Download Our App

Follow us

Home » ಜಿಲ್ಲೆ » ಚಿತ್ರದುರ್ಗ : ಗಾಂಜಾ ನಶೆಯಲ್ಲಿ ಮೂವರ ಮೇಲೆ ಚಾಕುವಿನಿಂದ ಹ*ಲ್ಲೆ ನಡೆಸಿ ವ್ಯಕ್ತಿ ಪರಾರಿ..!

ಚಿತ್ರದುರ್ಗ : ಗಾಂಜಾ ನಶೆಯಲ್ಲಿ ಮೂವರ ಮೇಲೆ ಚಾಕುವಿನಿಂದ ಹ*ಲ್ಲೆ ನಡೆಸಿ ವ್ಯಕ್ತಿ ಪರಾರಿ..!

ಚಿತ್ರದುರ್ಗ : ಗಾಂಜಾ ನಶೆಯಲ್ಲಿ ವ್ಯಕ್ತಿಯೊಬ್ಬ ಮೂವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ಚಿತ್ರದುರ್ಗ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿ ಉಡುಸಲಮ್ಮ ದೇವಿಯ ಜಾತ್ರೆ ನಡೆಯುತ್ತಿತ್ತು. ಈ ವೇಳೆ ಬೇರೆ ಬೇರೆ ಕಡೆಯಿಂದ ಗ್ರಾಮಕ್ಕೆ ಜನ ಬಂದಿದ್ದರು. ಇದೇ ವೇಳೆ ವಿರೇಶ್ ಎಂಬಾತ ಕುಡಿದು ಗಲಾಟೆ ಆರಂಭಿಸಿದ್ದಾನೆ. ಬಳಿಕ ದೇವಾಲಯದ ಬಳಿ ಇದ್ದ ಮೂವರು ಅದೇ ಗ್ರಾಮದ ಯುವಕರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ.

ಗ್ರಾಮದ ಪವನ್, ಮಾರುತಿ ಹಾಗೂ ಮಂಜುನಾಥ್ ಎಂಬವರ ಮೇಲೆ ಹಲ್ಲೆ ನಡೆದಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹಿಂದಿನಿಂದಲೂ ವೀರೇಶ್ ಹಾಗೂ ಹಲ್ಲೆಗೊಳಗಾದ ಮೂವರು ಯುವಕರ ನಡುವೆ ಜಾತಿ ವೈಷಮ್ಯ ಇತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ  ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು  ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here