Download Our App

Follow us

Home » ರಾಜ್ಯ » ಬಿಬಿಎಂಪಿ ವ್ಯಾಪ್ತಿಯಲ್ಲಿ ಆತಂಕ ಮೂಡಿಸುತ್ತಿರುವ ಕಾಲರಾ : ಕಳೆದ ಒಂದು ವರ್ಷದಿಂದ ಕಾಲರಾ ಸೋಂಕಿತರ ಸಂಖ್ಯೆ ಹೆಚ್ಚಳ..!

ಬಿಬಿಎಂಪಿ ವ್ಯಾಪ್ತಿಯಲ್ಲಿ ಆತಂಕ ಮೂಡಿಸುತ್ತಿರುವ ಕಾಲರಾ : ಕಳೆದ ಒಂದು ವರ್ಷದಿಂದ ಕಾಲರಾ ಸೋಂಕಿತರ ಸಂಖ್ಯೆ ಹೆಚ್ಚಳ..!

ಬೆಂಗಳೂರು :  ಕಳೆದೆರಡು ದಿನಗಳಿಂದ ಬೆಂಗಳೂರಿನಲ್ಲಿ ಕಾಲರಾ ಭೀತಿ ಉಂಟಾಗಿದ್ದು, ಈ ಹಿನ್ನಲೆ ಬಿಬಿಎಂಪಿ ವ್ಯಾಪ್ತಿಯ ಜನರಲ್ಲಿ ಆತಂಕ ಸೃಷ್ಠಿಯಾಗಿದೆ. ಒಟ್ಟಾರೆಯಾಗಿ ಕಳೆದ ಒಂದು ವರ್ಷದಿಂದ ಕಾಲರಾ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದ್ದು, ಕಳೆದ ವರ್ಷ 108 ಕಾಲರಾ ಪ್ರಕರಣ ವರದಿಯಾಗಿದೆ.

ಈ ವರ್ಷ ಮೂರೇ ತಿಂಗಳಲ್ಲಿ 6 ಮಂದಿಯಲ್ಲಿ ಕಾಲರಾ ರೋಗ ಪತ್ತೆಯಾಗಿದೆ. 2020ರಲ್ಲಿ 40 ಮಂದಿಗೆ, 2021ರಲ್ಲಿ 20 ಹಾಗೂ 2022ರಲ್ಲಿ 44 ಕೇಸ್ ದಾಖಲಾಗಿದೆ. ಇನ್ನು ಕಾಲರಾ ಇನ್ನೂ ಸಾಂಕ್ರಾಮಿಕ ಸ್ವರೂಪ ಪಡೆದುಕೊಂಡಿಲ್ಲ ಎಂದು ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಅವರು ಇದೀಗ ಖಾಸಗಿ ಆಸ್ಪತ್ರೆಗೆ ದಾಖಲಾದ ರೋಗಿಗಳ ಮಾಹಿತಿ ಸಂಗ್ರಹ ಮಾಡಲಾಗಿದೆ. ಇದರೊಂದಿಗೆ ಕಾಲರಾ ಲಕ್ಷಣಗಳಿರುವ ರೋಗಿಗಳ ಪತ್ತೆ ಮಾಡಿ ವಿಶೇಷ ನಿಗಾ ಇಡಲಾಗುವುದು ಎಂದು ತಿಳಿಸಿದ್ದಾರೆ.

ಕಾಲರಾ ರೋಗದ ಲಕ್ಷಣಗಳೇನು..?

  • ವಿಪರೀತವಾಗಿ ಬಾಯಾರಿಕೆ ಕಾಣಿಸುತ್ತದೆ
  • ಬಾಯಿ ಮತ್ತು ಕಣ್ಣುಗಳು ಪದೇ-ಪದೇ ಒಣಗುತ್ತವೆ
  • ಹೃದಯ ಬಡಿತ ಪ್ರಮಾಣ ಹೆಚ್ಚಳ-ಕಡಿಮೆ ಆಗುತ್ತೆ
  • ಮಾಂಸ ಖಂಡಗಳಲ್ಲಿ ಸೆಳೆತ ಕಾಣಿಸುತ್ತದೆ
  • ವಿಪರೀತವಾಗಿ ಸುಸ್ತು ಕಾಣಿಸಿಕೊಳ್ಳುತ್ತದೆ
  • ಅತಿಯಾದ ನಿದ್ದೆ, ತಲೆನೋವು ಕಾಣಿಸುತ್ತದೆ
  • ಸೋಂಕು ಹೆಚ್ಚಾದರೆ ವಾಂತಿ, ಬೇಧಿಯೂ ಕಾಣಿಸುತ್ತದೆ
  • ಕಾಲರಾ ತಡೆಯಲು ಕೈ-ಕಾಲು ಸ್ವಚ್ಛವಾಗಿಟ್ಟುಕೊಳ್ಳಬೇಕು
  • ಬಾಟಲಿ ನೀರು, ಕುದಿಸಿ ಆರಿಸಿದ ನೀರು ಕುಡಿಯಬೇಕು
  • ಬೇಯಿಸದೇ ಇರುವ ಹಸಿ ಆಹಾರ, ಶೆಲ್​ ಫಿಶ್​ ತಿನ್ನಬೇಡಿ
  • ಹಸಿ ತರಕಾರಿ, ಹಣ್ಣು ಸೇವನೆ ಮಾಡಿ
  • ಸುಲಿದು ತಿನ್ನುವ ಹಣ್ಣು, ತರಕಾರಿ ನೀವೇ ಸುಲಿದುಕೊಳ್ಳಿ

ಇದನ್ನೂ ಓದಿ : ಬಿಎಸ್​ವೈ ಮನವೊಲಿಕೆ ನಂತರವೂ ಪ್ರಚಾರಕ್ಕೆ ಬಾರದ ಮುಖಂಡರು : ದಾವಣಗೆರೆಯಲ್ಲಿ ಬಂಡಾಯ ಶಮನಕ್ಕೆ ಮತ್ತೊಂದು ಸರ್ಕಸ್​ ಶುರು..! 

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here