ಮುಂಬೈ : 90ರ ದಶಕದಲ್ಲಿ ಬಾಲಿವುಡ್ನ ಸೂಪರ್ ಸ್ಟಾರ್ ಅಗಿ ಮಿಂಚಿದ ನಟ ಗೋವಿಂದ ಅವರ ಕಾಲಿಗೆ ತನ್ನದೇ ರಿವಾಲ್ವರ್ನಿಂದ ಗುಂಡು ತಗುಲಿದೆ. ಸದ್ಯ ನಟ ಗೋವಿಂದ ಅವರಿಗೆ ಅಂಧೇರಿಯಲ್ಲಿರುವ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ನೀಡಲಾಗುತ್ತಿದೆ.
ಲೈಸೆನ್ಸ್ ರಿವಾಲ್ವರ್ ಬಳಕೆ ಮಾಡ್ತಿದ್ದ ಗೋವಿಂದ ಇಂದು ಮುಂಜಾನೆ 4.45ರ ಸುಮಾರಿಗೆ ಮನೆ ಬಿಡುವಾಗ ಗನ್ ಚೆಕ್ ಮಾಡುತ್ತಿದ್ದರು. ಬಳಿಕ ಜೇಬಿಗೆ ರಿವಾಲ್ವರ್ ಇಟ್ಟುಕೊಳ್ಳುವಾಗ ರಿವಾಲ್ವರ್ ಲಾಕ್ ಓಪನ್ ಆಗಿದ್ರಿಂದ ಗುಂಡು ಹಾರಿದೆ.
ಮಿಸ್ ಫೈರಿಂಗ್ನಿಂದ ಮೊಣಕಾಲಿಗೆ ಗಾಯವಾಗಿದ್ದು, ಸದ್ಯ ಬಾಲಿವುಡ್ ನಟ ಗೋವಿಂದರನ್ನು ಅಂಧೇರಿಯಲ್ಲಿರುವ ಆಸ್ಪತ್ರೆ ದಾಖಲು ಮಾಡಲಾಗಿದೆ. ಇನ್ನು ಆಸ್ಪತ್ರೆಗೆ ಮುಂಬೈ ಪೊಲೀಸರು ಭೇಟಿ ನೀಡಿದ್ದಾರೆ.
ಇದನ್ನೂ ಓದಿ : ಲಡ್ಡು ವಿವಾದ : ಅಕ್ಟೋಬರ್ 3ಕ್ಕೆ ಪವನ್ ಕಲ್ಯಾಣ್ ತಿರುಮಲಕ್ಕೆ ಭೇಟಿ..!
Post Views: 406