Download Our App

Follow us

Home » ಜಿಲ್ಲೆ » ಉಡುಪಿಯ ಪಡುಕೆರೆ ಬೀಚ್‌ನಲ್ಲಿ ಯುವತಿಯ ಬಿಕಿನಿ ಫೋಟೋಶೂಟ್‌ – ಪೊಲೀಸರ ಅಡ್ಡಿಗೆ ಮಾಡಲ್​​ ಆಕ್ಷೇಪ..!

ಉಡುಪಿಯ ಪಡುಕೆರೆ ಬೀಚ್‌ನಲ್ಲಿ ಯುವತಿಯ ಬಿಕಿನಿ ಫೋಟೋಶೂಟ್‌ – ಪೊಲೀಸರ ಅಡ್ಡಿಗೆ ಮಾಡಲ್​​ ಆಕ್ಷೇಪ..!

ಉಡುಪಿ : ಉಡುಪಿಯ ಪಡುಕೆರೆ ಬೀಚ್‌ನಲ್ಲಿ ಯುವತಿಯೊಬ್ಬರು ಬಿಕಿನಿ ಫೋಟೋಶೂಟ್‌ ಮಾಡಿಸಿಕೊಳ್ಳುವ ವೇಳೆ ಪೊಲೀಸರು ತಡೆದಿದ್ದಾರೆ. ಇದಕ್ಕೆ ಯುವತಿ ಇನ್​ಸ್ಟಾಗ್ರಾಂನಲ್ಲಿ ಕಹಿ ಅನುಭವದ ಮಾಹಿತಿ ಹಂಚಿಕೊಂಡಿದ್ದಾರೆ.

ಯುವತಿಯ ಬಿಕಿನಿ ಫೋಟೋಶೂಟ್ ಮಾಡುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಜತೆಗೆ, ಎಚ್ಚರಿಕೆ ನೀಡುವಂತೆಯೂ ತಿಳಿಸಿದ್ದರು ಎನ್ನಲಾಗಿದೆ. ಹಾಗಾಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.

ಈ ವಿಚಾರವಾಗಿ ಯುವತಿ ಇನ್​ಸ್ಟಾಗ್ರಾಂನಲ್ಲಿ ಫೋಟೋಶೂಟ್‌ ಮಾಡಿದ ಫೋಟೋ ಸಹಿತ ಮಾಹಿತಿ ನೀಡಿದ್ದಾರೆ. ಫೋಟೋಶೂಟ್ ಮಾಡಿಸುತ್ತಿದ್ದಾಗ ಬಟ್ಟೆ ಬದಲಿಸುವಂತೆ ಸ್ಥಳೀಯ ಪೊಲೀಸರು ಸೂಚಿಸಿದ್ದಾರೆ. ಬೇರೆ ಬಟ್ಟೆ ಹಾಕದಿದ್ದರೆ ಸ್ಥಳೀಯರು ಹಲ್ಲೆ ನಡೆಸುತ್ತಾರೆ ಎಂದು ಹೇಳಿದ್ದಾರೆ. ನೈತಿಕ ಪೊಲೀಸ್‌ಗಿರಿ ನಡೆಸಲು ಸ್ಥಳೀಯರು ಯಾರೆಂದು ಯುವತಿ ಪ್ರಶ್ನಿಸಿದ್ದಾರೆ.

ಬೀಚ್‌ ಸಾರ್ವಜನಿಕ ಪ್ರದೇಶ, ಫೋಟೋಶೂಟ್‌ ಮಾಡಿದ್ರೆ ತಪ್ಪೇನು? ಬಿಕಿನಿ ಹಾಕಿ ಫೋಟೋಶೂಟ್‌ ಮಾಡುವುದು ಕಾನೂನು ಉಲ್ಲಂಘನೆಯೇ? ಬಿಕಿನಿ ಹಾಕಬಾರದು ಎಂದು ಕಾನೂನು ಇದೆಯೇ ಎಂದು ಸಾಮಾಜಿಕ ಜಾಲತಾಣದ ಮೂಲಕ ಯುವತಿ ಉಡುಪಿ ಪೊಲೀಸರನ್ನು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ : ಹನಿಮೂನ್ ಪ್ಲೇಸ್ ರಿವೀಲ್ ಮಾಡಿದ ತರುಣ್-ಸೋನಲ್ – ಎಲ್ಲಿಗೆ ಹೋಗ್ತಿದ್ದಾರೆ ಗೊತ್ತಾ?

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here