ಬೆಂಗಳೂರು : ಚಂದನ್ ಶೆಟ್ಟಿ – ನಿವೇದಿತಾ ಗೌಡ 4 ವರ್ಷಗಳ ವೈವಾಹಿಕ ಬದುಕಿಗೆ ಇಬ್ಬರೂ ಅಂತ್ಯ ಹಾಡಿದ್ದು, ಇವರಿಬ್ಬರು ವಿಚ್ಛೇದನದ ಬಳಿಕ ಸಿಕ್ಕಾಪಟ್ಟೆ ಸುದ್ದಿ ಆಗ್ತಿದ್ದಾರೆ. ರ್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರ ಮಧ್ಯೆ ಡಿವೋರ್ಸ್ಗೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಈ ಕುರಿತು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಂದು ಸುದ್ದಿಗೋಷ್ಠಿ ಕರೆದಿದ್ದರು.
ಸುದ್ದಿಗೋಷ್ಠಿಯಲ್ಲಿ ಚಂದನ್ ಶೆಟ್ಟಿ ಮಾತನಾಡಿ, ನಾನು ಬೆಳೆದ ರೀತಿನೇ ಬೇರೆ. ನಾನು – ನಿವೇದಿತಾ ಅವರು ಜೀವನವನ್ನು ಅರ್ಥ ಮಾಡಿಕೊಂಡಿರೋ ರೀತಿನೇ ಬೇರೆ ಇದೆ. ಇಬ್ಬರ ಜೀವನ ಶೈಲಿ ಬೇರೆ ಇದೆ. ಇದು ವರ್ಷಗಳು ಕಳೆದರೂ ಹೊಂದಾಣಿಕೆ ಆಗಲಿಲ್ಲ. ಈ ಕಾರಣಕ್ಕಾಗಿಯೇ ಮುಂದಾಗಿದ್ದೇವೆ. ನಮ್ಮ ಮಧ್ಯೆ ದ್ವೇಷ, ವೈಮನಸ್ಸು ಯಾವುದು ಇಲ್ಲ. ನಾವಿಬ್ಬರು ಖುಷಿಯಾಗಿ ಇರಬೇಕು ಅಂದ್ರೆ, ವಿಚ್ಚೇದನ ಬೇಕಿತ್ತು. ಈ ಕಾರಣಕ್ಕೆ ನಾವು ಈಗ ದೂರ ದೂರ ಆಗಿದ್ದೇವೆ. ಇಬ್ಬರು ಮಾತನಾಡಿಕೊಂಡು, ಒಪ್ಪಿಕೊಂಡು ಒಮ್ಮತದಿಂದಲೇ ಬೇರೆ ಬೇರೆ ಆಗಿದ್ದೇವೆ ಎಂದು ಹೇಳಿದ್ದಾರೆ.
ಈಗ ಸೋಶಿಯಲ್ ಮೀಡಯಾದಲ್ಲಿ ಹರಿದಾಡುತ್ತಿರೋ ವದಂತಿಗಳೆಲ್ಲ ಫೇಕ್. ನಮ್ಮಿಬ್ಬರ ಮಧ್ಯೆ 3ನೇ ವ್ಯಕ್ತಿ ಬಂದಿರೋ ವಿಚಾರವೆಲ್ಲ ಸುಳ್ಳು. ಯಾರು ಇವುಗಳನ್ನು ನಂಬಲೇಬಾರದು ಎಂದು ಹೇಳಿದ್ದಾರೆ.
ಈ ಬಗ್ಗೆ ನಿವೇದಿತಾ ಮಾತನಾಡಿ, ಆ 3ನೇ ವ್ಯಕ್ತಿ ಮನೆಗೆ ನಾನು ಹೋಗಿದ್ದೀನಿ. ಅವರು ನಮಗೆ ಫ್ಯಾಮಿಲಿ ಥರಾ. ಅವರದ್ದು ದೊಡ್ಡ ಮನೆ. ನಾವಿಬ್ಬರು ಅವರ ಮನೆಗೆ ಸಾಕಷ್ಟು ಬಾರಿ ಹೋಗಿದ್ದೀವಿ. ಆದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿರೋದು ವಿಕೃತಿ ಅನ್ನಿಸುತ್ತಿದೆ. ಅವರ ಮನೇಲಿ ಯಾವುದೇ ಕಾರ್ಯಕ್ರಮ ಆದರೂ ನಾವು ಒಟ್ಟಿಗೆ ಹೋಗುತ್ತಿದ್ದೆವು. ಅವ್ರಿಗೂ ಫ್ಯಾಮಿಲಿ ಇದೆ ಅನ್ನೋದನ್ನು ಮರಿಬೇಡಿ. ಯಾವುದೋ ಫೋಸ್ಟ್ ನೋಡಿ ಈ ಥರಾ ಮಾಡಬೇಡಿ. ಇಂಪ್ಯಾಕ್ಟ್ ನಾನು ಅವ್ರಿಗೆ ಕಾಲ್ ಮಾಡಿ ಕೇಳಿದ್ದೆ. ಅವ್ರಿಬ್ಬರು ನಮಗೆ ಧೈರ್ಯ ತುಂಬಿದರು ಎಂದು ನಿವೇದಿತಾ ಗೌಡ ಅವರು ಹೇಳಿದ್ದಾರೆ.
ಇದನ್ನೂ ಓದಿ : ಜೂ.14ಕ್ಕೆ ‘ಕೋಟಿ’ ಚಿತ್ರ ರಿಲೀಸ್ : ಇದು ಡಾಲಿ ಧನಂಜಯ್ ವೃತ್ತಿಜೀವನದ ಬಹುಮುಖ್ಯ ಸಿನಿಮಾ..!