Download Our App

Follow us

Home » ರಾಜಕೀಯ » ಪ್ರಜ್ವಲ್​ ರೇವಣ್ಣ ಪೆನ್​ಡ್ರೈವ್ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ದೇವರಾಜೇಗೌಡ..!

ಪ್ರಜ್ವಲ್​ ರೇವಣ್ಣ ಪೆನ್​ಡ್ರೈವ್ ಪ್ರಕರಣದ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ದೇವರಾಜೇಗೌಡ..!

ಬೆಂಗಳೂರು :  ಕರ್ನಾಟಕದಲ್ಲಿ 2024ರ ಲೋಕಸಭೆ ಚುನಾವಣೆಗಿಂತ ಹೆಚ್ಚಾಗಿ ಪ್ರಜ್ವಲ್ ರೇವಣ್ಣ ಪೆನ್​ಡ್ರೈವ್ ಪ್ರಕರಣದ​​ ಬಗ್ಗೆಯೇ ಚರ್ಚೆ ಆಗುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಕಾಂಗ್ರೆಸ್ ನಾಯಕರು ಇದೇ ವಿಚಾರವನ್ನು ಅಸ್ತ್ರ ಮಾಡಿಕೊಂಡು ಮುನ್ನುಗ್ಗುತ್ತಿರುವ ಸಮಯದಲ್ಲೇ, ಇದೀಗ ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ದೇವರಾಜೇಗೌಡ ಅವರು, ಪೆನ್​ಡ್ರೈವ್ ಲೀಕ್ ಮಾಡಿದ್ದು ಕಾಂಗ್ರೆಸ್​ನವ್ರೇ. ನಾನು ಸ್ಟೇಟ್​ಮೆಂಟ್ ಕೊಟ್ರೆ ಸರ್ಕಾರ ಇರಲ್ಲ. ಸ್ಟೇಟ್​ಮೆಂಟ್ ಕೊಟ್ಟ ತಕ್ಷಣ ಸರ್ಕಾರ ಬಿದ್ದು ಹೋಗುತ್ತೆ.ಪೆನ್​ಡ್ರೈವ್​ ಬಗ್ಗೆ ಅಂತಹ ಭಯಾನಕ ಸಾಕ್ಷಿ‌ ನನ್ನ ಬಳಿ ಇದೆ ಎಂದು ತಿಳಿಸಿದ್ದಾರೆ.

ಪ್ರಜ್ವಲ್ ಮಾಜಿ ಡ್ರೈವರ್ ಕಾರ್ತಿಕ್ ಕಾಂಗ್ರೆಸ್​ನವರಿಂದ ನ್ಯಾಯ ಸಿಕ್ಕಿಲ್ಲ ಅಂತ ನನ್ನ ಬಳಿ ಬಂದಿದ್ದ. ಕಾಂಗ್ರೆಸ್ ನಾಯಕರಿಗೆ ಮೊದಲೇ ಪೆನ್ ಡ್ರೈವ್ ನೀಡಲಾಗಿತ್ತು.ಕಾಂಗ್ರೆಸ್ ನಾಯಕರೇ ಈ ವಿಡಿಯೋಗಳನ್ನು ರಿಲೀಸ್ ಮಾಡಿರಬಹುದು. ನಿನ್ನೆವರೆಗೂ ಸಂಪರ್ಕದಲ್ಲಿದ್ದ ಕಾರ್ತಿಕ್ ಇಂದು ನನ್ನ ಮೇಲೆ ಆರೋಪಿಸಿದ್ದಾರೆ. ರಾಜಕೀಯ ಕುತಂತ್ರಕ್ಕಾಗಿ ಎಷ್ಟೋ ಜನ ಮಹಿಳೆಯರ ಮರ್ಯಾದೆ ತೆಗೆದಿದ್ದಾರೆ.

ಇನ್ನು ಈ ಕೇಸ್ ಸಿಬಿಐ ಹೋಗೋವರೆಗೂ ನಾನು ಬಿಡಲ್ಲ. ಪ್ರಜ್ವಲ್ ಮಾಡಿದ್ದು ತಪ್ಪು, ರೇವಣ್ಣ ಫ್ಯಾಮಿಲಿಯನ್ನು ಸುಮ್ನೆ ಬಿಡಲ್ಲ. HD ರೇವಣ್ಣ ಕುಟುಂಬವನ್ನು ಬೀದಿಗೆ ತಂದೇ ತರುತ್ತೇನೆ. SIT ನೋಟಿಸ್ ಕೊಟ್ರೆ ನಾನು‌ ಹಾಜರಾಗ್ತಿನಿ ಎಂದ ದೇವರಾಜೇಗೌಡ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ : ಹುಬ್ಬಳ್ಳಿ ನೇಹಾ ಹಿರೇಮಠ ನಿವಾಸಕ್ಕೆ ವಿಪಕ್ಷ ನಾಯಕ ಆರ್.ಅಶೋಕ್, ಬಸವರಾಜ ಬೊಮ್ಮಾಯಿ ಭೇಟಿ..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here