ವಿಜಯನಗರ : ಉತ್ತಮ ಮಳೆ ಕಂಡು ಜಲಾಶಯ ತುಂಬಿ 19ನೇ ಕ್ರೆಸ್ಟ್ ಗೇಟ್ ಕೊಚ್ಚಿಹೋಗಿದ್ದ ತುಂಗಭದ್ರಾ ಜಲಾಶಯಕ್ಕೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಾಗಿನ ಅರ್ಪಣೆ ಮಾಡಿದರು.
ಈ ಬಾರಿ ಮುಂಗಾರು ಆರಂಭದಲ್ಲೇ ಉತ್ತಮವಾಗಿದ್ದರಿಂದ ಜುಲೈ ಕೊನೆಯ ವಾರದಲ್ಲೇ ಜಲಾಶಯ ತುಂಬಿಹೋಗಿತ್ತು. ಭರ್ತಿಯಾಗಿದ್ದ ಜಲಾಶಯಕ್ಕೆ ಸಿದ್ದರಾಮಯ್ಯ ಈ ಹಿಂದೆಯೇ ಬಾಗಿನ ಅರ್ಪಿಸಬೇಕಿತ್ತು. ಆದರೆ, ಡ್ಯಾಂನ 19ನೇ ಕ್ರಸ್ಟ್ ಗೇಟ್ ಮುರಿದ ಹಿನ್ನೆಲೆಯಲ್ಲಿ ಆ ಕಾರ್ಯಕ್ರಮ ರದ್ದಾಗಿತ್ತು.
ಇದೀಗ ಗೇಟ್ ರಿಪೇರಿಯಾಗಿ ಮತ್ತೆ ಜಲಾಶಯ ಭರ್ತಿಯಾಗಿದ್ದು, ಸಿಎಂ ಬಾಗಿನ ಅರ್ಪಿಸಿ ಇತಿಹಾಸ ಬರೆದರು. ಈ ವೇಳೆ ಡಿಸಿಎಂ ಡಿ ಕೆ ಶಿವಕುಮಾರ್, ಸಚಿವರಾದ ಶಿವರಾಜ ತಂಗಡಗಿ,ಜಮೀರ್ ಅಹ್ಮದ್ ಖಾನ್, ಶರಣಪ್ರಕಾಶ್ ಪಾಟೀಲ್ ಸೇರಿ ಅನೇಕ ಸಚಿವರು ಶಾಸಕರು ಭಾಗಿಯಾಗಿದ್ದರು.
ಇದನ್ನೂ ಓದಿ : ಮಹಿಳೆ ಶವ 50 ಪೀಸ್ ಮಾಡಿದ್ದ ಪ್ರಕರಣ – ಹಂತಕನ ಅರೆಸ್ಟ್ಗೆ ಐದು ತಂಡ ರಚನೆ..!
Post Views: 55