Download Our App

Follow us

Home » ರಾಜಕೀಯ » ಲೋಕ ಅಖಾಡದಲ್ಲಿ ಅಬ್ಬರಿಸಲು ಸಜ್ಜಾದ ಸಿಎಂ, ಡಿಸಿಎಂ : ಇಂದಿನಿಂದ ಕಾಂಗ್ರೆಸ್​ ಪ್ರಚಾರದ ರಣಕಹಳೆ..!

ಲೋಕ ಅಖಾಡದಲ್ಲಿ ಅಬ್ಬರಿಸಲು ಸಜ್ಜಾದ ಸಿಎಂ, ಡಿಸಿಎಂ : ಇಂದಿನಿಂದ ಕಾಂಗ್ರೆಸ್​ ಪ್ರಚಾರದ ರಣಕಹಳೆ..!

ಕೋಲಾರ : ಇಂದಿನಿಂದ ಕಾಂಗ್ರೆಸ್​ ಪ್ರಚಾರದ ರಣಕಹಳೆ ಮೊಳಗಲಿದ್ದು, ಅದೃಷ್ಟದ ಮೂಡಲ ಬಾಗಿಲಿನಿಂದ ಪ್ರಜಾಧ್ವನಿ ಯಾತ್ರೆ ಶುರುವಾಗಲಿದೆ. ಲೋಕ ಅಖಾಡದಲ್ಲಿ ಸಿಎಂ, ಡಿಸಿಎಂ ಅಬ್ಬರಿಸಲು ಸಜ್ಜಾಗಿದ್ದು, ಕೆಲ ಹೊತ್ತಿನಲ್ಲೇ ಕಾಂಗ್ರೆಸ್​ ಚುನಾವಣಾ ಪ್ರಚಾರಕ್ಕೆ ಚಾಲನೆ ಸಿಗಲಿದೆ.

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ಪ್ರಜಾಧ್ವನಿ-2 ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಕೋಲಾರದ ಕುರುಡುಮಲೆ ಗಣಪತಿ ದೇವಸ್ಥಾನದಲ್ಲಿ ಮಧ್ಯಾಹ್ನ 12ಕ್ಕೆ ವಿಶೇಷ ಪೂಜೆ ನಡೆಯಲಿದ್ದು, ಗಣೇಶನ ಸನ್ನಿಧಿಯಿಂದ ಪ್ರಜಾಧ್ವನಿ ಯಾತ್ರೆ ಶುರುವಾಗಲಿದೆ.

ವಿಧಾನಸಭೆ ಎಲೆಕ್ಷನ್​ಗೂ ಕಾಂಗ್ರೆಸ್​ ಇಲ್ಲಿಂದಲೇ ಪ್ರಚಾರ ಆರಂಭಿಸಿತ್ತು. ಕುರುಡುಮಲೆ ದೇವಸ್ಥಾನದಿಂದ ಪ್ರಚಾರ ಆರಂಭಿಸಿದರೆ ಅದೃಷ್ಟ ಎಂಬ ನಂಬಿಕೆಯಿದೆ. ಈ ವೇಳೆ ಕಾಂಗ್ರೆಸ್ ಸಚಿವರು, ಶಾಸಕರು, ಎಂಎಲ್ಸಿಗಳು & ಮುಖಂಡರು ಭಾಗಿಯಾಗಲಿದ್ದಾರೆ. ಸಿಎಂ ಸಿದ್ದು, ಡಿಸಿಎಂ ಡಿಕೆಶಿ ಎರಡು ತಂಡಗಳಲ್ಲಿ ಪ್ರಜಾಧ್ವನಿ ಯಾತ್ರೆ ಮಾಡಲಿದ್ದಾರೆ. ಮೊದಲ ಹಂತದ 14 ಕ್ಷೇತ್ರಗಳಲ್ಲಿ ಪ್ರಜಾಧ್ವನಿ ಯಾತ್ರೆಯನ್ನು ಬಸ್ ಮೂಲಕ ಪ್ರಚಾರ ಮಾಡಲಿದ್ದಾರೆ. ಈಗಾಗಲೇ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯ ರೂಪುರೇಷೆ ಸಿದ್ದಗೊಳಿಸಿದೆ.

ಕೋಲಾರದಲ್ಲಿ ಶಕ್ತಿ ಪ್ರದರ್ಶನ ಮಾಡುತ್ತಿರುವ ಕಾಂಗ್ರೆಸ್​ : ಸಿಎಂ ಮತ್ತು ಡಿಸಿಎಂ ಕುರುಡು ಮಲೆ ಗಣಪನ ಸನ್ನಿಧಿಯಿಂದ ಬಾಬಾ ವಲ್ಲಿ ದರ್ಗಾಗೆ ಭೇಟಿ ನೀಡಿ, ಅಂಬೇಡ್ಕರ್​​ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ. ನಂತರ ಸಿಎಂ, ಡಿಸಿಎಂ ಬೃಹತ್​​​ ಮೆರವಣಿಗೆಯಲ್ಲಿ ಭಾಗಿಯಾಗಲಿದ್ದಾರೆ. ಅಂಬೇಡ್ಕರ್​ ವೃತ್ತದಿಂದ ಸೌಂದರ್ಯ ಸರ್ಕಲ್​ವರೆಗೂ ಬೃಹತ್​ ಮೆರವಣಿಗೆ ನಡೆಯಲಿದ್ದು, ಮೆರವಣಿಗೆಯಲ್ಲಿ 15-20 ಸಾವಿರ ಜನರು ಸೇರುವ ನಿರೀಕ್ಷೆಯಿದೆ.

ಇದನ್ನೂ ಓದಿ : ಬೆಂಗಳೂರು ಗ್ರಾಮಾಂತರದಲ್ಲಿ ಡಾ.ಸಿ.ಎನ್.ಮಂಜುನಾಥ್​​ಗೆ ಬಿಗ್ ಶಾಕ್ : ಬಿಜೆಪಿ ನಾಯಕರ ನಡುವೆಯೇ ಮುಸುಕಿನ ಗುದ್ದಾಟ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here