ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಅವರನ್ನು ಕೋರ್ಟ್ ಮತ್ತೆರಡು ದಿನ ಪೊಲೀಸ್ ಕಸ್ಟಡಿಗೆ ನೀಡಿದೆ. ಇದೇ ವೇಳೆ ದರ್ಶನ್ ಮನೆಯಲ್ಲಿ ಪೊಲೀಸರು ಲಕ್ಷ ಲಕ್ಷ ಹಣ ಸೀಜ್ ಮಾಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಚಾವಾಗಲು ಹಾಗೂ ಮುಂದಿನ ಕಾನೂನು ಪ್ರಕ್ರಿಯೆಗಳನ್ನು ಎದುರಿಸಲು, ಕೊಲೆ ಸಾಕ್ಷ್ಯ ನಾಶಕ್ಕೆ ಆರೋಪಿ ದರ್ಶನ್ ಹೊಂದಿಸಿದ್ದ 40 ಲಕ್ಷ ರೂ. ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಬೆಂಗಳೂರಿನ ಪ್ರಭಾವಿ ಬಿಜೆಪಿ MLA ಆಪ್ತ ಮೋಹನ್‌ರಾಜ್ ಎಂಬುವವರಿಂದ ದರ್ಶನ್ ಈ ಹಣ ಪಡೆದು ಮನೆಯಲ್ಲಿಇಟ್ಟಿದ್ದರು. ಇದರ ಮಾಹಿತಿ ಅರಿತ ತನಿಖಾಧಿಕಾರಿಗಳು ಜೂ.19ರಂದು ದಾಳಿ ನಡೆಸಿ ದರ್ಶನ್ ಮನೆಯ ಬೆಡ್ ರೂಂನ ಕಬೋಡ್ನಲ್ಲಿ ಇರಿಸಿದ್ದ 37.40 ಲಕ್ಷ ರೂ. ನಗದು ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ದರ್ಶನ್ಗೆ 40 ಲಕ್ಷ ಹೊಂದಿಸಿ ಕೊಟ್ಟಿದ್ದೇ MLA ಆಪ್ತ ಎಂಬುದು ಬಹಿರಂಗವಾಗಿದೆ. ರಿಮ್ಯಾಂಡ್ ಅರ್ಜಿಯಲ್ಲಿ MLA ಆಪ್ತ ಮೋಹನ್‌ರಾಜ್ ಹೆಸರನ್ನು ಉಲ್ಲೇಖಿಸಲಾಗಿದೆ. ಇನ್ನು ಈ ಕೇಸ್ ಪ್ರಭಾವಿ MLA ಬುಡಕ್ಕೆ ಬರುವ ಸಾಧ್ಯತೆ ಹೆಚ್ಚಾಗಿದ್ದು, ಈವರೆಗೆ ಈ ಕೇಸ್ನಲ್ಲಿ ದರ್ಶನ್ಗೆ ಸೇರಿದ 70 ಲಕ್ಷ ವಶಕ್ಕೆ ಪಡೆಯಲಾಗಿದೆ.
ಅಷ್ಟೇ ಅಲ್ಲದೇ ವಿಜಯಲಕ್ಷ್ಮಿ ಇರುವ ಅಪಾರ್ಟ್ ಮೆಂಟ್ನಲ್ಲೂ ಪೊಲೀಸರು 3 ಲಕ್ಷ ಹಣವನ್ನು ಸೀಜ್ ಮಾಡಿದ್ದಾರೆ ಎಂದು ವರದಿ ಆಗಿದೆ. ಅಂತೆಯೇ ಶೆಡ್ ಕೆಲಸಗಾರರಿಗೂ ಭಾರೀ ಹಣದ ಆಮಿಷ ಒಡ್ಡಲಾಗಿದ್ದು, ಕೋರ್ಟ್ಗೆ ಸಲ್ಲಿಸಿದ ರಿಮ್ಯಾಂಡ್ ಅರ್ಜಿಯಲ್ಲಿ ಈ ಬಗ್ಗೆ ಸ್ಪೋಟಕ ಮಾಹಿತಿ ಹೊರಬಿದ್ದಿದೆ.
ಇದನ್ನೂ ಓದಿ : ನೆಲಮಂಗಲ, ಮಾಗಡಿ ಆಸುಪಾಸಿನಲ್ಲಿ ಮತ್ತೊಂದು ಇಂಟರ್‌ನ್ಯಾಷನಲ್ ಏರ್ಪೋರ್ಟ್ ಸಾಧ್ಯತೆ..!