ಬೆಂಗಳೂರು : ಮುಡಾ ಸೈಟ್ ಹಗರಣದ ತನಿಖೆ ಚುರುಕಗೊಂಡಿದೆ. ಪ್ರಕರಣದಲ್ಲಿ A2 ಆಗಿರುವ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರನ್ನ ಲೋಕಾಯುಕ್ತ ಅಧಿಕಾರಿಗಳು ಮೊನ್ನೆ ವಿಚಾರಣೆ ಮಾಡಿದ್ದರು. ಮುಂದಿನ ವಾರ ಸಿಎಂಗೆ ನೋಟಿಸ್ ನೀಡುವ ಸಾಧ್ಯತೆ ಇದೆ. ಪ್ರಕರಣ ತನಿಖೆ ನಡೆಯುತ್ತಿರುವಾಗಲೇ ಮುಡಾ ಸೈಟ್ ಕೇಸ್‌ನಲ್ಲಿ ED ಅಧಿಕಾರಿಗಳು ಮೈಸೂರು ಹಾಗೂ ಬೆಂಗಳೂರಿನಲ್ಲಿ ರೇಡ್ ಮಾಡಿ, ಅಕ್ರಮವಾಗಿ ಸೈಟ್ ಪಡೆದವರಿಗೆ ED ಬಿಗ್ ಶಾಕ್ ಕೊಟ್ಟಿದೆ.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಪರಮಾಪ್ತ ರಾಕೇಶ್ ಪಾಪಣ್ಣ ಅರೆಸ್ಟ್ ಆಗಿದ್ದಾರೆ ಎನ್ನಲಾಗಿದೆ. ಮುಡಾ ಹಗರಣದ ಸೂತ್ರಧಾರಿ ಅರೆಸ್ಟ್ ಆಗುತ್ತಿದ್ದಂತೆ, ಇಬ್ಬರು ಸಚಿವರು ಸೇರಿ ಹಲವರಿಗೆ ನಡುಕ ಶುರುವಾಗಿದೆ. ಅರೆಸ್ಟ್ ಆಗಿರುವ ರಾಕೇಶ್ ಪಾಪಣ್ಣ ನಟ ದರ್ಶನ್ ಸೇರಿ ಹಲವರಿಗೆ ಆಪ್ತರಾಗಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು (ED) ಮೈಸೂರು ಹಾಗೂ ಬೆಂಗಳೂರಿನಲ್ಲಿ ರೇಡ್ ಮಾಡಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಇದೀಗ ED ಮುಂದೆ ಹಲವರ ನಂಟು ಬಯಲಾಗುವ ಆತಂಕ ಹೆಚ್ಚಾಗಿದೆ.
ಕೆಲವು ಸಚಿವರ ಜತೆ ನಿರಂತರ ಸಂಪರ್ಕದಲ್ಲಿದ್ದ ರಾಕೇಶ್ ಪಾಪಣ್ಣ, ಒಂದೇ ದಿನ 98,000 ಚ.ಮೀ ಮುಡಾ ಜಾಗ ಮಂಜೂರು ಮಾಡಿಸಿದ್ದರು. 50-50 ಅನುಪಾತದಡಿ ಮುಡಾ ಇತಿಹಾಸದಲ್ಲೇ ಬೃಹತ್ ಮೊತ್ತದ ಜಾಗ ಮಂಜೂರು ಮಾಡಿದ್ದ ರಾಕೇಶ್ ಪಾಪಣ್ಣಗೆ, ಸಹಕಾರ ನೀಡಿದ್ದ ಮುಡಾ ಆಯುಕ್ತರಾಗಿದ್ದ ಜಿ.ಟಿ. ದಿನೇಶ್ ಕುಮಾರ್ ರಾತ್ರೋರಾತ್ರಿ ಜಾಗ ಮಂಜೂರು ಮಾಡಿ ಟೈಟಲ್ ಕೊಡಿಸಿದ್ದರು. ಇದೀಗ ಮುಡಾ ಹಗರಣದಲ್ಲಿ ದೊಡ್ಡ ಬೇಟೆಯಾಗ್ತಿದ್ದಂತೆ ಎಲ್ಲಾ ಗಡಗಡ ಆಗಿದ್ದಾರೆ.
ಇದನ್ನೂ ಓದಿ : ಜೈಲು ಸೇರಿದ ನಟ ದರ್ಶನ್ಗೆ ಬಿಗ್ ಶಾಕ್.. ನಾಳೆಗೆ ಜಾಮೀನು ಅರ್ಜಿ ಮುಂದೂಡಿದ ಕೋರ್ಟ್..!