Download Our App

Follow us

Home » ರಾಜಕೀಯ » ಸಿಎಂ, ಡಿಸಿಎಂ ಸ್ಥಾನದ ಬಗ್ಗೆ ಮಾತಾಡಿದ್ರೆ ನೋಟಿಸ್​ ಕೊಟ್ಟು ಕ್ರಮ : ಡಿಕೆ ಶಿವಕುಮಾರ್..!

ಸಿಎಂ, ಡಿಸಿಎಂ ಸ್ಥಾನದ ಬಗ್ಗೆ ಮಾತಾಡಿದ್ರೆ ನೋಟಿಸ್​ ಕೊಟ್ಟು ಕ್ರಮ : ಡಿಕೆ ಶಿವಕುಮಾರ್..!

ಬೆಂಗಳೂರು : ಸಿಎಂ-ಡಿಸಿಎಂ ಬದಲಾವಣೆ ಕುರಿತು ಮಾತನಾಡುವ ಪಕ್ಷದ ಶಾಸಕರಿಗೆ ನೋಟೀಸ್‌ ನೀಡುವ ಕುರಿತು ಸಿಎಂ ಸಿದ್ದರಾಮಯ್ಯ ಜೊತೆ ಡಿಸಿಎಂ ಡಿಕೆ ಶಿವಕುಮಾರ್‌ ಚರ್ಚೆ ನಡೆಸಿದ್ದಾರೆ.

ನಿನ್ನೆ ತಡರಾತ್ರಿ ಚನ್ನಪಟ್ಟಣದಿಂದ ಬೆಂಗಳೂರಿಗೆ ವಾಪಸ್ ಆಗ್ತಿದ್ದ ಹಾಗೇ ಡಿಸಿಎಂ ಡಿಕೆ ಶಿವಕುಮಾರ್​ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ, ನಿನ್ನೆ ನಡೆದ ಪದಾಧಿಕಾರಿಗಳ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯವನ್ನು ಸಿಎಂ ಜೊತೆಗೆ ಹಂಚಿಕೊಂಡಿದ್ದಾರೆ. ಕೆಲವು ಶಾಸಕರಿಗೆ ನೊಟೀಸ್ ನೀಡುವು ಬಗ್ಗೆಯೂ ಸಿಎಂ ಜೊತೆಗೆ ಸ್ಥೂಲವಾಗಿ ಸುಮಾರು ಅರ್ಧ ಗಂಟೆಗಳ ಕಾಲ ಡಿಕೆ ಶಿವಕುಮಾರ್ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಹಾಗೇಯೆ ಚನ್ನಪಟ್ಟಣದಲ್ಲಿ ನಡೆಯುವ ಉಪಚುನಾವಣೆ ಬಗ್ಗೆಯೂ ಸಿಎಂ ಜೊತೆ ಡಿಕೆಶಿ ಚರ್ಚಿಸಿದ್ದಾರೆ.

ಪದಾಧಿಕಾರಿಗಳ ಸಭೆಯಲ್ಲಿ ಡಿಕೆಶಿ ಮಾತು :  “ನನ್ನ ಜಾಗ ಖಾಲಿ ಮಾಡಿಸುವುದು ಅಷ್ಟು ಸುಲಭವಲ್ಲ. ನನ್ನನ್ನು ಬಗ್ಗಿಸಬಹುದು ಅಂದುಕೊಂಡ್ರೆ ಆಗಲ್ಲ ಎಂದು ವಿರೋಧಿಗಳ ವಿರುದ್ಧ ಡಿಕೆಶಿ ಗುಡುಗಿದ್ದಾರೆ. ನನ್ನನ್ನು ಬಗ್ಗಿಸಲು ಪಕ್ಷದಲ್ಲಿ ಒಂದಿಬ್ಬರು ಯತ್ನಿಸ್ತಿದ್ದಾರೆ. ನಾನು ಪಕ್ಷಕ್ಕಾಗಿ ದುಡಿಯುವನು, ನನ್ನನ್ನು ಖಾಲಿ ಮಾಡಿಸಲು ಆಗಲ್ಲ ಎಂದು ಹೇಳಿದ್ದಾರೆ. ʼಕೆಲವರಿಗೆ ಮೈಕ್ ಕಂಡ ತಕ್ಷಣ ಮಾತಾಡುವ ದೊಡ್ಡ ಚಟವಿದೆ. ಆದರೆ ಇದನ್ನು ಎಐಸಿಸಿ ಗಮನಿಸುತ್ತಿದೆ. ಗೊಂದಲ ಮೂಡಿಸುತ್ತಿರುವವರ ಬಗ್ಗೆ ಅರಿವಿದೆ. ಕೆಲ ಶಾಸಕರಿಗೆ ನೋಟೀಸ್ ನೋಟಿಸ್​ ಕೊಟ್ಟು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದರು.

ಇದೇ ಸಂದರ್ಭದಲ್ಲಿ ಪಕ್ಷಾಧ್ಯಕ್ಷನಾಗಿ ತಮ್ಮ ಶ್ರಮದ ಬಗ್ಗೆ ಪದಾಧಿಕಾರಿಗಳಿಗೆ ಡಿಕೆ ಶಿವಕುಮಾರ್ ಮನವರಿಕೆ ಮಾಡಿಕೊಟ್ಟರು. ʼನಾನು ಅಧ್ಯಕ್ಷನಾಗುವ ಮೊದಲು ಪಕ್ಷ ಹೇಗಿತ್ತು, ಈಗ ಹೇಗಿದೆ ನೋಡಿ. ಸೋನಿಯಾ ಗಾಂಧಿ ಪಕ್ಷ ಸಂಕಷ್ಟದಲ್ಲಿದ್ದಾಗ ನನ್ನ ಅಧ್ಯಕ್ಷನನ್ನಾಗಿ ಮಾಡಿದರು. ಈಗ ಪಕ್ಷ ಸದೃಢವಾಗಿದೆ, ಇನ್ನಷ್ಟು ಬಲಿಷ್ಠ ಮಾಡುವ ಹೊಣೆಗಾರಿಕೆ ನನ್ನ ಮೇಲಿದೆ. ಯಾರೋ ಒಂದಿಬ್ಬರು ನನ್ನನ್ನು ಬಗ್ಗಿಸಬಹುದು ಅಂತ ಭಾವಿಸಿದ್ದರೆ ಅದು ಆಗದ ಕೆಲಸʼ ಎಂದು ಶಿವಕುಮಾರ್‌ ಭರವಸೆ ನೀಡಿದರು.

ಇದನ್ನೂ ಓದಿ : ಇಂದು ಲೋಕಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ..!

 

 

 

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here