ರಾಜಸ್ಥಾನ : ಡ್ರೈವರ್ ಇಲ್ಲದ ಕಾರು ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿರುವಾಗಲೇ ಸುಮಾರು ದೂರ ಚಲಿಸಿಕೊಂಡು ಹೋಗಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ. ಸುದರ್ಶನ್ ಪುರ ಪುಲಿಯಾ ಪ್ರದೇಶದಲ್ಲಿ ಉರಿಯುತ್ತಾ ಬರ್ತಿರೋ ಕಾರ್ ನೋಡಿ ಜನರು ಚೆಲ್ಲಾಪಿಲ್ಲಿಯಾಗಿದ್ದಾರೆ.
ಜೈಪುರದ ಹೆದ್ದಾರಿಯಲ್ಲಿ ಕ್ಷಣ ಮಾತ್ರದಲ್ಲಿ ಕಾರು ಧಗಧಗ ಹೊತ್ತಿ ಉರಿದಿದೆ. ಕಾರಿನಲ್ಲಿದ್ದ ಡ್ರೈವರ್ ತಕ್ಷಣವೇ ಕೆಳಗಡೆ ಇಳಿದಿದ್ದಾನೆ. ಆದರೆ ಕಾರಿನ ಹ್ಯಾಂಡ್ ಬ್ರೇಕ್ ಹಾಕದ ಕಾರಣ ಚಾಲಕನಿಲ್ಲದೆ ಹೊತ್ತಿ ಉರಿಯುತ್ತಿದ್ದ ಕಾರು ಇಳಿಜಾರಾದ ರಸ್ತೆಯಲ್ಲಿ ಸಾಗಿದೆ.
ಇನ್ನು ಇದರಿಂದ ಸುತ್ತಮುತ್ತಲ ಜನ ಭಯಭೀತರಾಗಿದ್ದು, ಕೊನೆಗೂ ಕಾರ್ ಡಿವೈಡರ್ಗೆ ಡಿಕ್ಕಿ ಹೊಡೆದು ನಿಂತುಕೊಂಡಿದೆ. ಅಷ್ಟರಲ್ಲಾಗಲೇ ಕಾರು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ : ಐಶ್ವರ್ಯಾ, ಧರ್ಮ, ಅನುಷಾ : ಬಿಗ್ಬಾಸ್ ಮನೆಯಲ್ಲಿ ಶುರುವಾಯ್ತಾ ಟ್ರಯಾಂಗಲ್ ಲವ್ ಸ್ಟೋರಿ?
Post Views: 173