ಚಿಕ್ಕಮಗಳೂರು : ಬೈಕ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದ ಘಟನೆ ಚಿಕ್ಕಮಗಳೂರು ಕಡೂರು ತಾಲೂಕಿನ ತಂಗಲಿ ಬಳಿ ನಡೆದಿದೆ. ಈ ಘಟನೆಯಲ್ಲಿ 25 ವರ್ಷದ ಸುಮಾ ಮೃತಪಟ್ಟ ದುರ್ದೈವಿಯಾಗಿದ್ದು, ಮಹಿಳೆಯ ಪತಿ ದಾವಣಗೆರೆ ಎಎಸ್ಪಿ ಗನ್ಮ್ಯಾನ್ ಜಯಣ್ಣ ಅವರ ಸ್ಥಿತಿ ಗಂಭೀರವಾಗಿದೆ.
ಕಡೂರು ತಾಲೂಕಿನ ತಂಗಲಿ ಮೂಲದ ಜಯಣ್ಣ, ಪತ್ನಿ ಜೊತೆ ಬೈಕಿನಲ್ಲಿ ಹೋಗುವಾಗ ಈ ಅಪಘಾತ ನಡೆದಿದೆ. ಜಯಣ್ಣ ಅವರು ಡ್ಯೂಟಿಗೆ ಹೋಗಲು ಪತ್ನಿ ಜೊತೆ ದಾವಣಗೆರೆಗೆ ತೆರಳಲು ರೈಲ್ವೇ ನಿಲ್ದಾಣಕ್ಕೆ ಹೊರಟಿದ್ದರು ಎಂದು ತಿಳಿದುಬಂದಿದೆ.
ಲಾರಿ ಚಾಲಕ ಒನ್ ವೇನಲ್ಲಿ ಬಂದ ಪರಿಣಾಮ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಜಯಣ್ಣ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲು ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ : ಜೈಪುರ ಟೈಮ್ಸ್ ಫ್ಯಾಷನ್ ವೀಕ್ನಲ್ಲಿ ಮಿಂಚಿದ ರಚಿಕಾ ಸುರೇಶ್..!
Post Views: 269