Download Our App

Follow us

Home » ರಾಜಕೀಯ » ಬೆಂಗಳೂರು ಗ್ರಾಮಾಂತರಕ್ಕೆ ಮೈತ್ರಿ ಅಭ್ಯರ್ಥಿ ಬಗ್ಗೆ ಮಹತ್ವದ ಕುರಿತು ನಡೆಸಿದ ಬಿಜೆಪಿ, ಜೆಡಿಎಸ್ ನಾಯಕರು..!

ಬೆಂಗಳೂರು ಗ್ರಾಮಾಂತರಕ್ಕೆ ಮೈತ್ರಿ ಅಭ್ಯರ್ಥಿ ಬಗ್ಗೆ ಮಹತ್ವದ ಕುರಿತು ನಡೆಸಿದ ಬಿಜೆಪಿ, ಜೆಡಿಎಸ್ ನಾಯಕರು..!

ಬೆಂಗಳೂರು : ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಯವರ ನಿವಾಸದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ನಿನ್ನೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿ ಕುರಿತು ಚರ್ಚೆ ನಡೆದಿದೆ. 

ಡಾ. ಮಂಜುನಾಥ್ ಮತ್ತು ಸಿ.ಪಿ. ಯೋಗೇಶ್ವರ್ ಸ್ಪರ್ಧೆ ಕುರಿತು ನಿನ್ನೆ ಸಭೆಯಲ್ಲಿ ಮಹತ್ವದ ಮಾತುಕತೆ ನಡೆದಿದೆ. ಇಬ್ಬರ ಹೆಸರನ್ನ ಹೈಕಮಾಂಡ್​​ಗೆ ಕಳಿಸುವ ಬಗ್ಗೆ ನಿನ್ನೆ ಸಭೆಯಲ್ಲಿ ನಿರ್ಧಾರ ಮಾಡಿದ್ದಾರೆ. ಇಬ್ಬರಲ್ಲಿ ಒಬ್ಬರ ಸ್ಪರ್ಧೆಗೆ ಎರಡು ಪಕ್ಷದ ನಾಯಕರ ಒಮ್ಮತದ ಅಭಿಪ್ರಾಯವಿದೆ. ಇವರಿಬ್ಬರ ಹೆಸರಿನ ಜೊತೆ ಕುಮಾರಸ್ವಾಮಿ ಹೆಸರನ್ನು ಬಿಜೆಪಿ-ಜೆಡಿಎಸ್ ನಾಯಕರು ಪ್ರಸ್ತಾಪ ಮಾಡಿದ್ದಾರೆ.

ಬೆಂಗಳೂರು ಗ್ರಾಮಾಂತರದಿಂದ ಹಿಂದೆ ಕುಮಾರಸ್ವಾಮಿ ಗೆದ್ದಿದ್ದರು, ಈ ಹಿನ್ನಲೆಯಲ್ಲಿ ಕುಮಾರಸ್ವಾಮಿ ಸ್ಪರ್ಧೆಗೂ ನಾಯಕರ ಅಭಿಪ್ರಾಯಪಟ್ಟಿದ್ಧಾರೆ. ಬಿಜೆಪಿ ಹೈಕಮಾಂಡ್​​ಗೆ ಡಾ.ಮಂಜುನಾಥ್, ಯೋಗೇಶ್ವರ್, ಕುಮಾರಸ್ವಾಮಿ ಹೆಸರು ಕಳಿಸುವ ಬಗ್ಗೆ ನಿನ್ನೆ ಸಭೆಯಲ್ಲಿ ನಿರ್ಧಾರ ಮಾಡಿದ್ದಾರೆ. ಹಾಗಾದ್ರೆ ಬೆಂಗಳೂರು ಗ್ರಾಮಾಂತರದಲ್ಲಿ ಯಾರು ಸ್ಪರ್ಧೆ ಮಾಡ್ತಾರೆ..? ಬಿಜೆಪಿ ಹೈಕಮಾಂಡ್ ತೀರ್ಮಾನದ ನಂತರ ಯಾರ ಸ್ಪರ್ಧೆ ಅನ್ನೋದು ಫೈನಲ್ ಆಗುವ ಸಾಧ್ಯತೆಯಿದೆ.

ಇದನ್ನೂ ಓದಿ : ದೇಶದ ಮೊದಲ ಅಂಡರ್ ವಾಟರ್ ಮೆಟ್ರೋಗೆ ಇಂದು ಚಾಲನೆ ನೀಡಲಿದ್ದಾರೆ ಪ್ರಧಾನಿ ಮೋದಿ..!

Leave a Comment

DG Ad

RELATED LATEST NEWS

Top Headlines

ಬೆಂಗಳೂರು : ಕುಡಿದ ಮತ್ತಲ್ಲಿ ಅಪಾರ್ಟ್​ಮೆಂಟ್​ನ ಬೇಸ್​ಮೆಂಟ್​​ನಲ್ಲಿ ಯುವಕರ ಮಧ್ಯೆ ಹೊಡೆದಾಟ – ವಿಡಿಯೋ ವೈರಲ್​..!

ಬೆಂಗಳೂರು : ಬೆಳಂದೂರಿನ ಜುನ್ನಸಂದ್ರದ ಅಪಾರ್ಟ್​ಮೆಂಟ್​ನ ಬೇಸ್​ಮೆಂಟ್​​ನಲ್ಲಿ ಯುವಕರ ಮಧ್ಯೆ ಗಲಾಟೆ ನಡೆದಿದೆ. ಕುಡಿದ ನಶೆಯಲ್ಲಿ ಹುಡುಗರು ಹೊಡೆದಾಡಿಕೊಂಡಿದ್ದು, ಪುಂಡರ ಕ್ವಾಟ್ಲೆಗೆ ಅಕ್ಕಪಕ್ಕದ ನಿವಾಸಿಗಳು ಹೈರಾಣಾಗಿದ್ದಾರೆ. ಯುವಕರ

Live Cricket

Add Your Heading Text Here