ಚಿತ್ರದುರ್ಗ : ವ್ಯಕ್ತಿಯೊಬ್ಬನ ಆಪರೇಷನ್ಗೆ ಚಿತ್ರದುರ್ಗದ ಜಿಲ್ಲಾ ಸರ್ಕಾರಿ ಆಸ್ಪತ್ರೆ ಡಾಕ್ಟರ್ ಲಂಚ ಕೇಳಿರುವ ವಿಡಿಯೋ ವೈರಲ್ ಆಗಿದೆ. ಡಾ. ಸಾಲಿಮಂಜಪ್ಪ 5 ಸಾವಿರ ಲಂಚಕ್ಕೆ ಡಿಮ್ಯಾಂಡ್ ಮಾಡಿದ ಸರ್ಜನ್.
ವ್ಯಕ್ತಿಯೋರ್ವ ಗಾಯದ ಚಿಕಿತ್ಸೆಗೆಂದು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಗಾಯ ಓಪನ್ ಆದ್ರೆ ಆಸ್ಪತ್ರೆ ತುಂಬಾ ಗಬ್ಬು ವಾಸನೆ ಎಂದು ಡಾಕ್ಟರ್ ತಿಳಿಸಿದ್ದರು. ಈ ವೇಳೆ ರೋಗಿ ಬಡವರು ಇದ್ದೇವೆ ಸ್ವಾಮಿ, ಕೂಲಿ ಮಾಡ್ತೀವಿ ಎಂದಾಗ ಡಾಕ್ಟರ್ ಸಾಲಿಮಂಜಪ್ಪ, ನಮ್ಮ ಆಸ್ಪತ್ರೆಗೆ ಬರುವವರೆಲ್ಲರೂ ಬಡವರೇ ಎಂದಿದ್ದಾರೆ.
ನಂತರ ರೋಗಿ ಬಳಿ 5 ಸಾವಿರ ರೂ. ಲಂಚಕ್ಕೆ ಡಿಮ್ಯಾಂಡ್ ಮಾಡಿದ ಆರೋಪ ಕೇಳಿ ಬಂದಿದೆ. ಇದೀಗ ಸರ್ಜನ್ ಡಾ. ಸಾಲಿಮಂಜಪ್ಪ 4000 ಹಣ ಪಡೆಯುತ್ತಿರುವ ವಿಡಿಯೋ ವೈರಲ್ ಆಗಿದೆ. ಅಷ್ಟು ಮಾತ್ರವಲ್ಲದೇ ವಿಡಿಯೋದಲ್ಲಿ ಡಾಕ್ಟರ್ ಬಡವರಾದ್ರೇನು ಅಪರೇಷನ್ ಮಾಡಿಸಿಕೊಳ್ಳೋ ದರ್ದು ಇರಲ್ವಾ ಎಂದು ಕಟುಕನಂತೆ ಮಾತನಾಡಿದ್ದಾರೆ.
ಇದನ್ನೂ ಓದಿ : GT ಮಾಲ್ ಹೆಸರಿಗೆ ಮಸಿ ಬಳಿಯೋ ಪ್ರಯತ್ನ ನಡೀತಾ? ಫ್ಯಾಕ್ಟ್ಚೆಕ್ನಲ್ಲಿ ಬಯಲಾಯ್ತು ಪಂಚೆ ರಹಸ್ಯ..!