ ಮಾತ್ರ. ಈ ಅನ್ಯಾಯ ಎಲ್ಲಿಯವರೆಗೆ? ಈ ಮಹಾಮೋಸಕ್ಕೆ ಅಂತ್ಯ ಹಾಡೋಣ. ಕನ್ನಡಿಗರ ಹಿತ ಕಾಪಾಡಿ ಎಂದು ಕಾಂಗ್ರೆಸ್​ ಟ್ವೀಟ್​ ಮೂಲಕ ತಿಳಿಸಿದೆ.

ಇದನ್ನೂ ಓದಿ : ಬೆಂಗಳೂರು : ಮಾಜಿ ಮೇಯರ್ ಮನೆಯಲ್ಲಿ ಕೋಟಿ ಕೋಟಿ ಕಳ್ಳತನ – 1.4 ಕೆಜಿ ಚಿನ್ನಾಭರಣ, ನಗದು ಕದ್ದವರು ಯಾರು?

Leave a Comment

DG Ad

RELATED LATEST NEWS

Top Headlines

ನಂದಿನಿ ಗ್ರಾಹಕರಿಗೆ ಗುಡ್ ನ್ಯೂಸ್ – ಶೀಘ್ರವೇ KMFನಿಂದ ‘ನಂದಿನಿ ದೋಸೆ ಹಿಟ್ಟು’ ಬಿಡುಗಡೆ..!

ಬೆಂಗಳೂರು : ದೋಸೆ ಪ್ರಿಯರಿಗೆ ಗುಡ್ ನ್ಯೂಸ್ ಎನ್ನುವಂತೆ ಶೀಘ್ರವೇ ಕೆಎಂಎಫ್​ನಿಂದ ನಂದಿನಿ ಬ್ರ್ಯಾಂಡ್ ದೋಸೆ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ. ಈಗಾಗಲೇ ನಂದಿನಿ ಬ್ರ್ಯಾಂಡ್ ಅಡಿ

Live Cricket

Add Your Heading Text Here