Download Our App

Follow us

Home » ರಾಜಕೀಯ » ಸಿಎಂ ಪತ್ನಿಗೆ ಸೈಟ್​ ನೀಡಿರೋದು ಅಕ್ರಮ ಅಲ್ಲ : ಎಂ.ಲಕ್ಷ್ಮಣ್​​​​ ಸಮರ್ಥನೆ..!

ಸಿಎಂ ಪತ್ನಿಗೆ ಸೈಟ್​ ನೀಡಿರೋದು ಅಕ್ರಮ ಅಲ್ಲ : ಎಂ.ಲಕ್ಷ್ಮಣ್​​​​ ಸಮರ್ಥನೆ..!

ಬೆಂಗಳೂರು : ಸಿಎಂ ಪತ್ನಿಗೆ ಸೈಟ್​ ನೀಡಿರೋದು ಅಕ್ರಮ ಅಲ್ಲ, ಸಿಎಂ ಸೈಟ್​ ಪ್ರಕರಣ ಯಾವುದೇ ಕಾರಣಕ್ಕೂ ಹಗರಣವಲ್ಲ. ನ್ಯಾಯೋಚಿತವಾಗಿ ಭೂಮಿ ಮಾಲೀಕರಿಗೆ ಸಿಕ್ಕಿರುವ ಹಕ್ಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ್ ಸ್ಪಷ್ಟನೆ ಕೊಟ್ಟಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಎಂ.ಲಕ್ಷ್ಮಣ್​​​​ ಮಾತನಾಡಿ, ಬಿಜೆಪಿ, ಜೆಡಿಎಸ್ ನಾಯಕರು ಇದನ್ನು ರಾಜಕಾರಣಕ್ಕೆ ಬಳಸಿಕೊಳ್ತಿದ್ದಾರೆ. ಮುಡಾದವರು ಸಿಎಂ ಪತ್ನಿಗೆ ಸೈಟ್​ ಕೊಟ್ಟಿರೋದು ಅಕ್ರಮ ಅಲ್ಲ, ಅವರ ಭೂಮಿಯನ್ನು ಸ್ವಾಧೀನ ಮಾಡಿಕೊಂಡಿದ್ದಕ್ಕೆ ಪರಿಹಾರ ನೀಡಿದ್ದಾರೆ. ಸಿದ್ದರಾಮಯ್ಯನವರಿಗೂ ಈ ಸೈಟ್ ಹಂಚಿಕೆಗೂ ಸಂಬಂಧ ಇಲ್ಲ, ಸಿದ್ದರಾಮಯ್ಯನವರು ಈ ಪ್ರಕರಣದಲ್ಲಿ ಯಾವುದೇ ತೀರ್ಮಾನ ಮಾಡಿಲ್ಲ. ಸತ್ತ ವ್ಯಕ್ತಿ ಹೆಸರಿನಲ್ಲಿ ಡಿ ನೋಟಿಫಿಕೇಷನ್​ ಅನ್ನೋದೆಲ್ಲಾ ಸುಳ್ಳು, ವ್ಯಕ್ತಿ ಹೆಸರಿನಲ್ಲಿ ಯಾವುದೇ ಭೂಮಿ ಡಿನೋಟಿಫಿಕೇಷನ್​ ಆಗಲ್ಲ ಎಂದಿದ್ದಾರೆ.

ಪಹಣಿ ನಂಬರ್​ಗಳ ಆಧಾರದ ಮೇಲೆ ಡಿ ನೋಟಿಫಿಕೇಷನ್​ ಆಗುತ್ತೆ, ಸಿಎಂ ಪತ್ನಿಯವರಿಗೆ ಸಂಬಂಧಿಸಿದ ಭೂಮಿ ಕೃಷಿ ಭೂಮಿ ಅಲ್ಲ. ಪರಿವರ್ತನೆಯಾಗಿರುವ ಭೂಮಿಯಲ್ಲಿ ಮುಡಾ ಸೈಟ್ ನೀಡಿದೆ, 50-50 ಅನುಪಾತದ ನಿಯಮದಂತೆ ಬಿಜೆಪಿ ಅವಧಿಯಲ್ಲೇ ಸೈಟ್ ಹಂಚಿಕೆಯಾಗಿದೆ.

ನಿಂಗ ಬಿನ್ ಜವರಾ ದಲಿತ ಸಮುದಾಯಕ್ಕೆ ಸೇರಿದವರು. ಕೆಸರೆ ಗ್ರಾಮದಲ್ಲಿ 1985 ರಲ್ಲಿ ಮೈಸೂರು ಡಿಸಿ ಬಹಿರಂಗ ಹರಾಜಿನಲ್ಲಿ ಜಮೀನು ನೀಡಿದ್ದರು. ನಿಂಗ ಎಂಬುವವರಿಗೆ 100 ರೂ.ಗೆ ಕೆಸರೆ ಗ್ರಾಮದಲ್ಲಿ 3.16 ಎಕರೆ ಜಮೀನು ನೀಡಿದ್ದಾರೆ. ನಿಂಗಪ್ಪಗೆ ಮೂರು ಜನ ಮಕ್ಕಳು. ಇವರ ಜಮೀನು ಸೇರಿ 1992 ರಲ್ಲಿ ಮುಡಾ 60 ಸರ್ವೆ ನಂಬರ್ ಗಳನ್ನು ಭೂಸ್ವಾಧಿನಕ್ಕೆ ನೋಟಿಫಿಕೇಷನ್ ಆಗತ್ತೆ. 1992 ರಲ್ಲಿ ಜಮೀನಿಗೆ ಅವಾರ್ಡ್ ಕೂಡ ಆಗುತ್ತದೆ. ಅವಾರ್ಡ್ ನೊಟೀಸ್ ಅನ್ನು ಅವರ ನಿಂಗಪ್ಪ ಅವರ ಕುಟುಂಬಕ್ಕೆ ನೀಡಲಾಗಿದೆ ಎಂದು ವಿವರಿಸಿದರು.

ಜಮೀನು ಪಾರ್ವತಿ ಸಿದ್ದರಾಮಯ್ಯ ಗೆ ಬಂದಿದ್ದೇ 2010 ರ ಬಳಿಕ. ಈ 3.16 ಎಕರೆ ಡೀನೋಟಿಫೈ ಆಗಿದ್ದು 1998 ರಲ್ಲಿ ಆಗ ಜಮೀನಿನ ಮಾಲಿಕತ್ವ ಇದ್ದಿದ್ದು ನಿಂಗ ಹೆಸರಲ್ಲಿ. ಮುಡಾ ಸೈಟ್​ ನ್ಯಾಯಯುತವಾಗಿ ಮುಖ್ಯಮಂತ್ರಿಗಳ ಪತ್ನಿಗೆ ಬಂದಿದೆ, ಕೇಂದ್ರ ಸಚಿವ ಹೆಚ್​ಡಿಕೆ, ಬಿಜೆಪಿಯವರು ಅಸ್ಪಷ್ಟ ದಾಖಲೆ ಹಿಡಿದು ಮಾತಾಡ್ತಿದ್ದಾರೆ ಎಂದು ಕಾಂಗ್ರೆಸ್​ ಮುಖಂಡ ಎಂ.ಲಕ್ಷ್ಮಣ್​ ಹೇಳಿದ್ದಾರೆ.

ಇದನ್ನೂ ಓದಿ : ಪ್ರಜ್ವಲ್​​​, ಸೂರಜ್​ ಕೇಸ್​ನಲ್ಲಿ ತೋರಿದ ಆತುರ ನಾಗೇಂದ್ರ ಕೇಸ್​ನಲ್ಲಿ ಯಾಕಿಲ್ಲ? – ಕೇಂದ್ರ ಸಚಿವ ಹೆಚ್​​ಡಿ ಕುಮಾರಸ್ವಾಮಿ..!

Leave a Comment

DG Ad

RELATED LATEST NEWS

Top Headlines

ಹಾಸನಾಂಬೆ ಸನ್ನಿಧಿಯಲ್ಲಿ ಕಂದಾಯ ಇಲಾಖೆ ಸಿಬ್ಬಂದಿ ಮಧ್ಯೆ ಮಾರಾಮಾರಿ..!

ಹಾಸನ : ಹಾಸನದ ಹಾಸನಾಂಬೆ ದೇವಿಯ ಉತ್ಸವ ಆರಂಭವಾಗಿದೆ. ಅಕ್ಟೋಬರ್ 24ರಂದು ದೇಗುಲದ ಬಾಗಿಲು ತೆರೆಯಲಾಗಿದೆ. ನವೆಂಬರ್ 3ರವರೆಗೆ ಉತ್ಸವ ನಡೆಯುತ್ತದೆ. ಲಕ್ಷಾಂತರ ಭಕ್ತರು ದೇವಿಯ ದರ್ಶನ

Live Cricket

Add Your Heading Text Here