Download Our App

Follow us

Home » ಸಿನಿಮಾ » ಬಿಗ್​ ಬಾಸ್ ಸ್ಪರ್ಧಿ ತುಕಾಲಿ ಸಂತೋಷ್ ಎರಡು ವಾರದ ಹಿಂದಷ್ಟೇ ಖರೀದಿಸಿದ್ದ ಹೊಸ ಕಾರು ಅಪಘಾತ – ಓರ್ವನಿಗೆ ಗಾಯ..!

ಬಿಗ್​ ಬಾಸ್ ಸ್ಪರ್ಧಿ ತುಕಾಲಿ ಸಂತೋಷ್ ಎರಡು ವಾರದ ಹಿಂದಷ್ಟೇ ಖರೀದಿಸಿದ್ದ ಹೊಸ ಕಾರು ಅಪಘಾತ – ಓರ್ವನಿಗೆ ಗಾಯ..!

ತುಮಕೂರು : ಕನ್ನಡ ಬಿಗ್​ ಬಾಸ್​ 10ನೇ ಆವೃತ್ತಿಯ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದ ತುಕಾಲಿ ಸಂತೋಷ್ ಅವರ ಹೊಸ ಕಾರು ಅಪಘಾತಕ್ಕೀಡಾಗಿದೆ. ಜಿಲ್ಲೆಯ ಕುಣಿಗಲ್ ತಾಲೂಕಿನ ಹೊನ್ನೇನಹಳ್ಳಿ ಬಳಿ ಈ ಘಟನೆ ನಡೆದಿದೆ. ತುಮಕೂರು ಕಡೆಯಿಂದ ಕುಣಿಗಲ್ ಮಾರ್ಗವಾಗಿ ಹೊಳೆನರಸೀಪುರ ಕಡೆ ತುಕಾಲಿ ಸಂತೋಷ್​ ಅವರು ಹೋಗುತ್ತಿದ್ದರು.

ಅದೇ ವೇಳೆ ಕುಣಿಗಲ್​ನಿಂದ ಕುರುಡಿಹಳ್ಳಿಗೆ ಆಟೋ ಬರುತ್ತಿತ್ತು. ತುಕಾಲಿ ಸಂತೋಷ್​ ಅವರ ಕಾರಿನ ಬಲಗಡೆಗೆ ಆಟೋ ಡಿಕ್ಕಿ ಹೊಡೆದಿದೆ. ಆಟೋ ಚಾಲಕನನ್ನು ಜಗದೀಶ್​ ಎಂದು ಗುರುತಿಸಲಾಗಿದೆ. ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.

ಆಟೋ ಚಾಲಕ ಜಗದೀಶ್​ ಮದ್ಯ ಸೇವಿಸಿದ್ದ ಎನ್ನಲಾಗಿದೆ. ಗಾಯಗೊಂಡಿರುವ ಜಗದೀಶ್​ಗೆ ಕುಣಿಗಲ್​ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರು ಅಪಘಾತದ ಸುದ್ದಿಯಿಂದ ಅವರ ಅಭಿಮಾನಿಗಳಿಗೆ ಬೇಸರ ಆಗಿದೆ.

ಹಾಸ್ಯ ನಟನಾಗಿ ತುಕಾಲಿ ಸಂತೋಷ್ ಅವರು ಗುರುತಿಸಿಕೊಂಡಿದ್ದಾರೆ. ‘ಬಿಗ್​ ಬಾಸ್ ಕನ್ನಡ ಸೀಸನ್​ 10’ ಮಾತ್ರವಲ್ಲದೇ ಇನ್ನೂ ಹಲವು ರಿಯಾಲಿಟಿ ಶೋಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಕೆಲವು ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. ಬಿಗ್​ ಬಾಸ್​ನಿಂದ ಸಿಕ್ಕ ಸಂಭಾವನೆಯಲ್ಲಿ ಕಿಯಾ ಕಾರು ಖರೀದಿ ಮಾಡಿದ್ದರು. ಪತ್ನಿ ಜೊತೆ ಶೋ ರೂಮ್​ಗೆ ತೆರಳಿ ಕಾರು ಖರೀದಿಸಿ ತುಕಾಲಿ ಸಂತೋಷ್ ಅವರು ಖುಷಿಪಟ್ಟಿದ್ದರು. ಕೆಲವೇ ದಿನಗಳ ಹಿಂದೆ ಅವರ ಹೊಸ ಕಾರಿನ ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದವು.

ಇದನ್ನೂ ಓದಿ : ಮಹಾರಾಜ ಯದುವೀರರಿಗೆ ಬಿಜೆಪಿ ಟಿಕೆಟ್ ಸಿಕ್ಕಿದ್ದು ಹೇಗೆ ? – ಬಿಟಿವಿಯಲ್ಲಿ ಸ್ಪೋಟಕ ರಹಸ್ಯ

Leave a Comment

DG Ad

RELATED LATEST NEWS

Top Headlines

ರೀಲ್ಸ್​​ಗಾಗಿ ಬಿಳಿ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು ಶವದಂತೆ ರಸ್ತೆಯಲ್ಲಿ ಮಲಗಿದ್ದ ವ್ಯಕ್ತಿ – ವಿಡಿಯೋ ವೈರಲ್..!

ಯುವಜನತೆ ರೀಲ್ಸ್​ ಹುಚ್ಚಿನಿಂದ ಅದೇನೋ ಸಾಹಸಗಳನ್ನು ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿರೋದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಯುವಕ ರೀಲ್ಸ್​​ಗಾಗಿ ಬಿಳಿಯ ಬಟ್ಟೆ ಹೊದ್ದು, ಮೂಗಿನೊಳಗೆ ಹತ್ತಿ ಇಟ್ಟು

Live Cricket

Add Your Heading Text Here