ಬೆಂಗಳೂರು : ಮುಡಾ ಅಕ್ರಮ ಸೈಟು ಹಗರಣ ಸಿಎಂ ಸಿದ್ದರಾಮಯ್ಯ ಅವರ ರಾಜಕೀಯದ ದಿಕ್ಕು ದೆಸೆಗಳನ್ನೇ ಬದಲಾಯಿಸಿ ಬಿಟಿದ್ದು, ಸದ್ಯ ರಾಜ್ಯ ರಾಜಕೀಯದ ಬೆಳವಣಿಗೆಗಳು ಇಡೀ ದೇಶದ ಕುತೂಹಲವನ್ನು ಕೆರಳಿಸಿದೆ. ಇದೀಗ ಮುಡಾ ಹಗರಣ ಸಂಬಂಧ ಸಿಎಂ ಫ್ಯಾಮಿಲಿ ವಿರುದ್ಧ EDಗೆ ಮತ್ತೊಂದು ದೂರು ನೀಡಲಾಗಿದೆ.
ಸಿದ್ದರಾಮಯ್ಯ ವಿರುದ್ಧ 14 ಸೈಟ್ಗಳ ಸಾಕ್ಷಿ ನಾಶದ ಆರೋಪ ಕೇಳಿಬಂದಿದ್ದು, ಈ ಸಂಬಂಧ ತನಿಖೆ ನಡೆಸುವಂತೆ EDಗೆ ಪ್ರದೀಪ್ ಕುಮಾರ್ ಎಂಬವರು ದೂರು ಸಲ್ಲಿಸಿದ್ದಾರೆ. ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಕೂಡ ಇದರಲ್ಲಿ ಪಾಲುದಾರರು ಆಗಿದ್ದಾರೆ. ಅಲ್ಲದೇ, ಸೈಟ್ ಅನ್ನು ವಾಪಸ್ಸು ಪಡೆಯೋ ಮೂಲಕ ಸಾಕ್ಷ್ಯ ನಾಶ ಆಗಿದೆ. ಮುಡಾ ಅಧಿಕಾರಿಗಳನ್ನು ಬಳಕೆ ಮಾಡಿಕೊಂಡು ಸಾಕ್ಷ್ಯ ನಾಶ ಮಾಡಲಾಗ್ತಿದೆ. ಹಾಗಾಗಿ ಸಾಕ್ಷ್ಯ ನಾಶ ಪ್ರಕರಣವನ್ನು ದಾಖಲು ಮಾಡಬೇಕೆಂದು ದೂರಿನಲ್ಲಿ ಪ್ರದೀಪ್ ಕುಮಾರ್ ಮನವಿ ಮಾಡಿದ್ದಾರೆ.
ಮುಡಾ ಆಯುಕ್ತರೇ ಸಿಎಂ ಪತ್ನಿ ಪಾರ್ವತಿ ಅವರ ನಿವಾಸಕ್ಕೆ ಹೋಗಿ ಸೈಟ್ ವಾಪಸ್ ಪ್ರತಿ ಸಹಿ ಮಾಡಿಸಿಕೊಂಡು ಬಂದಿದ್ದಾರೆ. ಮೂಡಾ ಅಧಿಕಾರಿಗಳು ಆರೋಪಿಗಳ ಜೊತೆಗೆ ಸಾಕ್ಷಿ ನಾಶಕ್ಕೆ ಕೈ ಜೋಡಿಸಿದ್ದಾರೆ. ಹೀಗಾಗಿ ಮುಡಾ ಅಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇನ್ನು, ದಾಖಲೆಗಳನ್ನ ಬದಲಾವಣೆ ಮಾಡುತ್ತಿರುವ ಮುಡಾ ಆಯುಕ್ತರ ವಿರುದ್ಧ ಕ್ರಮಕ್ಕೆ ಪ್ರದೀಪ್ ಕುಮಾರ್ ಅವರು ಆಗ್ರಹಿಸಿದ್ದು, ಸಿಎಂ ಸಿದ್ದರಾಮಯ್ಯ ಮುಡಾ ಆಯುಕ್ತರು ಮತ್ತು ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಸಾಕ್ಷಿ ನಾಶ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ ಮತ್ತಿತರರ ವಿರುದ್ದ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಬೇಕು, ದಾಖಲೆಗಳ ವಶಕ್ಕೆ ಪಡೆಯಲು ಲೋಕಾಯುಕ್ತ ಎಸ್ಪಿಗೆ ಸೂಚಿಸಿ ಎಂದು ಪ್ರದೀಪ್ ಕುಮಾರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ : ಹೆಚ್ಡಿಕೆ ಕೇಳಿದ ತಕ್ಷಣ ಸಿದ್ದು ರಾಜೀನಾಮೆ ಕೊಡಬೇಕಾ? – ಸಿಎಂ ಪರ JDS ಶಾಸಕ ಜಿ.ಟಿ ದೇವೇಗೌಡ ಭರ್ಜರಿ ಬ್ಯಾಟಿಂಗ್..