Download Our App

Follow us

Home » ರಾಜಕೀಯ » ಬಿಜೆಪಿ ನಾಯಕರಿಗೆ ಬಿಗ್​ ಶಾಕ್ ​​​- ಸಿಎಂ ಸಿದ್ದರಾಮಯ್ಯ ಕೈ ಸೇರಿದ ಕೊರೋನಾ ಅಕ್ರಮದ ರಿಪೋರ್ಟ್..!

ಬಿಜೆಪಿ ನಾಯಕರಿಗೆ ಬಿಗ್​ ಶಾಕ್ ​​​- ಸಿಎಂ ಸಿದ್ದರಾಮಯ್ಯ ಕೈ ಸೇರಿದ ಕೊರೋನಾ ಅಕ್ರಮದ ರಿಪೋರ್ಟ್..!

ಬೆಂಗಳೂರು : ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೊವಿಡ್​ ಹಗರಣ ಆರೋಪ ವಿಚಾರವಾಗಿ ಸಿಎಂ ಸಿದ್ದರಾಮಯ್ಯಗೆ ನಿವೃತ್ತ ನ್ಯಾಯಾಧೀಶ ಜಾನ್ ಮೈಕೆಲ್ ಕುನ್ಹಾ ಸರ್ಕಾರಕ್ಕೆ ರಿಪೋರ್ಟ್​ ಸಲ್ಲಿಸಿದ್ದಾರೆ. ಬಿಜೆಪಿ ಅವಧಿಯಲ್ಲಿ ಆರೋಗ್ಯ ಸಚಿವರಾಗಿದ್ದ ಡಾ.ಕೆ ಸುಧಾಕರ್​​ ವಿರುದ್ಧ ಅಕ್ರಮ ನಡೆಸಿರುವ ಗಂಭೀರ ಆರೋಪ ಮಾಡಲಾಗಿದೆ.

ವೆಂಟಿಲೇಟರ್‌ಗಳ, ಆಕ್ಸಿಜನ್ ಉಪಕರಣಗಳ ಖರೀದಿ, ನಿರ್ವಹಣೆ ಲೋಪ, ಕೊವಿಡ್-19 ನಿರ್ವಹಣಾ ಉಪಕರಣಗಳು, ರ‍್ಯಾಪಿಡ್‌ ಆ್ಯಂಟಿಜೆನ್ ಟೆಸ್ಟ್ ಕಿಟ್‌ಗಳ ಖರೀದಿ ಮತ್ತು ಸಂಗ್ರಹಣೆಯಲ್ಲಿ ಅಕ್ರಮ ನಡೆದ ಆರೋಪ ಸಂಬಂಧ ವರದಿ ಸಲ್ಲಿಕೆ ಮಾಡಲಾಗಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಕೋವಿಡ್ ಹಗರಣದ ಸಂಬಂಧ ತನಿಖೆ ಮಾಡಿ ವರದಿ ನೀಡಲು ಸಿಎಂ ಸಿದ್ದರಾಮಯ್ಯ ಕುನ್ಹಾ ಕಮಿಟಿ ರಚಿಸಿದ್ದರು. ಇದೀಗ ಸಿಎಂ ಸಿದ್ದರಾಮಯ್ಯಗೆ ಸಮಿತಿ ರಿಪೋರ್ಟ್ ಸಲ್ಲಿಸಿದೆ. ಮುಚ್ಚಿದ ಲಕೋಟೆಯಲ್ಲಿ ಸಿಎಂ ಸಿದ್ದುಗೆ ವರದಿ ಸಲ್ಲಿಸಲಾಗಿದೆ. ಸಿಎಂ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್​. ಪೊನ್ನಣ್ಣ ಸೇರಿ ಹಲವರು ಸಾಥ್ ನೀಡಿದ್ದರು.

ವರದಿಯಲ್ಲಿ ಏನಿದೆ..? 

  • ಒಟ್ಟು 7223 ಕೋಟಿ ಮೊತ್ತದ ಖರೀದಿ ಪ್ರಕ್ರಿಯೆ
  • ಆರೋಗ್ಯ ಇಲಾಖೆಗೆ 1754 ಕೋಟಿ ರೂ
  • NHMಗೆ 1406 ಕೋಟಿ
  • ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶನಾಲಯಕ್ಕೆ 918 ಕೋಟಿ
  • ಕರ್ನಾಟಕ ಡ್ರಗ್ಸ್​ ಲಾಜಿಸ್ಟಿಕ್​ ವೇರ್​ ಹೌಸಿಂಗ್​ ಸೊಸೈಟಿಗೆ 1349 ಕೋಟಿ
  • ಸಲಕರಣೆಗೆ ಖರೀದಿಗೆಂದು ಸೊಸೈಟಿಗೆ 1349 ಕೋಟಿ ರೂ.
  • ಇದೇ ಸೊಸೈಟಿಯಿಂದ ಔಷಧಿ ಖರೀದಿಗೆಂದು 569 ಕೋಟಿ
  • ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆಗೆ 264 ಕೋಟಿ
  • ಬಿಬಿಎಂಪಿ ಕೇಂದ್ರ ವಲಯಕ್ಕೆ 732 ಕೋಟಿ
  • ದಾಸರಹಳ್ಳಿ ವಲಯಕ್ಕೆ 26 ಕೋಟಿ
  • ಪೂರ್ವ ವಲಯಕ್ಕೆ 78 ಕೋಟಿ, ಮಹದೇವಪುರ ವಲಯಕ್ಕೆ 48 ಕೋಟಿ
  • ಆರ್​​.ಆರ್​​.ನಗರ ವಲಯಕ್ಕೆ 31 ಕೋಟಿ ನೀಡಲಾಗಿದೆ
  • ಬಿಬಿಎಂಪಿಯ ಉಳಿದ ನಾಲ್ಕು ವಲಯ, 31 ಜಿಲ್ಲೆ ಬಗ್ಗೆ ರಿಪೋರ್ಟ್ ಬಾಕಿ
  • 2023ರ ಆಗಸ್ಟ್​ನಲ್ಲಿ ಕುನ್ಹಾ ಸಮಿತಿ ರಚಿಸಿದ್ದ ಸರ್ಕಾರ
  • ಕೊರೋನಾ ನಿರ್ವಹಣೆ, ಔಷಧ ಉಪಕರಣ ಖರೀದಿ ಅಕ್ರಮ
  • ಸಾಮಗ್ರಿ, ಆಮ್ಲ ಜನಕ ಕೊರತೆ ಸಾವಿನ ತನಿಖೆ ಹೊಣೆ
  • ಸಮಿತಿ ಅವಧಿಯನ್ನು 6 ತಿಂಗಳು ವಿಸ್ತರಣೆ ಮಾಡಿರುವ ಸರ್ಕಾರ

ಇದನ್ನೂ ಓದಿ : ‘ನೆಪೋಲಿಯನ್’ ಆಗಿ ‘ನಟ್ವರ್ ಲಾಲ್’ ಎಂಟ್ರಿ – ತನುಷ್ ಶಿವಣ್ಣ ಅಭಿನಯದ ನೂತನ ಚಿತ್ರಕ್ಕೆ ಲವ ವಿ ನಿರ್ದೇಶನ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here