Download Our App

Follow us

Home » ಅಪರಾಧ » ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಸಾಜ್​​​​ ಪಾರ್ಲರ್​​ ಮೇಲೆ ಸಿಸಿಬಿ ಪೊಲೀಸರ ದಾಳಿ..!

ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಸಾಜ್​​​​ ಪಾರ್ಲರ್​​ ಮೇಲೆ ಸಿಸಿಬಿ ಪೊಲೀಸರ ದಾಳಿ..!

ಬೆಂಗಳೂರು : ಮಸಾಜ್​​​​ ಪಾರ್ಲರ್​​ ಮೇಲೆ ಸಿಸಿಬಿ ಪೊಲೀಸರು ರೇಡ್​​ ಮಾಡಿದ್ಧಾರೆ. ಟಿನ್​ ಫ್ಯಾಕ್ಟರಿ ಬಳಿಯಿರುವ ಮಸಾಜ್​ ಪಾರ್ಲರ್​​ ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಶಂಕೆ ವ್ಯಕ್ತ ವಾಗಿದ್ದರಿಂದ ರೇಡ್ ಮಾಡಿದ್ದಾರೆ.ನಿರ್ವಾಣ ಇಂಟರ್ ನ್ಯಾಷನಲ್ ಸ್ಪಾ ಪ್ರೈವೆಟ್ ಲಿಮಿಟೆಡ್ ಹೆಸರಿನ ಹೈಟೆಕ್ ಸ್ಪಾದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಫಸ್ಟ್​​​ ಫ್ಲೋರ್ ಹಾಗೂ 6ನೇ ಫ್ಲೋರ್ ​​​ನಲ್ಲಿರುವ ಮಸಾಜ್​ ಪಾರ್ಲರ್​​ ನಡೆಸುತ್ತಿದ್ದು, ಸಿಸಿಬಿ ಅಧಿಕಾರಿ ಧರ್ಮೇಂದ್ರ ತಂಡದಿಂದ ದಾಳಿ ನಡೆದಿದೆ.

ಸಿಸಿಬಿ ಮಹಿಳಾ ಸಂರಕ್ಷಣಾ ದಳದಿಂದ ಸ್ಪಾ ಮೇಲೆ ದಾಳಿ ನಡೆಸಿದ್ದು, ಅನಿಲ್​​ ಎಂಬಾತ ಮಸಾಜ್​ ಪಾರ್ಲರ್​​ ನಡೆಸುತ್ತಿದ್ದನು. ಈ ಆಸಾಮಿ ಹೊರ ರಾಜ್ಯದಿಂದ ಬಂದು ಬೆಂಗಳೂರಿನಲ್ಲಿ ಸ್ಪಾ ನಡೆಸುತ್ತಿದ್ದನು. ಸಿಸಿಬಿ ಪೊಲೀಸರು ಅನಿಲ್​​ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಕಾನೂನು ಬಾಹಿರವಾಗಿ ಬಾಡಿ ಟು ಬಾಡಿ ಮಸಾಜ್ ಮಾಡುತ್ತಿದ್ದು, ವಿವಿಧ ಮಾದರಿಯ ಅನೈತಿಕ ಚಟುವಟಿಕೆ ನಡೆಯುತ್ತಿರೋದು ಪತ್ತೆಯಾಗಿದೆ. ಹೊರ ದೇಶದ ಯುವತಿಯರನ್ನು ಕರೆಸಿ ದಂಧೆ ನಡೆಸುತ್ತಿದ್ದನು. 34 ರೂಂಗಳನ್ನು ಒಳಗೊಂಡಿರುವ ಕಟ್ಟಡದಲ್ಲಿ ಅನೈತಿಕ ಚಟುವಟಿಕೆ ನಡೆಸುತ್ತಿರುವುದು ಪತ್ತೆಯಾಗಿದೆ. ದಾಳಿ ವೇಳೆ 44 ಮಹಿಳೆಯರು. 34 ಗಿರಾಕಿಗಳು ಸಿಸಿಬಿ ವಶಕ್ಕೆ ಸಿಕ್ಕಿದ್ದು, ಈ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : 2 ಬಸ್​ಗಳ ನಡುವೆ ಮುಖಾಮುಖಿ ಡಿಕ್ಕಿ:ಇಬ್ಬರು ಸಾ*ವು,10ಹೆಚ್ಚು ಮಂದಿಗೆ ಗಂಭೀರ ಗಾಯ! –

 

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here