ಗಾಯಕ, ಸ್ಟ್ಯಾಂಡಪ್ ಕಾಮಿಡಿಯನ್, ಹಿಂದಿ ಬಿಗ್ ಬಾಸ್ 17ರ ವಿನ್ನರ್ ಮುನ್ನಾವರ್ ಫಾರುಕಿಗೆ ಜೀವ ಬೆದರಿಕೆ ಕರೆಗಳು ಬಂದಿವೆ. ಈ ಹಿನ್ನೆಲೆ ಅವರಿಗೆ ನೀಡುತ್ತಿದ್ದ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಮುನ್ನಾವರ್ ಫಾರುಕಿಗೆ ಬೆದರಿಕೆ ಕರೆ ಬಂದ ತಕ್ಷಣವೇ ದೆಹಲಿ ಪೊಲೀಸರು ಕಾರ್ಯಪ್ರವರ್ತರಾಗಿದ್ದು, ಹೆಚ್ಚಿನ ಭದ್ರತೆ ಒದಗಿಸಿದ್ದಾರೆ. ಯೂಟ್ಯೂಬರ್, ಮಾಜಿ ಬಿಗ್ ಬಾಸ್ ಸ್ಫರ್ದಿ ಎಲ್ವಿಶ್ ಯಾದವ್ ಜೊತೆ ಮುನ್ನಾವರ್ ಫಾರುಕಿ ದೆಹಲಿಯ ಖಾಸಗಿ ಹೋಟೆಲ್ವೊಂದರಲ್ಲಿ ತಂಗಿದ್ದರು. ಅದೇ ಹೋಟೆಲ್ನಲ್ಲಿ ಶೂಟರ್ಗಳು ಇದ್ದರು ಎಂದು ತಿಳಿದುಬಂದಿದೆ.
ಮುನ್ನಾವರ್ ಫಾರುಕಿ ಮತ್ತು ಎಲ್ವಿಶ್ ಯಾದವ್ ಐಜಿಐ ಸ್ಟೇಡಿಯಂಗೆ ಸೌಹಾರ್ದ ಪಂದ್ಯ ಆಡಲು ಸೇರಿದ್ದರು. ಈ ವೇಳೆ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ. ಬೆದರಿಕೆ ಕರೆಯಿಂದಾಗಿ ಸ್ವಲ್ಪ ಸಮಯದವರೆಗೆ ಪಂದ್ಯವನ್ನು ನಿಲ್ಲಿಸಲಾಗಿತ್ತು. ಬಳಿಕ ಸಂಪೂರ್ಣ ಭದ್ರತೆ ನೀಡಿ ಅವರನ್ನು ಮುಂಬೈಗೆ ವಾಪಸ್ ಕಳುಹಿಸಲಾಗಿದೆ. ಸದ್ಯ ಪೊಲೀಸರು ಘಟನೆಯ ಕುರಿತು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಕೋಲಾರದಲ್ಲಿ ಭಯಾನಕ ಆ್ಯಕ್ಸಿಡೆಂಟ್.. ಡಿವೈಡರ್ಗೆ ಡಿಕ್ಕಿಯಾಗಿ 3