ಕೋಲಾರ : BPLಗೆ ಯಾರು ಅರ್ಹರಲ್ಲವೋ ಅವರ ಕಾರ್ಡ್ ಬದಲಾಗುತ್ತೆ, ಯಾವುದೇ ಕಾರಣಕ್ಕೂ BPL ಕಾರ್ಡ್ ರದ್ದು ಮಾಡಲ್ಲ. BPL ಕಾರ್ಡ್ಗಳನ್ನು APLಗೆ ಬದಲಾವಣೆ ಮಾಡ್ತೇವೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್ ಮುನಿಯಪ್ಪ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಕೋಲಾರದಲ್ಲಿ ಸಚಿವ ಕೆ.ಹೆಚ್.ಮುನಿಯಪ್ಪ ಮಾತನಾಡಿ, ದಕ್ಷಿಣ ಭಾರತದ ಬೇರೆ ರಾಜ್ಯಗಳಲ್ಲಿ ಶೇ.50ಕ್ಕೂ ಹೆಚ್ಚು BPL ಕಾರ್ಡ್ ಇಲ್ಲ. ಆದರೆ ಕರ್ನಾಟಕದಲ್ಲಿ 75 ರಿಂದ 80ರಷ್ಟು BPL ಕಾರ್ಡ್ ಇವೆ. ತೆರಿಗೆ ಪಾವತಿಯಲ್ಲಿ ನಮ್ಮ ರಾಜ್ಯ ಎರಡನೇ ಸ್ಥಾನದಲ್ಲಿದೆ. 10 ವರ್ಷಗಳಿಂದ ಎಲ್ಲಾ ಸರ್ಕಾರಗಳಲ್ಲಿ ಕಾರ್ಡ್ ನೀಡಲಾಗಿದೆ. ಐಟಿ ಪಾವತಿದಾರರು, ಸರ್ಕಾರಿ ಕೆಲಸದವರಿಗೂ ಕಾರ್ಡ್ ಸಿಕ್ಕಿವೆ ಹೀಗಾಗಿ 1 ಲಕ್ಷ 20 ಸಾವಿರ ಆದಾಯ ಮೀರಿದವರನ್ನು APL ಕಾರ್ಡ್ಗೆ ಸೇರಿಸ್ತೇವೆ ಎಂದು ಹೇಳಿದ್ದಾರೆ.
ಸಿಎಂ ಹಾಗೂ ಅಧ್ಯಕ್ಷರು ಜೊತೆ ಸಭೆ ಮಾಡಿದ್ದೇವೆ, ಸೂಚನೆ ನೀಡಿದ್ದಾರೆ. ಅಪ್ಪಿತಪ್ಪಿ BPL ರದ್ದು ಆಗಿದ್ರೆ ವಾಪಸ್ಸು ಕೊಡಲು ಸೂಚಿಸಿದ್ದಾರೆ. ಆರೋಗ್ಯಕ್ಕಾಗಿ ಕಾರ್ಡ್ ಬೇಕು ಅಂದ್ರೆ ಒಂದೇ ವಾರದಲ್ಲಿ ನೀಡ್ತೇವೆ. ಬಿಜೆಪಿ ಮಾಡ್ತಿರುವ ಆರೋಪದಲ್ಲಿ ವಾಸ್ತವಾಂಶ ಇಲ್ಲ ಎಂದು ಸಚಿವ ಕೆ.ಹೆಚ್ ಮುನಿಯಪ್ಪ ಹೇಳಿದರು.
ಇದನ್ನೂ ಓದಿ : ವಿಕ್ರಂ ಗೌಡ ಎನ್‌ಕೌಂಟರ್ ನಕಲಿ ಅಲ್ಲ, ನಕ್ಸಲ್ ದಾಳಿಗೆ ಪ್ಲಾನ್ ಮಾಡಿರಲಿಲ್ಲ – ಡಿಜಿಪಿ ಪ್ರಣಬ್ ಮೊಹಂತಿ..!
Post Views: 35