ಬೆಂಗಳೂರು : ಆಕಸ್ಮಿಕವಾಗಿ ನಮ್ಮ ಮೆಟ್ರೋದ ಹಳಿಗೆ ನಾಲ್ಕು ವರ್ಷದ ಮಗು ಜಿಗಿದಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದೆ. ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ಮೆಟ್ರೋ ಹಳಿಗೆ ಮಗು ಜಿಗಿದಿದ್ದು, ಬಿಎಂಆರ್ಸಿಎಲ್ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ನಡೆಯಬೇಕಿದ್ದ ದುರಂತವೊಂದು ತಪ್ಪಿದೆ.
ಆಂದ್ರಮೂಲದ ಪೋಷಕರು ತಮ್ಮ ಮಗುವನ್ನು ಫ್ಲಾಟ್ಫಾರ್ಮ್ನಲ್ಲಿ ಕೆಳಗೆ ಆಟವಾಡಲು ಬಿಟ್ಟು ಮೊಬೈಲ್ನಲ್ಲಿ ಬ್ಯುಸಿಯಾಗಿದ್ದರು. ಈ ವೇಳೆ ಆಟವಾಡ್ತಾ ಮಗು ಮೆಟ್ರೋ ಟ್ರ್ಯಾಕ್ಗೆ ಜಿಗಿದಿದೆ. ಕೂಡಲೆ ಬಿಎಂಆರ್ಸಿಎಲ್ ಸಿಬ್ಬಂದಿ ಎರಡೂ ಮಾರ್ಗದ ರೈಲು ಸಂಚಾರ, ಹಳಿಯ ವಿದ್ಯುತ್ ಸಂಚಾರ ಸ್ಥಗಿತಗೊಳಿಸಿ ಮಗುವನ್ನು ರಕ್ಷಿಸಿದ್ದಾರೆ. ಸದ್ಯ ಮಗು ಪ್ರಾಣಾಪಾಯದಿಂದ ಪಾರಾಗಿದೆ. ಈ ಘಟನೆಯಿಂದ ಕೆಲಹೊತ್ತು ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಆಗಿತ್ತು. ಬಳಿಕ ಮತ್ತೆ ಸಂಚಾರ ಯಥಾಸ್ಥಿತಿಗೆ ಬಂದಿದೆ.
ಇದನ್ನೂ ಓದಿ : ಹುಬ್ಬಳ್ಳಿ : ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನ – ಆರೋಪಿ ಕಾಲಿಗೆ ಗುಂಡೇಟು…!
Post Views: 161