ಚಿತ್ರದುರ್ಗ : ಕರ್ತವ್ಯ ಲೋಪ ಎಸಗಿದ ಹಿನ್ನೆಲೆ ಚಿತ್ರದುರ್ಗದ ಜೈಲರ್ನ್ನು ಸಸ್ಪೆಂಡ್ ಮಾಡಲಾಗಿದೆ. ಚಿತ್ರದುರ್ಗ ಜಿಲ್ಲಾ ಕಾರಾಗೃಹ ಜೈಲರ್ ಶ್ರೀಮಂತಗೌಡ ಪಾಟೀಲ್ನ್ನು ಅಮಾನತು ಮಾಡುವಂತೆ ಕಾರಾಗೃಹ ಮಹಾ ನಿರ್ದೇಶಕಿ ಮಾಲಿನಿ ಕೃಷ್ಣಮೂರ್ತಿ ಆದೇಶ ನೀಡಿದ್ದಾರೆ.
ಖೈದಿಗಳ ಸಂಬಂಧಿಕರ ಸಂದರ್ಶನದ ವೇಳೆ ಜೈಲರ್ ಹಣ ತೆಗೆದುಕೊಂಡಿವ ಆರೋಪ ಕೇಳಿಬಂದಿದ್ದು, ಅಷ್ಟೇ ಅಲ್ಲದೆ ಜೈಲಿನಲ್ಲಿ ಗಲಾಟೆ ನಡೆದ ವೇಳೆ ಶಿಸ್ತು ಕ್ರಮ ಜರುಗಿಸಿಲ್ಲ ಎಂಬ ಆರೋಪವೂ ವ್ಯಕ್ತವಾಗಿದೆ. ಜೈಲಿನಲ್ಲಿ ಕೆಲ ಆರೋಪಿಗಳು, ಆರೋಪಿ ಚಂದ್ರಪ್ಪ ಎಂಬಾತನ ಮೇಲೆ ಹಲ್ಲೆ ನಡೆಸಿದ್ದರು.
ಹಲ್ಲೆ ನಡೆಸಿದವರ ವಿರುದ್ದ ಕ್ರಮ ಜರುಗಿಸಿಲ್ಲ ಎಂದು ಚಂದ್ರಪ್ಪ ಆರೋಪ ಮಾಡಿದ್ದು, ಈ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿರುವ ಹಿನ್ನೆಲೆ ಜೈಲರ್ನ್ನು ಸಸ್ಪೆಂಡ್ ಮಾಡಿದ್ದಾರೆ.
ಇದನ್ನೂ ಓದಿ : ರಾಹುಲ್ ಗಾಂಧಿ ಮತಬೇಟೆ ಬೆನ್ನಲ್ಲೇ ಕೇಸರಿ ನಾಯಕರ ಅಬ್ಬರ – ಏ.23, 24 ರಂದು ರಾಜ್ಯದಲ್ಲಿ ಅಮಿತ್ ಶಾ, ಯೋಗಿ ಆದಿತ್ಯನಾಥ್ ಪ್ರಚಾರ..!
Post Views: 220