Download Our App

Follow us

Home » ರಾಜಕೀಯ » ಬಿಜೆಪಿ ಶಾಸಕ ಹರೀಶ್​ ಪೂಂಜಾ ಠಾಣೆಗೆ ಹಾಜರ್ – ವಿಚಾರಣೆ ಬಳಿಕ ಸ್ಟೇಷನ್​ ಬೇಲ್​ ಮೇಲೆ ರಿಲೀಸ್..!

ಬಿಜೆಪಿ ಶಾಸಕ ಹರೀಶ್​ ಪೂಂಜಾ ಠಾಣೆಗೆ ಹಾಜರ್ – ವಿಚಾರಣೆ ಬಳಿಕ ಸ್ಟೇಷನ್​ ಬೇಲ್​ ಮೇಲೆ ರಿಲೀಸ್..!

ಮಂಗಳೂರು : ನಿನ್ನೆ ಬಿಜೆಪಿ ಶಾಸಕ ಹರೀಶ್ ಪೂಂಜಾ ಬಂಧನಕ್ಕೆ ಪೊಲೀಸರು ಮುಂದಾಗಿದ್ದು, ಬೆಳ್ತಂಗಡಿಯಲ್ಲಿ ಇಡೀ ದಿನ ಭಾರೀ ಹೈಡ್ರಾಮಾ ನಡೆದಿದೆ. ನಿನ್ನೆ ಬೆಳಗ್ಗೆಯೇ ಹರೀಶ್ ಪೂಂಜಾ ಬಂಧಿಸಲು ಪೊಲೀಸರು ಅವರ ಗರ್ಡಾಡಿಯ ಮನೆಗೆ ಬಂದಿದ್ದರು.

ಹರೀಶ್ ಪೂಂಜಾ ಮಾತ್ರ ನಾನು ಬರುವುದಿಲ್ಲ ಎಂದು ಹೇಳಿದ್ದರು. ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಸೇರಿದ ಕಾರಣ ಭಾರೀ ಸಂಖ್ಯೆಯಲ್ಲಿ ಪೊಲೀಸರು ಸಹ ಆಗಮಿಸಿದ್ದರು. ಇನ್ನೊಂದು ಕಡೆ ವಕೀಲರು ಸಹ ಮನೆಗೆ ಆಗಮಿಸಿದ್ದರು. ಈ ವಿಷಯ ತಿಳಿದ ಪೂಂಜಾ ಬೆಂಬಲಿಗರು ಕೂಡ ಭಾರೀ ಸಂಖ್ಯೆಯಲ್ಲಿ ಸೇರಿದ್ದರು. ಸಂಸದ ನಳಿನ್ ಕುಮಾರ್ ಕಟೀಲ್ ದಕ್ಷಿಣ ಕನ್ನಡ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟಾ ಸೇರಿ ಹಲವು ಬಿಜೆಪಿ ನಾಯಕರು ಹರೀಶ್ ಪೂಂಜಾ ಮನೆಗೆ ಆಗಮಿಸಿದರು.

ಯಾವುದೇ ಕಾರಣಕ್ಕೂ ಪೂಂಜಾ ಬಂಧಿಸಬಾರದು. ಪೊಲೀಸರು ವಾಪಸ್ ಹೋಗ್ಬೇಕು ಎಂದು ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದರು. ಉದ್ದೇಶಪೂರ್ವಕವಾಗಿ ಪೂಂಜಾರನ್ನು ಜೈಲಿಗೆ ಕಳಿಸುವ ಷಡ್ಯಂತ್ರ ನಡೆದಿದೆ ಎಂದು ಆಕ್ರೋಶ ಹೊರಹಾಕಿದರು. ಶಾಸಕರು ಏನೋ ಉದ್ವೇಗದಿಂದ ಮಾತಾಡಿದ್ದಾರೆ. ಆದರೆ ದುರುದ್ದೇಶದಿಂದ ಕೂಡಿಲ್ಲ. ಇದನ್ನೇ ನೆಪ ಮಾಡಿಕೊಂಡು ಶಾಸಕರ ಬಂಧನಕ್ಕೆ ಮುಂದಾಗಿರೋದು ಸರಿಯಲ್ಲ. ಮುಂದೆ ಆಗುವ ಅನಾಹುತಗಳಿಗೆ ಪೊಲೀಸರೇ ಹೊಣೆ ಆಗ್ತಾರೆ ಎಂದು ಬಿಜೆಪಿ ಎಚ್ಚರಿಕೆ ನೀಡಿತ್ತು. ಪ್ರತಿಭಟನೆ ಜೋರಾಗುತ್ತಿದ್ದಂತೆ ಶಾಸಕ ಹರೀಶ್ ಪೂಂಜಾರನ್ನು ಬಂಧಿಸದೆ, ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿ  ಹರೀಶ್‌ ಪೂಂಜಾ ಅವರಿಗೆ ನೋಟಿಸ್‌ ಜಾರಿ ಮಾಡಿ ಪೊಲೀಸರು ವಾಪಸ್ ತೆರಳಿದರು.

ಬೆಳ್ತಂಗಡಿಯಲ್ಲಿ ದಿನವಿಡೀ ನಡೆದ ಹೈಡ್ರಾಮಾದ ಬಳಿಕ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ರಾತ್ರಿ 9.30ರ ಸುಮಾರಿಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಂದು ವಿಚಾರಣೆಗೆ ಹಾಜರಾಗಿದ್ದರು. ಅವರನ್ನು ಪೊಲೀಸರು ವಿಚಾರಣೆ ನಡೆಸಿದ ಬಳಿಕ ಸ್ಟೇಷನ್ ಬೇಲ್​ ಮೇಲೆ ರಿಲೀಸ್​ ಮಾಡಿದರು.

ಹಿನ್ನೆಲೆ : ಅನುಮತಿ ಪಡೆಯದೇ ಪ್ರತಿಭಟನೆ ನಡೆಸಿ ಬೆಳ್ತಂಗಡಿ ಪೊಲೀಸರಿಗೆ ಬೆದರಿಕೆ ಅರೋಪದ ಮೇಲೆ ಹರೀಶ್ ಪೂಂಜಾ ವಿರುದ್ಧ ಕೇಸ್ ದಾಖಲಾಗಿತ್ತು. ಅರೆಸ್ಟ್ ಆಗಿರುವ ಕಾರ್ಯಕರ್ತರಿಗಾಗಿ ಪೊಲೀಸರ ಕಾಲರ್ ಹಿಡಿಯಲು ಸಿದ್ದ ಬೆಂಗಳೂರಿನ ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿಯ ಪೊಲೀಸ್ ಠಾಣೆಗೆ ಆದ ಗತಿಯನ್ನು ಬೆಳ್ತಂಗಡಿ ಠಾಣೆಗೂ ಕಾಣಿಸ್ತೇನೆ ಎಂದು ಹರೀಶ್ ಪೂಂಜಾ ಬೆದರಿಕೆ ಹಾಕಿದ್ದರು. ಈ ಸಂಬಂಧ ಬೆಳ್ತಂಗಡಿ ಬಿಜೆಪಿ ಶಾಸಕರ ವಿರುದ್ಧ ಐಪಿಸಿ 143, 147, 341, 504, 506 ಜೊತೆಗೆ 149 ಸೆಕ್ಷನ್‌ಗಳ ಅಡಿ ಒಟ್ಟು ಎರಡು ಕೇಸ್ ದಾಖಲಾಗಿತ್ತು.

ಇದನ್ನೂ ಓದಿ : “ಇಂಡಿಯನ್ 2” ಸಿನಿಮಾದ ಮೊದಲ ಹಾಡು ರಿಲೀಸ್ – ಕುದುರೆ ಏರಿ ಬಂದ ಕಮಲ್ ಹಾಸನ್..!

 

 

 

 

 

Leave a Comment

DG Ad

RELATED LATEST NEWS

Top Headlines

ವಿದ್ಯುತ್ ಸಂಪರ್ಕ ನೀಡಲು 16.5 ಲಕ್ಷ ರೂ. ಲಂಚಕ್ಕೆ ಬೇಡಿಕೆ – ರೆಡ್​ ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಬೆಸ್ಕಾಂ AEE-JE ಅಧಿಕಾರಿಗಳು..!

ಬೆಂಗಳೂರು : ಲಂಚ ಸ್ಚೀಕರಿಸುವಾಗ AEE, JE ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ. ಅವಲಹಳ್ಳಿ ಬೆಸ್ಕಾಂ AEE ರಮೇಶ್ ಬಾಬು, JE ನಾಗೇಶ್

Live Cricket

Add Your Heading Text Here