Download Our App

Follow us

Home » ಫ್ಲ್ಯಾಶ್ ನ್ಯೂಸ್ » ಬಾಲಿವುಡ್​ ನಟಿ ಪೂನಂ ಪಾಂಡೆ ಇನ್ನಿಲ್ಲ- 32 ವರ್ಷಕ್ಕೇ ಕೊನೆಯುಸಿರೆಳೆದ ಬೋಲ್ಡ್​ ಬ್ಯೂಟಿ..!

ಬಾಲಿವುಡ್​ ನಟಿ ಪೂನಂ ಪಾಂಡೆ ಇನ್ನಿಲ್ಲ- 32 ವರ್ಷಕ್ಕೇ ಕೊನೆಯುಸಿರೆಳೆದ ಬೋಲ್ಡ್​ ಬ್ಯೂಟಿ..!

ಬಾಲಿವುಡ್‌ನಲ್ಲಿ ತಮ್ಮ ಗ್ಲಾಮರ್‌ನಿಂದಲೇ ಫೇಮಸ್ ಆಗಿದ್ದ ನಟಿ ಪೂನಂ ಪಾಂಡೆ ನಿಧನರಾಗಿದ್ದಾರೆ. ಅವರಿಗೆ 32 ವರ್ಷ ವಯಸ್ಸಾಗಿತ್ತು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಅವರು ಸಾವನ್ನಪ್ಪುವುದಕ್ಕೆ ಕಾರಣ, ಕ್ಯಾನ್ಸರ್! ಹೌದು, ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪೂನಂ ಅವರು ಇಂದು (ಫೆ.2) ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

32 ವರ್ಷ ವಯಸ್ಸಿನ ಅವರು ಗರ್ಭಕಂಠದ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೆ ನಟಿ ಪೂನಂ ಪಾಂಡೆ ನಿಧನರಾಗಿದ್ದಾರೆಂದು ಅವರ ಮ್ಯಾನೇಜರ್​ ತಿಳಿಸಿದ್ದಾರೆ.

ಪೂನಂ ಪಾಂಡೆ ಅವರು 2013ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ‘ನಶಾ’ ಅವರ ನಟನೆಯ ಮೊದಲ ಸಿನಿಮಾ. ‘ಲವ್ ಈಸ್ ಪಾಯಿಸನ್’ ಹೆಸರಿನ ಕನ್ನಡ ಸಿನಿಮಾದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದರು. ತೆಲುಗು, ಬೋಜ್​ಪುರಿ ಸಿನಿಮಾಗಳಲ್ಲಿ ಪೂನಂ ನಟಿಸಿದ್ದಾರೆ. 2018ರಲ್ಲಿ ರಿಲೀಸ್ ಆದ ‘ದಿ ಜರ್ನಿ ಆಫ್ ಕರ್ಮ’ ಸಿನಿಮಾದಲ್ಲಿ ಅವರು ನಟಿಸಿದ್ದರು. ಆ ಬಳಿಕ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿಲ್ಲ.

ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳಲ್ಲೂ ಪೂನಂ ಕಾಣಿಸಿಕೊಂಡಿದ್ದಾರೆ. 2022ರಲ್ಲಿ ಪ್ರಸಾರ ಕಂಡ ‘ಲಾಕ್​ಅಪ್​’ ಶೋನಲ್ಲಿ ಸ್ಪರ್ಧಿ ಆಗಿ ಪೂನಂ ಕಾಣಿಸಿಕೊಂಡಿದ್ದರು. ಅವರು ಏಳನೇ ಸ್ಥಾನದಲ್ಲಿ ಎಲಿಮಿನೇಟ್ ಆದರು. ಹಲವು ವಿವಾದಗಳನ್ನು ಕೂಡ ಅವರು ಮಾಡಿಕೊಂಡಿದ್ದರು. ಈಗ ಅವರು ನಿಧನ ಹೊಂದಿದರು ಎಂದರೆ ಅದನ್ನು ನಂಬೋಕೆ ಫ್ಯಾನ್ಸ್​ಗೆ ಆಗುತ್ತಿಲ್ಲ.

ಇದನ್ನೂ ಓದಿ : ಹ್ಯಾಟ್ರಿಕ್ ಹೀರೋ ಶಿವಣ್ಣನಿಗೆ ‘ಸಪ್ತ ಸಾಗರದಾಚೆ ಎಲ್ಲೋ’ ನಿರ್ದೇಶಕ ಹೇಮಂತ್ ರಾವ್ ಆಕ್ಷನ್ ಕಟ್..!

Leave a Comment

DG Ad

RELATED LATEST NEWS

Top Headlines

ದರ್ಶನ್​ಗೆ ಮತ್ತೊಂದು ಸಂಕಷ್ಟ – ಪ್ರೊಡ್ಯೂಸರ್ ಭರತ್​​​ಗೆ ಬೆದರಿಕೆ ಹಾಕಿದ್ದ ಕೇಸ್​ಗೆ ಮರುಜೀವ.. NCR ದಾಖಲು..!

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆಯಲು ಕಷ್ಟಪಡುತ್ತಿರುವಾಗಲೇ ನಟ ದರ್ಶನ್​ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈ ಹಿಂದೆ ಯಂಗ್​ ಪ್ರೊಡ್ಯೂಸರ್ ಭರತ್​ಗೆ ಬೆದರಿಕೆ ಹಾಕಿದ್ದ

Live Cricket

Add Your Heading Text Here