Download Our App

Follow us

Home » ರಾಜಕೀಯ » ಇಂದಿನಿಂದ ಚನ್ನಪಟ್ಟಣ ಅಖಾಡಕ್ಕೆ ಅತಿರಥರ ಎಂಟ್ರಿ.. ಮೊಮ್ಮಗನ ಪರ ಖುದ್ದು ಪ್ರಚಾರಕ್ಕಿಳಿದ ದೇವೇಗೌಡರು..!

ಇಂದಿನಿಂದ ಚನ್ನಪಟ್ಟಣ ಅಖಾಡಕ್ಕೆ ಅತಿರಥರ ಎಂಟ್ರಿ.. ಮೊಮ್ಮಗನ ಪರ ಖುದ್ದು ಪ್ರಚಾರಕ್ಕಿಳಿದ ದೇವೇಗೌಡರು..!

ಉಪಚುನಾವಣೆ ಅನ್ನೋ ಮಹಾಸಂಗ್ರಾಮಕ್ಕೆ ದಿನಗಣನೆ ಶುರುವಾಗಿದೆ. ಅದರಲ್ಲೂ ಚನ್ನಪಟ್ಟಣ ಅನ್ನೋ ವಿಧಾನಸಭಾ ಕ್ಷೇತ್ರವಂತೂ, ಅಕ್ಷರಶಃ ಕುರುಕ್ಷೇತ್ರವಾಗಿಯೇ ಬದಲಾಗಿಬಿಟ್ಟಿದೆ. ಮತದಾನಕ್ಕೆ ಇನ್ನು 9 ದಿನಗಳಷ್ಟೇ ಬಾಕಿ ಇದೆ. ಬಿಜೆಪಿ-ಜೆಡಿಎಸ್ ದೋಸ್ತಿ ಹಾಗೂ ಆಡಳಿತಾರೂಢ ಕಾಂಗ್ರೆಸ್​​ಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ತೀವ್ರ ಕುತೂಹಲ ಕೆರಳಿಸಿರುವ ಚನ್ನಪಟ್ಟಣದ ಅಖಾಡಕ್ಕೆ ಇವತ್ತು ಅತಿರಥರು ಎಂಟ್ರಿ ಕೊಡುತ್ತಿದ್ದು, ಮೊಮ್ಮಗ ನಿಖಿಲ್ ಪರ ಪ್ರಚಾರಕ್ಕೆ ಖುದ್ದು ದೇವೇಗೌಡರು ಇಳಿಯುತ್ತಿದ್ದಾರೆ. ಚನ್ನಪಟ್ಟಣ ಗೆದ್ದು ಮೊದಲ ಬಾರಿಗೆ ಶಾಸಕನಾಗಲು ಹಂಬಲಿಸುತ್ತಿರುವ NDA ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಜೆಡಿಎಸ್ ವರಿಷ್ಠ ದೇವೇಗೌಡರು ಅಬ್ಬರದ ಪ್ರಚಾರ ನಡೆಸಲಿದ್ದು, ಚನ್ನಪಟ್ಟಣ ಕ್ಷೇತ್ರದೆಲ್ಲೆಡೆ ಸುತ್ತಾಡಿ ಮೊಮ್ಮಗನ ಗೆಲುವಿಗೆ ಮತಬೇಟೆ ಮಾಡಲಿದ್ದಾರೆ. ಸದ್ಯ ಚನ್ನಪಟ್ಟಣಕ್ಕೆ ಗೌಡರ ಎಂಟ್ರಿಯಿಂದ ನಿಖಿಲ್​ಗೆ ಆನೆಬಲ ಬಂದಂತಾಗಿದೆ.

ಚನ್ನಪಟ್ಟಣಕ್ಕಾಗಿ ಡಿ.ಕೆ ಶಿವಕುಮಾರ್ ಸಹೋದರರು ಹಾಗೂ ದಳಪತಿಗಳ ನಡುವೆ ಜಿದ್ದಾಜಿದ್ದಿನ ಕದನ ಏರ್ಪಟ್ಟಿದ್ದು, ಕಾಂಗ್ರೆಸ್​​​ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್, ರಣಕಲಿ ಸೈನಿಕ ಸಿ.ಪಿ ಯೋಗೇಶ್ವರ್‌ ಪರ ಇಂದು ಮತಯಾಚಿಸಲಿದ್ದಾರೆ. ದೀಪಾವಳಿ ಮುಗಿಸಿ ಉಪಚುನಾವಣೆಯತ್ತ ಚಿತ್ತ ಹರಿಸಿರುವ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಪ್ರಚಾರ ತಂತ್ರ ಹೆಣೆದಿದ್ದಾರೆ.

ಒಟ್ಟಿನಲ್ಲಿ ಚನ್ನಪಟ್ಟಣ ಕ್ಷೇತ್ರದ ಪ್ರಚಾರ ತಂತ್ರ ಯಾರ ಪರ ಫಲಿತಾಂಶ ನೀಡಲಿದೆ ಅನ್ನೋದನ್ನು ಕಾದು ನೋಡಬೇಕಿದೆ. ಉಪಚುನಾವಣೆಯ ಫಲಿತಾಂಶ ನ.23ರಕ್ಕೆ ಹೊರಬೀಳಲಿದೆ.

ಇದನ್ನೂ ಓದಿ : ವಕ್ಫ್ ಆಸ್ತಿ ವಿವಾದ – ಇಂದು ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಬಿಜೆಪಿ ಬೃಹತ್​ ಪ್ರೊಟೆಸ್ಟ್..!

Leave a Comment

DG Ad

RELATED LATEST NEWS

Top Headlines

ರಾಕಿ ಭಾಯ್​ ಮನೆಯಲ್ಲಿ ಕ್ರಿಸ್ಮಸ್ ಸಂಭ್ರಮ – ರಾಧಿಕಾ ಪಂಡಿತ್, ಮಕ್ಕಳ ಜೊತೆ ಸೆಲೆಬ್ರೆಟ್

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್​ ಹಾಗೂ ರಾಧಿಕಾ ಪಂಡಿತ್ ಮನೆಯಲ್ಲಿ ಕ್ರಿಸ್ಮಸ್ ಹಬ್ಬದ ಸಂಭ್ರಮ ಜೋರಾಗಿದೆ. ಯಶ್​ ಹಾಗೂ ರಾಧಿಕಾ ಪಂಡಿತ್  ದಂಪತಿ ಮಕ್ಕಳೊಂದಿಗೆ ಕ್ರಿಸ್ಮಸ್

Live Cricket

Add Your Heading Text Here