ಚಿತ್ರದುರ್ಗ : ಚಿತ್ರದುರ್ಗದ ಪ್ರಸಿದ್ದ ಮುರುಘಾ ಮಠದಲ್ಲಿದ್ದ ಕಳ್ಳತನ ನಡೆದಿದ್ದು, ಸುಮಾರು 15 ಲಕ್ಷ ಬೆಲೆ ಬಾಳುವ 21 ಇಂಚು ಎತ್ತರವಿದ್ದ ಶಿವಮೂರ್ತಿ ಮುರುಘಾ ಶರಣರ ಬೆಳ್ಳಿ ಮೂರ್ತಿಯನ್ನು ಕಳ್ಳರು ಕದ್ದೊಯ್ದಿರುವ ಶಂಕೆ ವ್ಯಕ್ತವಾಗಿದೆ.
ಮುರುಘಾ ಮಠದ ದರ್ಬಾರ್ ಹಾಲ್ನಲ್ಲಿಟ್ಟಿದ್ದ ಬೆಳ್ಳಿಮೂರ್ತಿ ಜುಲೈ 4ರಂದು ನಾಪತ್ತೆ ಆಗಿದೆ. ಇಲ್ಲಿನ ಶಿವಮೂರ್ತಿ ಶರಣರ ಪಟ್ಟಾಭಿಷೇಕದ 25ನೇ ವರ್ಷಾಚರಣೆ ವೇಳೆ ಭಕ್ತರು ಈ ಮೂರ್ತಿಯನ್ನು ಕೊಟ್ಟಿದ್ದರು. ಆದರೆ ಮಠದಲ್ಲಿದ್ದ ಶಿವಮೂರ್ತಿ ಮುರುಘಾ ಶರಣರ ಬೆಳ್ಳಿಮೂರ್ತಿಯನ್ನು ಮಠದಲ್ಲಿದ್ದ CCTV ಕ್ಯಾಮೆರಾ ಆಫ್ ಮಾಡಿ ಕದ್ದಿರುವ ಶಂಕೆ ವ್ಯಕ್ತವಾಗಿದೆ.
ಇನ್ನು ಮಠದಲ್ಲಿ ಮೂರ್ತಿ ಕಳವಾದ ಹಿನ್ನಲೆಯಲ್ಲಿ ಮುರುಘಾ ಮಠದ ಉಸ್ತುವಾರಿ ಬಸವಕುಮಾರ ಸ್ವಾಮೀಜಿ ಸಭೆ ಮಾಡಿದ್ದಾರೆ. ಈ ಸಭೆಯಲ್ಲಿ ಮಠದ ಆಡಳಿತ ಮಂಡಳಿ, ಭಕ್ತರು ಹಾಗೂ ಕೆಲಸ ಮಾಡುವವರನ್ನೂ ಕರೆಸಿ ಶ್ರೀಗಳು ಚರ್ಚೆನಡೆಸಿದ್ದಾರೆ.
ಇದನ್ನೂ ಓದಿ : ಜು.26ಕ್ಕೆ ‘ಕೆಂಡ’ ಸಿನಿಮಾ ರಿಲೀಸ್ – ಟ್ರೈಲರ್‌ನಲ್ಲಿ ಚಿತ್ರದ ಝಲಕ್ ರಿವೀಲ್..!