ಬೆಂಗಳೂರು : ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸದ್ಯ ದಿನಕ್ಕೊಂದು ಟಾಸ್ಕ್ ಹಾಗೂ ಸ್ಪರ್ಧಿಗಳ ಚುರುಕತನದ ಆಟಗಳಿಂದ ಸಖತ್ ಸುದ್ದಿಯಲ್ಲಿದೆ. ಸೋಷಿಯಲ್ ಮೀಡಿಯಾದಲ್ಲಿ ಫಿನಾಲೆ ಬೇಗ ಆಗಲಿ ಎಂದು ವೀಕ್ಷಕರು ಕಮೆಂಟ್ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಈಗ ಬಿಗ್ಬಾಸ್ಗೆ ಮತ್ತೆ ಸಂಕಷ್ಟ ಎದುರಾಗಿದೆ. ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅನುಮತಿ ನೀಡಿಲ್ಲವೆಂದು ರಾಮೋಹಳ್ಳಿ ಗ್ರಾಮ ಪಂಚಾಯತ್ ಸ್ಪಷ್ಟನೆ ನೀಡಿದೆ.
ಬಿಗ್ ಬಾಸ್ ಕಾರ್ಯಕ್ರಮ ಒಂದಿಲ್ಲೊಂದು ವಿವಾದದಲ್ಲಿ ಸಿಲುಕುತ್ತಲೇ ಇರುತ್ತದೆ. ಈ ಹಿಂದೆ ಬಿಗ್ ಬಾಸ್ ಮನೆಯಲ್ಲಿ ಸ್ವರ್ಗ-ನರಕ ಕಾನ್ಸ್ಪ್ಟ್ನಿಂದಾಗಿ ಮಹಿಳಾ ಸ್ಫರ್ಧಿಗಳ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂದು ವಕೀಲೆಯೊಬ್ಬರು ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಈಗ ಬಿಗ್ ಬಾಸ್ ವಾಣಿಜ್ಯ ಕಾರ್ಯಕ್ರಮಕ್ಕೆ ಅನುಮತಿ ನೀಡಿಲ್ಲ ಎಂದು ತಾಲೂಕು ಪಂಚಾಯಿತಿ ಮುಖ್ಯ ಅಧಿಕಾರಿಗಳಿಗೆ ಗ್ರಾಮ ಪಂಚಾಯಿತಿ ಪತ್ರ ಬರೆದಿದೆ.
ರಾಮೋಹಳ್ಳಿ ಗ್ರಾಮ ಪಂಚಾಯತ್ ನೀಡಿರುವ ಪತ್ರದಲ್ಲಿ, ಬೆಂಗಳೂರು ದಕ್ಷಿಣ ತಾಲೂಕು ರಾಮೋಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಳಿಗೊಂಡಹನಹಳ್ಳಿ ಗ್ರಾಮದ 128/1ರಲ್ಲಿ BIG BOSS ಎಂಬ ವಾಣಿಜ್ಯ ಕಾರ್ಯಕ್ರಮವನ್ನು ನಡೆಸುತ್ತಿರುವ ಬಗ್ಗೆ ಹಿಂಬರಹ ನೀಡಲು ಸೂಚಿಸಿದ್ದು, ಅದರಂತೆ ಈ ಬಗ್ಗೆ ಸೂಕ್ತ ವಿವರಗಳೊಂದಿಗೆ ದಾಖಲಾತಿಗಳೊಂದಿಗೆ ಪತ್ರಬರೆದು ತಿಳಿಸಲಾಗಿದೆ. ಮತ್ತು ಸಂಬಂಧಪಟ್ಟಂತವರಿಗೆ ನೋಟೀಸ್ ಸಹ ನೀಡಲಾಗಿದೆ. ಸದರಿ BIG BOSS ನಿಯೋಜಕರಿಂದ ಉತ್ತರ ಬರುವುದಿಲ್ಲ. ಮುಂದುವರೆದು ಸದರಿ BIG BOSS ಕಾರ್ಯಕ್ರಮ ನಡೆಸಲು ಪಂಚಾಯಿತಿಯಿಂದ ಯಾವುದೇ ಅನುಮತಿ ಪಡೆದಿರುವುದಿಲ್ಲ ಎಂದು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ : ವಿಜಯನಗರ : ಚಲಿಸುತ್ತಿದ್ದ ಸರ್ಕಾರಿ ಬಸ್ನಲ್ಲಿ ಹಗಲು ದರೋಡೆ – 9 ತೊಲೆ ಚಿನ್ನ ಕಳವು..!