Download Our App

Follow us

Home » ಅಪರಾಧ » ಮಹಿಳೆ ಶವ 50 ಪೀಸ್​ ಮಾಡಿದ್ದ ಪ್ರಕರಣ – ಹಂತಕನ ಅರೆಸ್ಟ್​ಗೆ ಐದು ತಂಡ ರಚನೆ..!

ಮಹಿಳೆ ಶವ 50 ಪೀಸ್​ ಮಾಡಿದ್ದ ಪ್ರಕರಣ – ಹಂತಕನ ಅರೆಸ್ಟ್​ಗೆ ಐದು ತಂಡ ರಚನೆ..!

ಬೆಂಗಳೂರು : ಹಂತಕನೊಬ್ಬ ಮಹಿಳೆಯನ್ನು ಕೊಚ್ಚಿ ಕೊಂದು 50 ಪೀಸ್ ​ಮಾಡಿ ಫ್ರಿಡ್ಜ್​​​ನಲ್ಲಿಟ್ಟಿದ್ದ ಘನಘೋರ ಕೃತ್ಯ ವೈಯಾಲಿಕಾವಲ್​​ನ ಮುನೇಶ್ವರ ಬ್ಲಾಕ್​​ನಲ್ಲಿ ನಡೆದಿದೆ. ವೈಯಾಲಿಕಾವಲ್​​​ನಲ್ಲಿ ನಡೆದಿರೊ ಮಹಾಲಕ್ಷ್ಮೀ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಆದರೆ ಇದುವರೆಗೂ ಆರೋಪಿಯ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿಲ್ಲ.

ಕೊಲೆ ಆರೋಪಿಯ ಜಾಡು ಹಿಡಿದ ಹೊರಟ ಪೊಲೀಸರು, ಮಹಿಳೆಯ ದೇಹವನ್ನ 50 ಪೀಸ್ ಮಾಡಿ ಫ್ರಿಡ್ಜ್​ನಲ್ಲಿ ಹಂತಕನ ಪತ್ತೆಗೆ 5 ತಂಡ ರಚಿಸಿ ಶೋಧ ಕಾರ್ಯ ನಡೆಸಲು ಪೊಲೀಸರು ಮುಂದಾಗಿದ್ದಾರೆ.

ಆರೋಪಿ ಪತ್ತೆಗೆ ಒಟ್ಟು 5 ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ.  ಐವರು ಇನ್ಸ್​ಪೆಕ್ಟರ್​ಗಳ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದ್ದು, ಒಂದೊಂದು ತಂಡಕ್ಕೆ ಒಂದೊಂದು ಜವಾಬ್ದಾರಿ ನೀಡಲಾಗಿದೆ.

ತಂಡ-1: ಮಹಾಲಕ್ಷ್ಮಿ ಹಿನ್ನೆಲೆಯಲ್ಲಿ ಪತ್ತೆ ಹಚ್ಚುವ ಕೆಲಸ :
ಮಹಾಲಕ್ಷ್ಮೀ ಎಲ್ಲಿಲ್ಲಿ ಕೆಲಸ ಮಾಡ್ತಾ ಇದ್ದಳು
ಮಹಾಲಕ್ಷ್ಮಿ ಸಹೋದ್ಯೋಗಿಗಳ ವಿಚಾರಣೆ
ಕಳೆದ 3 ತಿಂಗಳಿಂದ ಯಾರ್ಯಾರ ಜೊತೆಗೆ ಸಂಪರ್ಕ ಇತ್ತು
ನಿತ್ಯ ಯಾರ ಜೊತೆ ಮಹಾಲಕ್ಷ್ಮಿ ಬರ್ತಾ ಇದ್ದಳು..?
ಯಾರ ಜೊತೆಗೆ ಹೋಗ್ತಾ ಇದ್ದಳು ಎಂಬ ಮಾಹಿತಿ ಸಂಗ್ರಹ

ತಂಡ 2- ಕೊಲೆ ನಡೆದ ಏರಿಯಾ CCTV ಪರಿಶೀಲನೆ :
ಸರಿಸುಮಾರು 150ಕ್ಕೂ ಹೆಚ್ಚು ಸಿಸಿಟಿವಿ ಪರಿಶೀಲನೆ
ಕಳೆದ ಒಂದು ತಿಂಗಳ ದೃಶ್ಯಗಳ ಪರಿಶೀಲನೆ
ಮಹಾಲಕ್ಷ್ಮೀ ಕೊನೆ ಬಾರಿಗೆ ಕೆಲಕ್ಕೆ ಹೋಗಿದ್ದ ದೃಶ್ಯ
ಸಿಸಿಟಿವಿ ಪರಿಶೀಲಿಸಿ ಆರೋಪಿ ಸುಳಿವು ಪತ್ತೆ ಯತ್ನ

ತಂಡ-3: ಮಹಾಲಕ್ಷ್ಮೀ ಜೊತೆಗೆ ಲಿಂಕ್​ ಇದ್ದವರ ಪತ್ತೆ :
ಕೊನೆ ಬಾರಿಗೆ ಯಾರಿಗೆ ಕಾಲ್ ಮಾಡಿದ್ಲು ಅನ್ನೋ ಮಾಹಿತಿ ಸಂಗ್ರಹ
ಒಂದು ತಿಂಗಳಿಂದ ಯಾರಿಗೆ ಜಾಸ್ತಿ ಕಾಲ್ ಹೋಗಿದೆ ಅನ್ನೋ ಮಾಹಿತಿ ಸಂಗ್ರಹ

ತಂಡ- 4: ಮಹಾಲಕ್ಷ್ಮೀ ಜೊತೆ ಕಾಂಟ್ಯಾಕ್ಟ್​ನಲ್ಲಿದ್ದವರಿಗೆ ಹೊರ ರಾಜ್ಯದಲ್ಲಿ ಶೋಧ :
ಕಾಂಟ್ಯಾಕ್ಟ್​ನಲ್ಲಿದ್ದವರ ಲೊಕೇಷನ್​ ಆಧರಿಸಿ ಪತ್ತೆ

ತಂಡ-5: ಪೋಸ್ಟ್ ಮಾರ್ಟಂ, ಸ್ಥಳ ಮಹಜರು ಪ್ರಕ್ರಿಯೆ :

ಇದನ್ನೂ ಓದಿ : ಭಾರತದಿಂದ ಕಳ್ಳಸಾಗಣೆಯಾಗಿದ್ದ 297 ಪ್ರಾಚೀನ ವಸ್ತುಗಳನ್ನು ಹಿಂದಿರುಗಿಸಿದ ಅಮೆರಿಕ..!

Leave a Comment

DG Ad

RELATED LATEST NEWS

Top Headlines

4 ಅಂತಸ್ತಿನ ಕಟ್ಟಡ ಕುಸಿತ – ಕೂದಲೆಳೆ ಅಂತರದಲ್ಲಿ ಪಾರಾದ ತಾಯಿ, ಮಗು..!

ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ತಾಯಿ ಮಗು ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಆಘಾತಕಾರಿ ಘಟನೆಯ ಸಂಪೂರ್ಣ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೀಡಿಯೊದಲ್ಲಿ

Live Cricket

Add Your Heading Text Here