Download Our App

Follow us

Home » ಸಿನಿಮಾ » ಐಶ್ವರ್ಯಾ, ಧರ್ಮ, ಅನುಷಾ : ಬಿಗ್​ಬಾಸ್​ ಮನೆಯಲ್ಲಿ ಶುರುವಾಯ್ತಾ ಟ್ರಯಾಂಗಲ್ ಲವ್​ ಸ್ಟೋರಿ?

ಐಶ್ವರ್ಯಾ, ಧರ್ಮ, ಅನುಷಾ : ಬಿಗ್​ಬಾಸ್​ ಮನೆಯಲ್ಲಿ ಶುರುವಾಯ್ತಾ ಟ್ರಯಾಂಗಲ್ ಲವ್​ ಸ್ಟೋರಿ?

ಬಿಗ್​ಬಾಸ್ ಗ್ರ್ಯಾಂಡ್ ಓಪನಿಂಗ್ ಪಡೆದು ಯಶಸ್ವಿಯಾಗಿ ಸಾಗುತ್ತಿದೆ. ಬಿಗ್ ಮನೆಯೊಳಗೆ ಸ್ಪರ್ಧಿಗಳು ಕೂಡ ತಮ್ಮ ಆಟವನ್ನು ಮುಂದುವರೆಸಿದ್ದಾರೆ. ಶನಿವಾರ-ಭಾನುವಾರ ಬಂದರೆ ಸಾಕು ಪ್ರೇಕ್ಷಕರೆಲ್ಲ ಕಿಚ್ಚನ ಪಂಚಾಯತಿಗಾಗಿ ಕಾಯುತ್ತಿರುತ್ತಾರೆ.

ಇದೀಗ ಸೂಪರ್ ಸಂಡೇ ವಿತ್ ಸುದೀಪ್ ಅವರ ಮತ್ತೊಂದು ವಿಡಿಯೋ ಔಟ್ ಆಗಿದೆ. ಈ ಪ್ರೋಮೋಗೆ ಅವಳ ಕಣ್ಣು ಇವನ ಮೇಲೆ, ಇವನ ಕಣ್ಣು ಮತ್ತೊಬ್ಬಳ ಮೇಲೆ, ಬಿಗ್​​ಬಾಸ್​ ಮನೆಯ ಸದಸ್ಯರೆಲ್ಲರ ಕಣ್ಣು ಈ ಮೂವರ ಮೇಲೆ ಎಂದು ಟ್ಯಾಗ್​ಲೈನ್ ಬರೆಯಲಾಗಿದೆ. ಅಂದರೆ ಬಿಗ್​ಬಾಸ್​ ಮನೆಯಲ್ಲಿ ಟ್ರಯಾಂಗಲ್ ಲವ್​ ಸ್ಟೋರಿ ಏನಾದರೂ ನಡೆಯುತ್ತಿದೆಯಾ ಎನ್ನುವ ಪ್ರಶ್ನೆ ಎಲ್ಲರನ್ನ ಕಾಡತೊಡಗಿದೆ.

ಧರ್ಮ ಅವರು ಅನುಷಾ ಬಳಿ ಮಾತನಾಡಿದ್ರೆ ಐಶ್ವರ್ಯ ಅವರ ಮುಖ ಸಣ್ಣದಾಗುತ್ತೆ ಎಂದು ಸುದೀಪ್ ಹೇಳಿದ್ದಾರೆ. ಇದಕ್ಕೆ ಉಗ್ರಂ ಮಂಜು ಮಾತಾಡಿ, ಏನ್ ಮಾಡುತ್ತಿದ್ದಾರೆ, ಎಲ್ಲಿಗೆ ಹೋಗುತ್ತಿದ್ದಾರೆ ಎಂದು ಅವರನ್ನೇ ನೋಡುತ್ತಿರುತ್ತಾರೆ ಎಂದಿದ್ದಾರೆ. ಆದರೆ ಇದಕ್ಕೆ ಧರ್ಮ ಪ್ರತಿಕ್ರಿಯಿಸಿ, ಅನುಷಾ ಅವರ ಜೊತೆ 4-5 ವರ್ಷದ ಫ್ರೆಂಡ್​ಶಿಪ್ ಇದೆ ಎಂದು ಹೇಳಿದ್ದಾರೆ. ಐಶ್ವರ್ಯ ಮಾತ್ರ ಅವರು ಚೇಂಜ್ ಆಗುತ್ತಿದ್ದಾರೆ ಎಂದು ಹೇಳಿದ್ದಕ್ಕೆ ಅನುಷಾ ನಮ್ಮನ್ನು ಅಬ್ಜರ್ವ್​ ಮಾಡುತ್ತಿರುತ್ತಾರೆ ಎಂದು ನೇರವಾಗಿ ಹೇಳಿದ್ದಾರೆ.

ಇದಕ್ಕೆ ಧರ್ಮ ಮುಖ ಮುಚ್ಚಿಕೊಂಡಿದ್ದು ಐಶ್ವರ್ಯ ಅವರ ಮುಖ ಚಿಕ್ಕದಾಗಬಹುದು, ನನ್ನದಲ್ಲ ಎಂದಿದ್ದಾರೆ. ಆದರೆ ಇದೆಲ್ಲದರ ಮಧ್ಯೆ ಗೋಲ್ಡ್​ ಸುರೇಶ್ ಮಾತನಾಡಿ, ಹಳೆದೊಂದು ಲವ್​ ಸ್ಟೋರಿ ಇದೆ ಸರ್.. ಎಂದು ಇವತ್ತಿನ ಪಂಚಾಯತಿಗೆ ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ.

ಇದನ್ನೂ ಓದಿ : ದಾವೂದ್​ ಲಿಂಕ್​ ಇರೋ ಯಾರನ್ನೂ ಬಿಡಲ್ಲ- ಟ್ವೀಟ್​​ನಲ್ಲಿ ಬಿಷ್ಣೋಯಿ ಗ್ಯಾಂಗ್​​ ಪೋಸ್ಟ್ ವೈರಲ್​​..!

Leave a Comment

DG Ad

RELATED LATEST NEWS

Top Headlines

ದಿಢೀರ್ ಬಿಗ್​ಬಾಸ್​ ಮನೆಯಿಂದ ಹೊರ ಬಂದ ಚೈತ್ರಾ ಕುಂದಾಪುರ.. ಕಾರಣವೇನು?

ಬೆಂಗಳೂರು : ಕನ್ನಡ ‘ಬಿಗ್​​ಬಾಸ್ ಸೀಸನ್​ 11’ರಲ್ಲಿ ಮನೆಯೊಳಗೆ ಸಖತ್ ಸೌಂಡ್ ಮಾಡುತ್ತಿರುವ ಸ್ಪರ್ಧಿ ಚೈತ್ರಾ ಕುಂದಾಪುರ ಅವರು ದಿಢೀರ್ ಬಿಗ್​ಬಾಸ್ ಮನೆಯಿಂದ  ​ಹೊರಗೆ ಬಂದಿದ್ದಾರೆ. ಶಾಕಿಂಗ್

Live Cricket

Add Your Heading Text Here