ಬೆಂಗಳೂರು : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದ ಕೇಸ್ನಲ್ಲಿ ಬಂಧಿತರಾಗಿದ್ದ ಬಿಜೆಪಿ MLC ಸಿ.ಟಿ.ರವಿ ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ರೀಲಿಸ್ ಬೆನ್ನಲ್ಲೇ ಸಿ.ಟಿ.ರವಿ ಅವರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.
ಮಹತ್ವದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಟಿ ರವಿಯವರು, ನನ್ನನ್ನು ಕೊಲೆ ಮಾಡುವ ಷಡ್ಯಂತ್ರ ಇದ್ದಂತಿತ್ತು. ಇದಕ್ಕಾಗಿಯೇ ನನ್ನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದರೇನೋ? ಪದೇ-ಪದೇ ಯಾರೋ ಪೊಲೀಸರಿಗೆ ನಿರ್ದೇಶನ ನೀಡುತ್ತಿದ್ದರು. ಪೊಲೀಸರ ನಡೆ ಮೇಲೆ ನನಗೆ ಭಾರೀ ಅನುಮಾನ ಇದೆ. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು
ಸುದ್ದಿಗೋಷ್ಠಿಯಲ್ಲಿ ಬಿಜೆಪಿ MLC ಸಿ.ಟಿ.ರವಿ ಆಗ್ರಹಿಸಿದರು.
ಮೂರು ಜಿಲ್ಲೆಯ ಏಳೆಂಟು ಪೊಲೀಸ್ ಠಾಣೆಗಳಿಗೆ ನನ್ನನ್ನು ಅಲೆಸಿದ್ರು. ಕಾಡು, ಜಲ್ಲಿ ಕ್ರಷರ್, ಗದ್ದೆಗಳ ಪ್ರದೇಶಕ್ಕೆ ನನ್ನನ್ನು ಕರೆದೊಯ್ದರು. ಯಾರನ್ನೋ ಕರೆಸಿ ಹಲ್ಲೆ ಮಾಡಿಸೋ ಉದ್ದೇಶ ಇದ್ದಂತಿತ್ತು. ಡಿಸಿಎಂ ಡಿಕೆಶಿ, ಸಚಿವೆ ಹೆಬ್ಬಾಳ್ಕರ್ ನಿರ್ದೇಶನ ನೀಡಿರಬಹುದು. ಸದನದಲ್ಲೇ ನಿನ್ನ ಮುಗಿಸೋದಾಗಿ ಇವರೆಲ್ಲಾ ಬೆದರಿಸಿದ್ದರು ಎಂದು ತಿಳಿಸಿದರು.
ಇನ್ನು ನಾನು ಯಾವತ್ತೂ ಅವರನ್ನು ಲಕ್ಷ್ಮಕ್ಕ ಎಂತಲೇ ಕರೆಯುತ್ತಿದ್ದೆ. ಈಗಾಗಲೇ ಸಭಾಪತಿಯವರು ತಮ್ಮ ರೂಲಿಂಗ್ ನೀಡಿದ್ದಾರೆ. ಸಭಾಪತಿಗಳ ಅನುಮತಿಯನ್ನೂ ಪಡೆಯದೇ ಬಂಧಿಸಿದ್ದರು.
ನನ್ನ ಮೇಲೆ ಹಲ್ಲೆ, ಕೊಲೆ, ಬೆದರಿಕೆ ಯತ್ನ ನಡೆದ್ರೂ FIR ಮಾಡಿಲ್ಲ. ವಿಡಿಯೋ FSL ವರದಿ ಬಂದ ನಂತರ ಕ್ರಮ ಕೈಗೊಳ್ಳಬಹುದಿತ್ತು. ನಿಯಮ ಗಾಳಿಗೆ ತೂರಿ ನನ್ನನ್ನು ಬಂಧಿಸಿದ್ರು ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಸಂಕಷ್ಟ – ಕೊಹ್ಲಿ ಸಹ ಮಾಲೀಕತ್ವದ ಬಾರ್ & ರೆಸ್ಟೋರೆಂಟ್‌ಗೆ BBMPಯಿಂದ ನೋಟಿಸ್..!
Post Views: 4