Download Our App

Follow us

Home » ರಾಜಕೀಯ » ವಿಧಾನಸಭೆಯಲ್ಲಿ ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ..!

ವಿಧಾನಸಭೆಯಲ್ಲಿ ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ..!

ಬೆಂಗಳೂರು : ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ ಇಂದು 4ನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ಮೂರು ದಿನದ ವಿಧಾನಸಭೆ ಕಲಾಪದಲ್ಲಿ ಪ್ರತಿಪಕ್ಷಗಳು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಸರ್ಕಾರದ ಮೇಲೆ ಮುಗಿಬಿದ್ದಿದ್ದವು. ಇಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ-ಜೆಡಿಎಸ್ ಪ್ರತಿಭಟನೆ ಮಧ್ಯೆ ಸಿದ್ದರಾಮಯ್ಯ ಗುಡುಗಿದ್ದಾರೆ. ಗುರು ರಾಘವೇಂದ್ರ ಬ್ಯಾಂಕ್​ ಹಗರಣ ಏನಾಯ್ತು..? ED-IT ಯಾಕೆ ಇದನ್ನ ತನಿಖೆ ಮಾಡಲಿಲ್ಲ..? ವಾಲ್ಮೀಕಿ ನಿಗಮದಲ್ಲಿ ತಿಂದು ತೇಗಿದವರನ್ನ ಸುಮ್ಮನೆ ಬಿಡಲ್ಲ. ನೆಕ್ಕುಂಟಿ ನಾಗರಾಜ್​​ ಯಾರು..? ಶ್ರೀರಾಮುಲು ಜೊತೆಯಿದ್ದರಲ್ಲವೇ..? 2022ರಲ್ಲಿ ನಿಗಮದ MD ಪದ್ಮನಾಭಗೆ ಬಿಜೆಪಿಯವರು ಕ್ಲೀನ್​ ಚಿಟ್​​​ ಕೊಟ್ಟಿರಲ್ಲಿಲ್ವಾ..? ಎಂದು ಪ್ರಶ್ನಿಸಿದ್ದಾರೆ.

ನಂತರ, ಕರಪ್ಷನ್​ ವಿಚಾರದಲ್ಲಿ ನಾವು ಕಾಂಪ್ರಮೈಸ್​​ ಆಗಲ್ಲ, 38 ಕೋಟಿ ವಸೂಲಿಯಾಗಿದೆ, ತಪ್ಪು ಮಾಡಿದವರು ಜೈಲು ಸೇರಿದ್ದಾರೆ. ಬಿಜೆಪಿಯವರು ಕಳ್ಳರನ್ನ ಮತ್ತಷ್ಟು ಕಳ್ಳರನ್ನಾಗಿ ಮಾಡಿದ್ರು, ನಾವು ಹಗರನ ಆದ ಕೂಡಲೇ ತನಿಖೆ ಮಾಡಿಸುತ್ತಿದ್ದೇವೆ. ​ವಾಲ್ಮೀಕಿ ನಿಗಮ ಹಗರಣದಲ್ಲಿ ಯಾರನ್ನೂ ರಕ್ಷಣೆ ಮಾಡಲ್ಲ, ED,CBI ಈಗಾಗಲೇ ತನಿಖೆ ಮಾಡುತ್ತಿದೆ, ಈ ಪ್ರಕರಣದಲ್ಲಿ EDಯವರೇ ಬಂದು ತನಿಖೆ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ರಾಜಕೀಯವಾಗಿ ಷಡ್ಯಂತ್ರ ಮಾಡುವ ಪ್ರಯತ್ನ ನಡೆದಿದೆ, ಬೇರೆ-ಬೇರೆ ರಾಜ್ಯಗಳಲ್ಲಿ ಬಿಜೆಪಿಯವರು ಏನ್​ ಮಾಡಿದ್ದಾರೆ ಗೊತ್ತು. ನಿಮ್ಮ ಷಡ್ಯಂತ್ರಗಳಿಗೆ ನಾವು ಜಗ್ಗಲ್ಲ, ಬಗ್ಗಲ್ಲ ಎಂದು ಬಿಜೆಪಿ ವಿರುದ್ಧ ಸಿಎಂ ಸಿದ್ದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ಮುದ್ದುಕುಮಾರ್ ಮೇಲೆ ಲೋಕಾ ರೇಡ್ – ರಾಶಿ-ರಾಶಿ ಚಿನ್ನ, 30ಕ್ಕೂ ಹೆಚ್ಚು ದುಬಾರಿ ಬೆಲೆಯ ವಾಚ್​ಗಳು ಪತ್ತೆ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here