Download Our App

Follow us

Home » ಸಿನಿಮಾ » ಚಿನ್ನು ನನ್ನ ಮಗ, ಅವನು ಈಗ ನಮ್ಮ ಜೊತೆ ಇಲ್ಲ : ಆಂಕರ್‌ ಅನುಶ್ರೀ..!

ಚಿನ್ನು ನನ್ನ ಮಗ, ಅವನು ಈಗ ನಮ್ಮ ಜೊತೆ ಇಲ್ಲ : ಆಂಕರ್‌ ಅನುಶ್ರೀ..!

ಕರಾವಳಿಯ ಬೆಡಗಿ, ಕನ್ನಡದ ಜನಪ್ರಿಯ ನಿರೂಪಕಿ ಅನುಶ್ರೀ ಅವರು ತಮ್ಮ ಅದ್ಭುತ ನಿರೂಪಣೆಯಿಂದಲೇ ಕರ್ನಾಟಕದಾದ್ಯಂತ ಮನೆಮಾತಾಗಿದ್ದಾರೆ. ಹೌದು, ಕಾರ್ಯಕ್ರಮ ನಿರೂಪಣೆಯ ಜೊತೆಗೆ ಸಂಗೀತ, ನೃತ್ಯದಿಂದಲೂ ಮನರಂಜಿಸುವ ಅನುಶ್ರೀ ಸದ್ಯ ಹಲವು ರಿಯಾಲಿಟಿ ಶೋಗಳಲ್ಲಿ ಬಿಜಿಯಾಗಿದ್ದಾರೆ.

ಜೀ ಕನ್ನಡ ವಾಹಿನಿಯ ಜನಮೆಚ್ಚಿದ ರಿಯಾಲಿಟಿ ಶೋ ‘ಕಾಮಿಡಿ ಕಿಲಾಡಿಗಳು’ ಹೊಸ ಅವತಾರದಲ್ಲಿ ಪ್ರೇಕ್ಷಕರನ್ನು ರಂಜಿಸುತ್ತಿದೆ ‘ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌’ ಹೆಸರಿನಲ್ಲಿ ವೀಕೆಂಡ್‌ನಲ್ಲಿ ನಗುವಿನ ಟಾನಿಕ್‌ ನೀಡುತ್ತಿದೆ. ‘ಕಾಮಿಡಿ ಕಿಲಾಡಿಗಳು’ ಕಾರ್ಯಕ್ರಮಕ್ಕೆ ನವರಸ ನಾಯಕ ಜಗ್ಗೇಶ್ ತೀರ್ಪುಗಾರರು. ನಗಿಸುವವರ ಹಿಂದೆ ನೋವಿರುತ್ತದೆ ಎನ್ನುವ ಮಾತು ನೂರಕ್ಕೆ ನೂರರಷ್ಟು ಸತ್ಯ ಎಂದು ಅನೇಕರು ಪದೇ ಪದೇ ಹೇಳುತ್ತಾರೆ. ತೆರೆ ಮೇಲೆ ಎಲ್ಲರನ್ನು ನಗಿಸುವ ಜಗ್ಗೇಶ್ ಹಾಗೂ ಅನುಶ್ರೀ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಹೇಳಿಕೊಂಡಿದ್ದಾರೆ.

ಅನುಶ್ರೀ ಅವರಿಗೆ, ತಮ್ಮ ಶ್ವಾನದ ಜೊತೆ ಇರುವ ಫೋಟೋ ತೋರಿಸಿದಾಗ, ನನ್ನ ಚಿನ್ನು ಅದು, ಅವನು ಈಗ ನಮ್ಮ ಜೊತೆ ಇಲ್ಲ. ನಾನು ಅವನನ್ನ ಎರಡು ವರ್ಷದ ಹಿಂದೆ ಇದೇ ಕೈಯಲ್ಲಿ ಕಳ್ಕೊಂಡೆ. ಅವನು ನನ್ನ ಮಗ. ಐ ಆಮ್ ಲಕ್ಕಿ. ಚಿನ್ನು ಮತ್ತೇ ಹುಟ್ಟಿ ನಮ್ ಜೀವನದಲ್ಲಿ ಬಂದಿದ್ದಾನೆ. ಏನು ಎಕ್ಸ್‌ಪೆಕ್ಟ್‌ ಮಾಡದೇ ಫ್ಯೂರ್ ಲವ್ ಕೊಡೋ ಅಂತ ಏಕೈಕ ಜೀವ ದಟ್ ಇಸ್ ಡಾಗ್ಸ್. ಅದು ನಾಯಿಗಳು ಮಾತ್ರ ಎಂದು ಅನುಶ್ರೀ ಹೇಳುತ್ತಾರೆ.

ನಂತರ ಮಾತನಾಡಿದ ಜಗ್ಗೇಶ್, ಯಾಕೆಂದರೆ ಈ ಶ್ವಾನಗಳಲ್ಲಿ ಭಗವಂತ ಒಂದು ಶಕ್ತಿಯನ್ನಿಟ್ಟಿದ್ದಾನೆ. ಅವಕ್ಕೆ ಪ್ರೀತಿ, ಅಕ್ಕರೆಯಿಂದ ಊಟ ಹಾಕಿ ಸಾಕಿ ಸಲುಹಿದಾಗ ಅವಕ್ಕೆ ಇವರು ನನ್ನವರು ಅಂತ ಭಾವ ಬರುತ್ತದೆ. ದೇವರು ಶ್ವಾನವನ್ನು ಯಾಕಿಟ್ಟ ಅಂದ್ರೆ, ಲೋ ನೋಡು ಅದಕ್ಕೆ ನಾಯಿ ಅಂತ ಕರೀತಾರೆ, ಆಕ್ಚುಲಿ ಮನುಷ್ಯ ನಾಯಿ ಎಂದು ಹೇಳುತ್ತಾರೆ. ಮನುಷ್ಯನಿಗೆ ನಾವು ಊಟ ಹಾಕು, ದುಡ್ಡುಕೊಡು, ಮನೆ ಮಾಡಿಕೊಡು, ಆಸ್ತಿ ಮಾಡಿಕೊಡು ಎಲ್ಲ ಕೊಡು ನಿಂಗೆ ಹಿಂದೆ ಇಂದ ಚುಚ್ಚಿ ಹೋಗುತ್ತಾನೆ. ಆದರೆ ನಾಯಿಗಳು ಮಾತ್ರ ಹೋಗಲ್ಲ, ಅವು  ಮನುಷ್ಯ, ಅದು ಪ್ರೀತಿ, ಪ್ರೀತಿಯ ಸಂಕೇತವೇ ನಾಯಿ. ಅದರ ತರಹ ಪ್ರೀತಿಸುವುದಕ್ಕೆ ಪ್ರಪಂಚದಲ್ಲಿ ಯಾರಿಂದಲೂ ಸಾಧ್ಯವಿಲ್ಲ ಎಂದು ಜಗ್ಗೇಶ್ ಹೇಳಿದಾಗ, ಇದು ಜೀವನದ ಗೋಲ್ಡನ್ ಮಾತು ಎಂದು ಅನುಶ್ರೀ ಹೇಳುತ್ತಾರೆ.

ಇದನ್ನೂ ಓದಿ : ಕಲಬುರಗಿ : ಅತ್ತಿಗೆಯಿಂದ ದೂರ ಇರು ಎಂದಿದ್ದಕ್ಕೆ ಮೈದುನನ ಬರ್ಬರ ಹತ್ಯೆ..!

Leave a Comment

DG Ad

RELATED LATEST NEWS

Top Headlines

ಸಿಎಂ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರಿಗೆ ಮತ್ತೊಂದು ದೂರು..!

ಮೈಸೂರು : ಮುಡಾ ಸೈಟ್ ಹಂಚಿಕೆ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಈಗಾಗಲೇ ಕಾನೂನು ಕಂಟಕ ಎದುರಿಸುತ್ತಿದ್ದಾರೆ. ಸಿಎಂ ವಿರುದ್ಧ ಪ್ರಾಸಿಕ್ಯೂಶನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದು, ಸದ್ಯ ಹೈಕೋರ್ಟ್‌ನಲ್ಲಿ

Live Cricket

Add Your Heading Text Here