Download Our App

Follow us

Home » ಮೆಟ್ರೋ » ಪ್ರಯಾಣಿಕರಿಗೆ BMRCL ಗುಡ್ ನ್ಯೂಸ್ – ಪೀಕ್​ ಅವರ್​ಗಳಲ್ಲಿ ಇನ್ಮೇಲೆ 3 ನಿಮಿಷಕ್ಕೊಂದು ಮೆಟ್ರೋ ರೈಲು ಓಡಾಟ..!

ಪ್ರಯಾಣಿಕರಿಗೆ BMRCL ಗುಡ್ ನ್ಯೂಸ್ – ಪೀಕ್​ ಅವರ್​ಗಳಲ್ಲಿ ಇನ್ಮೇಲೆ 3 ನಿಮಿಷಕ್ಕೊಂದು ಮೆಟ್ರೋ ರೈಲು ಓಡಾಟ..!

ಬೆಂಗಳೂರು : ಮೆಜೆಸ್ಟಿಕ್‌ನಿಂದ ಗರುಡಾಚಾರ್‌ಪಾಳ್ಯ ನಡುವಿನ ಜನ ದಟ್ಟನೆಯನ್ನು ನಿಯಂತ್ರಿಸುವ ಸಲುವಾಗಿ ನಮ್ಮ ಮೆಟ್ರೋ ಈ ಭಾಗದಲ್ಲಿ 3 ನಿಮಿಷಕ್ಕೊಮ್ಮೆ ಮೆಟ್ರೋ ಸೇವೆ ಒದಗಿಸಲು ಮುಂದಾಗಿದೆ.

ಹೆಚ್ಚು ಜನ ದಟ್ಟನೆ ಇರುವ ಪೀಕ್ ಆವರ್​ಗಳಲ್ಲಿ ಪ್ರತಿ‌ ಮೂರು ನಿಮಿಷಕ್ಕೆ ಮೆಟ್ರೋ ಸೇವೆ ಒದಗಿಸಲಾಗುತ್ತಿದೆ. ಸೋಮವಾರದಿಂದ ಬೆಳಿಗ್ಗೆ 8.45 ರಿಂದ 10.20ರವರೆಗೆ ಮೆಜೆಸ್ಟಿಕ್ ಮತ್ತು ಗರುಡಾಚಾರ್ ಪಾಳ್ಯ ಮೆಟ್ರೋ ನಿಲ್ದಾಣಗಳ ನಡುವೆ ಹೆಚ್ಚುವರಿ ಮೆಟ್ರೋ ಸೇವೆಯನ್ನು ಆರಂಭಿಸಲಿದೆ. ಈ ಮಾರ್ಗದಲ್ಲಿ 8.45 ರಿಂದ 10.20 ರವರೆಗೆ ಇನ್ಮುಂದೆ ಮೂರು ನಿಮಿಷಕ್ಕೊಮ್ಮೆ ಮೆಟ್ರೋ ರೈಲುಗಳು ಓಡಾಟ ನಡೆಸಲಿವೆ.

ಫೆಬ್ರವರಿ 26ರ ಸೋಮವಾರದಿಂದ 3 ನಿಮಿಷಕ್ಕೊಂದು ರೈಲು ಓಡಿಸಲು ಬಿಎಂಆರ್​​ಸಿಎಲ್​​​ ಮುಂದಾಗಿದೆ. ಪರ್ಪಲ್​​ ಲೈನ್​​ನಲ್ಲಿ ಮೆಜೆಸ್ಟಿಕ್​​ನಿಂದ ಗರುಡಾಚಾರ್​​ ಪಾಳ್ಯ ನಡುವೆ ಬೆಳಗ್ಗೆ 8.45ರಿಂದ 10.20 ನಿಮಿಷದವರೆಗೆ 3 ನಿಮಿಷಕ್ಕೊಂದು ರೈಲು ಓಡಲಿದೆ. ಶನಿವಾರ, ಭಾನುವಾರ, ರಜಾ ದಿನ ಹೊರತುಪಡಿಸಿ ಈ ಸಂಚಾರ ಇರಲಿದೆ. ಸದ್ಯ 5 ಮತ್ತು 6 ನಿಮಿಷಕ್ಕೊಂದು ಮೆಟ್ರೋ ರೈಲು ಸಂಚಾರ ಮಾಡುತ್ತಿವೆ.

ಪೀಕ್ ಆವರ್​ಗಳಲ್ಲಿ ಪ್ರಯಾಣಿಕರಿಗೆ ಆಗುತ್ತಿದ್ದ ತೊಂದರೆ ತಪ್ಪಿಸಲು ಹೆಚ್ಚುವರಿ ರೈಲು ಸೇವೆ ಒದಗಿಸಲು ನಮ್ಮ‌ ಮೆಟ್ರೋ ಈ ನಿಯಮ ಜಾರಿಗೆ ತಂದಿದೆ. ಬೈಯಪ್ಪನಹಳ್ಳಿಯಿಂದ‌ ಕೆಆರ್​ ಪುರಗೆ ಮೆಟ್ರೋ ಸಂಪರ್ಕವಾದ ಮೇಲೆ ಮೆಟ್ರೋದಲ್ಲಿ ಪ್ರಯಾಣಿಸುವವರ ಸಂಖ್ಯೆ ಕೂಡ ಹೆಚ್ಚಳವಾಗಿದೆ. ಹೆಚ್ಚುವರಿ ರೈಲನ್ನು ಓಡಿಸಿ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ನಿಯಮಿತ​ಗೆ ಸಾರ್ವಜನಿಕರು ಹಲವು ಬಾರಿ ಮನವಿ ಮಾಡಿದ್ದರು

ಇದನ್ನೂ ಓದಿ : ಬಿಟ್​ಕಾಯಿನ್ ಹಗರಣ ಕೇಸ್ : ಇನ್‌ಸ್ಪೆಕ್ಟರ್ ಡಿ.ಎಂ.ಪ್ರಶಾಂತ್ ಬಾಬು, ಸೈಬರ್ ಎಕ್ಸ್ ಪರ್ಟ್ ಕೆ.ಎಸ್.ಸಂತೋಷ್ ಕುಮಾರ್‌ಗೆ ಜಾಮೀನು..!

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here