Download Our App

Follow us

Home » ಸಿನಿಮಾ » ಮಾಜಿ ಬಿಗ್​ ಬಾಸ್​ ವಿನ್ನರ್​​ಗೆ ಬೆದರಿಕೆ ಕರೆ.. ಭದ್ರತೆ ಹೆಚ್ಚಿಸಿದ ಪೊಲೀಸರು..!

ಮಾಜಿ ಬಿಗ್​ ಬಾಸ್​ ವಿನ್ನರ್​​ಗೆ ಬೆದರಿಕೆ ಕರೆ.. ಭದ್ರತೆ ಹೆಚ್ಚಿಸಿದ ಪೊಲೀಸರು..!

ಗಾಯಕ, ಸ್ಟ್ಯಾಂಡಪ್ ಕಾಮಿಡಿಯನ್, ಹಿಂದಿ ಬಿಗ್​ ಬಾಸ್ 17ರ​ ವಿನ್ನರ್ ಮುನ್ನಾವರ್ ಫಾರುಕಿಗೆ ಜೀವ ಬೆದರಿಕೆ ಕರೆಗಳು ಬಂದಿವೆ. ಈ ಹಿನ್ನೆಲೆ ಅವರಿಗೆ ನೀಡುತ್ತಿದ್ದ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಮುನ್ನಾವರ್​​ ಫಾರುಕಿಗೆ ಬೆದರಿಕೆ ಕರೆ ಬಂದ ತಕ್ಷಣವೇ ದೆಹಲಿ ಪೊಲೀಸರು ಕಾರ್ಯಪ್ರವರ್ತರಾಗಿದ್ದು, ಹೆಚ್ಚಿನ ಭದ್ರತೆ ಒದಗಿಸಿದ್ದಾರೆ. ​​ಯೂಟ್ಯೂಬರ್​, ಮಾಜಿ ಬಿಗ್​ ಬಾಸ್​ ಸ್ಫರ್ದಿ ​ಎಲ್ವಿಶ್​​​ ಯಾದವ್​ ಜೊತೆ ಮುನ್ನಾವರ್ ಫಾರುಕಿ ದೆಹಲಿಯ ಖಾಸಗಿ ಹೋಟೆಲ್​ವೊಂದರಲ್ಲಿ​​ ತಂಗಿದ್ದರು. ಅದೇ ಹೋಟೆಲ್​​ನಲ್ಲಿ ಶೂಟರ್​​ಗಳು ಇದ್ದರು ಎಂದು ತಿಳಿದುಬಂದಿದೆ.

ಮುನ್ನಾವರ್​ ಫಾರುಕಿ ಮತ್ತು ಎಲ್ವಿಶ್​​ ಯಾದವ್​ ಐಜಿಐ ಸ್ಟೇಡಿಯಂಗೆ ಸೌಹಾರ್ದ ಪಂದ್ಯ ಆಡಲು ಸೇರಿದ್ದರು. ಈ ವೇಳೆ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ. ಬೆದರಿಕೆ ಕರೆಯಿಂದಾಗಿ ಸ್ವಲ್ಪ ಸಮಯದವರೆಗೆ ಪಂದ್ಯವನ್ನು ನಿಲ್ಲಿಸಲಾಗಿತ್ತು. ಬಳಿಕ ಸಂಪೂರ್ಣ ಭದ್ರತೆ ನೀಡಿ ಅವರನ್ನು ಮುಂಬೈಗೆ ವಾಪಸ್​ ಕಳುಹಿಸಲಾಗಿದೆ. ಸದ್ಯ ಪೊಲೀಸರು ಘಟನೆಯ ಕುರಿತು ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ : ಕೋಲಾರದಲ್ಲಿ ಭಯಾನಕ ಆ್ಯಕ್ಸಿಡೆಂಟ್..​ ಡಿವೈಡರ್​ಗೆ ಡಿಕ್ಕಿಯಾಗಿ 3

 

 

Leave a Comment

DG Ad

RELATED LATEST NEWS

Top Headlines

4 ಅಂತಸ್ತಿನ ಕಟ್ಟಡ ಕುಸಿತ – ಕೂದಲೆಳೆ ಅಂತರದಲ್ಲಿ ಪಾರಾದ ತಾಯಿ, ಮಗು..!

ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ತಾಯಿ ಮಗು ಪ್ರಾಣಾಪಾಯದಿಂದ ಪಾರಾಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಆಘಾತಕಾರಿ ಘಟನೆಯ ಸಂಪೂರ್ಣ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವೀಡಿಯೊದಲ್ಲಿ

Live Cricket

Add Your Heading Text Here